Advertisement
ಶನಿವಾರ (ಆಗಸ್ಟ್ 24) ಬೆಳಿಗ್ಗೆ ಸುಮಾರು ಏಳು ಗಂಟೆಯ ವೇಳೆಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಬಂಧೂಕು ಹಿಡಿದುಕೊಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಈ ವೇಳೆ ಮನೆಮಂದಿಯನ್ನು ಬೆದರಿಸಿ ಬಳಿಕ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಈ ವೇಳೆ ವ್ಯಕ್ತಿಯ ಪತ್ನಿ ಹಾಗೂ ಮಗ ಕೈಮುಗಿದು ಗುಂಡು ಹಾರಿಸದಂತೆ ಬೇಡಿಕೊಂಡಿದ್ದಾರೆ ಆದರೂ ಕೇಳದ ದುಷ್ಕರ್ಮಿಗಳು ಮತ್ತೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ ಆದರೆ ಅದೃಷ್ಟವಶಾತ್ ಬಂದೂಕಿನಿಂದ ಗುಂಡು ಹಾರಲಿಲ್ಲ ಎನ್ನಲಾಗಿದೆ.
ದುಷ್ಕರ್ಮಿಗಳ ಗುಂಡಿನ ದಾಳಿಗೆ ಸುಖಚೈನ್ ಸಿಂಗ್ ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಅಮೆರಿಕದಲ್ಲಿ ನೆಲೆಸಿದ್ದ ವ್ಯಕ್ತಿ: ಸುಖಚೈನ್ ಸಿಂಗ್ ಅವರು ಅಮೆರಿಕದಲ್ಲಿ ನೆಲೆಸಿದ್ದು ಸುಮಾರು 20 ದಿನಗಳ ಹಿಂದೆಯಷ್ಟೇ ಅಮೃತಸರಕ್ಕೆ ಬಂದಿದ್ದರು, ಜೊತೆಗೆ ಇತ್ತೀಚೆಗಷ್ಟೇ 1.5 ಕೋಟಿ ಮೌಲ್ಯದ ಐಷಾರಾಮಿ ಕಾರೊಂದನ್ನು ಖರೀದಿಸಿದ್ದರು ಎನ್ನಲಾಗಿದೆ. ದಾಳಿಯ ಹಿಂದೆ ಮೊದಲ ಪತ್ನಿಯ ಕುಟುಂಬದ ಕೈವಾಡ ಶಂಕೆ:
ದಾಳಿಗೆ ಸಂಬಂಧಿಸಿ ಸಿಂಗ್ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಅಲ್ಲದೆ ದಾಳಿಯ ಹಿಂದೆ ಸಿಂಗ್ ಅವರ ಮೊದಲ ಪತ್ನಿಯ ಕುಟುಂಬದ ಕೈವಾಡವಿದೆ ಎಂದು ಅವರ ತಾಯಿ ದೂರಿದ್ದಾರೆ. ಸುಖಚೈನ್ ಸಿಂಗ್ ಅವರ ತಾಯಿಯ ದೂರಿನ ಮೇರೆಗೆ ಸಿಂಗ್ ಅವರ ಮೊದಲ ಪತ್ನಿಯ ಕುಟುಂಬದ ಐವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.