Advertisement
ಇಲ್ಲಿನ ಸಾಮರ್ಥಯ ಸೌಧದಲ್ಲಿ ಶನಿವಾರ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮೆಸ್ಕಾಂ ಇಲಾಖೆಯ ಸರದಿ ಬಂದಾಗ ವಿಷಯ ಪ್ರಸ್ತಾಪಿಸಿದ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಎಂ.ನಾಗೇಶ್, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿದ ಫಲಾನುಭವಿಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ನಿಯಮವಿದ್ದರೂ ಕೆಲವು ಗುತ್ತಿಗೆದಾರರು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿದರು. ಇದಕ್ಕೆ ಅಧ್ಯಕ್ಷೆ ಜಯಶ್ರೀಮೋಹನ್ ಸಹ ಧ್ವನಿಗೂಡಿಸಿದರು.
Related Articles
Advertisement
ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಎಲ್ಲಾ ರೈತರು ಅರ್ಜಿ ಕೊಡಲೇಬೇಕೆಂಬ ನಿಯಮವಿಲ್ಲ. ಗ್ರಾಮದ ವ್ಯಾಪ್ತಿಯಲ್ಲಿ ಬೆಳೆ ನಾಶವಾದ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ವರದಿ ನೀಡಿದರೂ ಸಹ ಪರಿಹಾರ ಬರುತ್ತದೆ. ಕಳೆದ ಬಾರಿ ಅರ್ಜಿಸಲ್ಲಿಸದೆ ಇರುವ ರೈತರಿಗೂ ಪರಿಹಾರ ಬಂದಿದೆ. ಕಳೆದ ಬಾರಿ 1,800 ಹೆಕ್ಟೆರ್ ಪ್ರದೇಶದಲ್ಲಿ ಬೆಳೆಹಾನಿಯಾಗಿರುವ ಬಗ್ಗೆ ವರದಿ ನೀಡಲಾಗಿತ್ತು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.
ನೆರೆಪರಿಹಾರದಲ್ಲಿ ಸಂತ್ರಸ್ತರಿಗೆ ಒಂದು ಕೋಮಿನವರಿಗೆ ಹೆಚ್ಚು ಪರಿಹಾರ ಬರುವ ರೀತಿಯಲ್ಲಿ ಇನ್ನೊಂದು ಕೋಮಿನವರಿಗೆ ಕಡಿಮೆ ಪರಿಹಾರ ಬರುವ ರೀತಿಯಲ್ಲಿ ಕಂದಾಯ ಇಲಾಖೆಯ ಸಿಬ್ಬಂ ಯೊಬ್ಬರು ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿದ್ದಾರೆ. ಇದರಿಂದ ಒಂದು ಕೋಮಿನ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜು ಆರೋಪಿಸಿದರು. ಸಂತ್ರಸ್ತರಿಗೆ ಪರಿಹಾರ ನೀಡಿರುವ ಪಟ್ಟಿ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯೊಬ್ಬರು 94ಸಿ ಅಡಿ ಅರ್ಜಿ ಸಲ್ಲಿಸಿ ಒಂದುವರೆ ವರ್ಷ ಕಳೆದಿದ್ದರೂ ಹಕ್ಕು ಪತ್ರ ನೀಡಿಲ್ಲ. ಅಲ್ಲದೇ, ಅರ್ಜಿ ಸಹ ಕಂದಾಯ ಇಲಾಖೆಯಲ್ಲಿ ಲಭ್ಯವಿಲ್ಲ. ಇದರ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಉಪಾಧ್ಯಕ್ಷರು ಆಗ್ರಹಿಸಿದರು.ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ್ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್ .ನಾಗೇಶ್, ಇಒ ಎಸ್.ನಯನ ಇತರರಿದ್ದರು.