Advertisement
ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕೆಎಫ್‌ಡಿ ತಡೆಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜನರು ಈ ಸಮಯದಲ್ಲಿ ಸೊಪ್ಪು, ದರುಗುಗಳನ್ನು ತರಲು ಕಾಡಿಗೆ ಹೋಗುವುದು ಜಾಸ್ತಿ. ಆದ್ದರಿಂದ ಇಲಾಖೆಯಲ್ಲಿ ಸಾಕಾಗುವಷ್ಟು ಪ್ರಮಾಣದಲ್ಲಿ ಡಿಎಂಪಿ ಎಣ್ಣೆ ಹಾಗೂ ಚುಚ್ಚು ಮದ್ದುಗಳು ಲಭ್ಯವಿದ್ದು, ಶಂಕಿತ ಪ್ರದೇಶಗಳಲ್ಲಿ ಕೆಎಫ್‌ಡಿ ತೀವ್ರತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಪ್ರತಿ ಮನೆಗಳಿಗೂ ತೆರಳಿ ಚುಚ್ಚುಮದ್ದುಗಳನ್ನು, ಡಿಎಂಪಿ ಎಣ್ಣೆ ವಿತರಿಸಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಆದರೆ ಇದು ಇನ್ನೂ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿ ಕಾರಿಗಳು, ಜನಪ್ರತಿನಿಧಿಗಳ ಸಹಕಾರ ಬೇಕು. ಜನರಲ್ಲಿ ಮೊದಲು ಮಂಗನ ಕಾಯಿಲೆ ಬಗ್ಗೆ ಅರಿವನ್ನು ಮೂಡಿಸಬೇಕು.
Related Articles
Advertisement
ಡಾ.ಎಲ್ದೋಸ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ, 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಎಂಬಲ್ಲಿ ಮಂಗಗಳು ಒಟ್ಟಾಗಿ ಸಾವನ್ನಪ್ಪಿದ್ದವು. ಒಂದು ಮಂಗ ಸತ್ತಿದ್ದರೆ ಸೋಂಕು ಪತ್ತೆ ಹಚ್ಚುತ್ತಿರಲಿಲ್ಲ. ಆದರೆ ನೂರಾರು ಮಂಗಳು ಸಾಮೂಹಿಕವಾಗಿ ಮರಣ ಹೊಂದಿದ್ದರಿಂದ ಈ ಬಗ್ಗೆ ಸಂಶೋಧನೆ ನಡೆಸಿದಾಗ ಮಂಗನ ಕಾಯಿಲೆ ಪತ್ತೆಯಾಗಿದೆ. ಅದಕ್ಕಾಗಿ ಈ ಸೋಂಕಿಗೆ ಕ್ಯಾಸನೂರು ಕಾಡಿನ ರೋಗ ಎಂದೇ ಹೆಸರಿಡಲಾಗಿದೆ.
ತಾಲೂಕಿಗೆ ಈಗಾಗಲೇ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಇನ್ನು ಯಾರಿಗೂ ಹರಡದಂಎತ ನಾವು ಎಚ್ಚರವಹಿಸಬೇಕು ಎಂದರು. ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಯ ರೀತಿಯಲ್ಲಿ ಪಶು ಇಲಾಖೆಯೂ ಕೂಡ ಅಗತ್ಯ ಕ್ರಮಗಳ ಬಗ್ಗೆ ಕಾರ್ಯಾಚರಣೆ ಮಾಡುತ್ತಿದೆ. ಜಾನುವಾರುಗಳ ಮೈ ಮೇಲಿನ ಹಾಗೂ ಒಣಗಿದ ದರ್ಗು, ಸೊಪ್ಪುಗಳ ಉಣ್ಣೆಯಿಂದ ಈ ಸೋಂಕು ಹರುಡುವುದರಿಂದ ಜಾನುವಾರುಗಳು ಕಾಡಿಗೆ ಹೋಗಿ ಬಂದ ಕೂಡಲೇ ಸೈಪರ್ ಮೆಥ್ರಿನ್ ಹಾಗೂ ಡೆಲ್ಟಾ ಮೆಥ್ರಿನ್ ಎಂಬ ಔಷಧ ಇಲಾಖೆಯಲ್ಲಿ ಸಾಕಾಗುವಷ್ಟು ದಾಸ್ತಾನು ಇರಿಸಲಾಗಿದ್ದು, ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕಂದಾಯ ಇಲಾಖೆ ಗ್ರಾಮಲೆಕ್ಕಿಗರಿಗೆ, ಕಂದಾಯ ನಿರೀಕ್ಷಕರಿಗೂ ಈ ಸೋಂಕಿನ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಕರಪತ್ರ ಹಂಚಲು ಸೂಚಿಸಲಾಗಿದೆ ಎಂದರು. ತಾಪಂ ಇಒ ಎಸ್ .ನಯನ, ವೈದ್ಯಾಧಿಕಾರಿಗಳಾದ ಡಾ.ವಿನಯ್, ಡಾ| ನರಸಿಂಹಮೂರ್ತಿ, ಡಾ.ಸುರೇಶ್, ಉಪ ಅರಣ್ಯ ವಲಯಾ ಧಿಕಾರಿ ಗೌಸ್ ಹಿಯುದ್ದೀನ್, ಪ್ರಭಾರ ಬಿಇಒ ಧನಂಜಯ ಮೇದೂರು,ಆರೋಗ್ಯ ಹಿರಿಯ ನಿರೀಕ್ಷಕರಾದ ಪಿ.ಪ್ರಬಾಕರ್, ಬೇಬಿ, ವೈ.ಲಲಿತಾ ಮತ್ತಿತರರು ಇದ್ದರು. ಇದ್ದರು.