Advertisement
ಕಳೆದ 10-12 ವರ್ಷಗಳಿಂದ ರಸ್ತೆಯಿಲ್ಲದೆ ಬಡಾವಣೆ ನಿವಾಸಿಗಳು ಸ್ವಂತ ಖರ್ಚಿನಲ್ಲಿ ಮಣ್ಣು ಹಾಕಿಸಿಕೊಂಡು ಬದುಕುತ್ತಿದ್ದಾರೆ. ಮೇಲಾಗಿ ಇದು ಮಾಜಿ ಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರ ಎಂಬುದೇ ವಿಪರ್ಯಾಸ!
Related Articles
Advertisement
ಜಲಮಂಡಳಿ ಅಗೆತ: ಆರೇಳು ವರ್ಷಗಳ ಹಿಂದೆ ಅಂದಿನ ಪಾಲಿಕೆ ಸದಸ್ಯೆ ರತ್ನಾ ಪಾಟೀಲ ಅವಧಿಯಲ್ಲಿ ರಸ್ತೆಗಳು ಒಂದಿಷ್ಟು ಖಡಿ ಹಾಗೂ ಮಣ್ಣು ಕಂಡಿದ್ದವು. ಆದರೆ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ನಿಮಿತ್ತ ಅಗೆದ ರಸ್ತೆ ಐದಾರು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಈ ಕುರಿತು ಸ್ಥಳೀಯರು ಸಂಬಂಧಿಸಿದ ಇಲಾಖೆ ಪ್ರಶ್ನಿಸಿದರೆ ರಸ್ತೆ ದುರಸ್ತಿಗೆ ತಗಲುವ ವೆಚ್ಚವನ್ನು ಪಾಲಿಕೆಗೆ ಭರಿಸಲಾಗಿದೆ. ಅವರು ರಸ್ತೆ ನಿರ್ಮಿಸಲಿದ್ದಾರೆ ಎನ್ನುವ ಸಬೂಬು ದೊರೆಯುತ್ತಿದ್ದು, ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಗೆ ಡಾಂಬರ್ ಅಥವಾ ಜಲ್ಲಿ ಕಲ್ಲು ಕೂಡ ಕಾಣುತ್ತಿಲ್ಲ. ಶಾಸಕರಿಗೆ, ಅಧಿಕಾರಿಗಳಿಗೆ ಬೇಡಿಕೆಯ ಮನವಿಗಳನ್ನು ಸಲ್ಲಿಸಿ ಜನ ರೋಸಿ ಹೋಗಿದ್ದಾರೆ. ನೃಪತುಂಗ ಬಡಾವಣೆ ನಗರದ ಹೊರಗಿರುವ ಕಾರಣಕ್ಕೆ ಇದನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆ ಸ್ಥಳೀಯರಲ್ಲಿ ಮೂಡಿದೆ.
ಸ್ವಂತ ಹಣದಲ್ಲಿ ಮಣ್ಣುಭರವಸೆಗಳಿಂದ ಭ್ರಮನಿರಸನಗೊಂಡ ಸ್ಥಳೀಯರು ಆಗಾಗ ಹಣ ಸಂಗ್ರಹಿಸಿ ರಸ್ತೆಗೆ ಮಣ್ಣು ಹಾಕಿಸಿ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಅಕ್ಷರಶಃ ಕೆಸರುಗದ್ದೆಯಾಗಿ ನಿರ್ಮಾಣವಾಗುತ್ತಿದ್ದು, ಶಾಲಾ ವಾಹನ ಸ್ಥಗಿತಗೊಂಡಿತ್ತು. ಸಣ್ಣ ಪುಟ್ಟ ಮಕ್ಕಳು ನಿರ್ಭಿಡೆಯಿಂದ ರಸ್ತೆಯಲ್ಲಿ ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು, ಹಿಂದಿನ ಹಾಗೂ ಇಂದಿನ ಪಾಲಿಕೆ ಸದಸ್ಯರು ಬೇರೆ ಬಡಾವಣೆಯಲ್ಲಿರುವ ಕಾರಣ ಇಲ್ಲಿನ ಸಮಸ್ಯೆ ಅವರಿಗೆ ಅರ್ಥವಾಗುತ್ತಿಲ್ಲ. ಆರಿಸಿ ಕಳುಹಿಸಿದ ಜನಪ್ರನಿಧಿಗಳು ಒಮ್ಮೆಯಾದರೂ ನಮ್ಮ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಅರಿಯಲಿ. ಅಂದಾಗ ಇಲ್ಲಿನ ಜನರು ಅನುಭವಿಸುತ್ತಿರುವ
ಸಂಕಷ್ಟ ಅವರ ಗಮನಕ್ಕೆ ಬರಲಿದೆ.
ಅಶೋಕ ನಿಕ್ಕಂ,
ನೃಪತುಂಗ ಬಡಾವಣೆ ನಿವಾಸಿ ಪಕ್ಷದ ಇಬ್ಬರು ನಾಯಕರ ಶ್ರಮದಿಂದ ನೃಪತುಂಗ ನಗರದ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ರಸ್ತೆಗಾಗಿಯೇ ಒಂದು ಕೋಟಿ ರೂ. ಬೇಡಿಕೆ ಸಲ್ಲಿಸಿದ್ದೆವು. 75 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ. ಮಳೆಗಾಲದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ವಾರ್ಡ್ ನಿಧಿಯಲ್ಲಿ ತಾತ್ಕಾಲಿಕವಾಗಿ ಈ ರಸ್ತೆ ಸರಿಪಡಿಸಲು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಶೀಘ್ರದಲ್ಲಿ ರಸ್ತೆ ಸಮಸ್ಯೆ ಬಗೆಹರಿಸಲಾಗುವುದು.
ಸೀಮಾ ಮೊಗಲಿಶೆಟ್ಟರ, ಪಾಲಿಕೆ ಸದಸ್ಯೆ ಹು-ಧಾ ಹೆಸರಿಗಷ್ಟೇ ಸ್ಮಾರ್ಟ್‌ಸಿಟಿ ಆಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಕಾಂಕ್ರಿಟ್, ಡಾಂಬರ್ ಆದರೆ ಅಭಿವೃದ್ಧಿಯಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಇರುವಾಗ ಸಣ್ಣ ಕೆಲಸ ದೊಡ್ಡದಲ್ಲ. ನಾನು ಅಧಿಕಾರದಲ್ಲಿದ್ದಾಗ ಮೆಟಲಿಂಗ್ ರಸ್ತೆ ಮಾಡಿಸಿದ್ದು ಬಿಟ್ಟರೆ ಡಾಂಬರ್ ಕಂಡಿಲ್ಲ. ಯಾವ ಸೌಲಭ್ಯಗಳು ಇಲ್ಲದ ಪ್ರದೇಶಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದೇವೆ. ಇಂದಿನ ಸರಕಾರ ಈ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷಿಸಿದೆ.
ಎಂ.ಎಸ್. ಪಾಟೀಲ,
ಪಾಲಿಕೆ ಮಾಜಿ ಸದಸ್ಯ *ಹೇಮರಡ್ಡಿ ಸೈದಾಪುರ