Advertisement

ಗ್ರಾಮ ಪಂಚಾಯತಿಯಿಂದ ಮೂರು ಲಕ್ಷ ರೂಪಾಯಿ ಅನುದಾನ : ಕ್ರೀಡಾ ಚಟುವಟಿಕೆಗೆ ಚಾಲನೆ

07:54 PM Feb 23, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ದೊಡ್ಡಸಾಗ್ಗೆರೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ಆಟದ ಮೈದಾನ ಅಭಿವೃದ್ಧಿ ಮಾಡಲಾಗಿದೆ.

Advertisement

1930ರಲ್ಲಿ ಶಾಲೆ ಆರಂಭಿಸಿದ್ದು , ಶತಮಾನೋತ್ಸವದತ್ತ ಸಾಗುತ್ತಿರುವ, ಈ ಶಾಲೆಯಲ್ಲಿ ಸದ್ಯ 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಸ್ವಂತ ನಿವೇಶನವಿದ್ದರೂ ಅಲ್ಲಿ ಗಿಡ ಗಂಟಿಗಳು ಬೆಳೆದಿದ್ದು,ಸುಸಜ್ಜಿತವಾದ ಆಟದ ಮೈದಾನ ಇಲ್ಲದಾಗಿತ್ತು. ಇದೀಗ ನರೇಗಾ ನೆರವಿನಿಂದ ಸಾಕಾರಗೊಂಡಿದೆ.

ಶಾಲೆಯ ಮುಖ್ಯ ಶಿಕ್ಷಕ ರಂಗ ಅರಸಯ್ಯ ಅವರು ಆಟದ ಮೈದಾನದ ಸಮಸ್ಯೆಯ ಬಗ್ಗೆ ಗ್ರಾಪಂ ಗಮನಕ್ಕೆ ತಂದಾಗ ಮೂರು ಲಕ್ಷ ರೂ ವೆಚ್ಚದಲ್ಲಿ ಸುಮಾರು 150 ಮೀಟರ್ ರನ್ನಿಂಗ್ ಟ್ರ್ಯಾಕ್,ಖೋ ಖೋ, ವಾಲಿಬಾಲ್ ಕ್ರೀಡಾಂಗಣ ಹಾಗೂ ಕಬಡ್ಡಿ ಮೈದಾನವಿರುವ ಸುಸಜ್ಜಿತ ಸುಂದರ ಆಟದ ಮೈದಾನ ಅಭಿವೃದ್ಧಿ ಮಾಡಲಾಗಿದೆ. ದೊಡ್ಡಸಾಗ್ಗೆರೆ ಕೊರಟಗೆರೆ ತಾಲ್ಲೂಕಿನ ಗಡಿ ಭಾಗದಲ್ಲಿರುವುದರಿಂದ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನೂರಾರು ಮಕ್ಕಳಿಗೆ ಇದರ ಉಪಯೋಗವಾಗಲಿದೆ. ಸುತ್ತಮುತ್ತಲಿನ 30 ಹಳ್ಳಿಗಳ ಮಕ್ಕಳು ಈ ಆಟದ ಮೈದಾನದ ಪ್ರಯೋಜನ ಪಡೆಯುತ್ತಿದ್ದಾರೆ.

ಬ್ಯಾಸ್ಕೆಟ್ ಬಾಲ್ ಗೂ ಅವಕಾಶವಿರಲಿ
ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಗೊಂಡ ಈ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಗೊಂಡಿರುವ ನೂತನ ಬೃಹತ್ ಆಟದ ಮೈದಾನ ಆಟಗಾರರ ಗಮನ ಸೆಳೆಯುತ್ತಿದೆ. ಆಟದ ಮೈದಾನದಲ್ಲಿ ನಿರ್ಮಿಸಿರುವ ರನ್ನಿಂಗ್ ಟ್ರ್ಯಾಕ್, ಖೋಖೋ ಗ್ರೌಂಡ್,ವಾಲಿಬಾಲ್ ಕೋರ್ಟ್ ಹಾಗೂ ಕಬಡ್ಡಿ ಕೋರ್ಟ್ ನೊಂದಿಗೆ ಬ್ಯಾಸ್ಕೆಟ್ ವಾಲ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಲು ಅವಕಾಶ ಕಲ್ಪಿಸಿ ಕೊಟ್ಟರೆ ಮತ್ತಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವಿದೆ.

– ರಾಕೇಶ್ ದೈಹಿಕ ಶಿಕ್ಷಕ.

Advertisement

ದೊಡ್ಡಸಾಗ್ಗೆರೆಗೆ ಕೊರಟಗೆರೆ ದೊಡ್ಡಬಳ್ಳಾಪುರದಿಂದ ಉತ್ತಮ ಬಸ್ ಸೌಲಭ್ಯವಿದೆ. ಸಾವಿರಾರು ಮಕ್ಕಳು ಆಟದ ಮೈದಾನ ಬಳಸಿಕೊಳ್ಳುವ ಮೂಲಕ ಕ್ರೀಡಾಬ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಹೋಬಳಿ ಮಟ್ಟದಲ್ಲಿಯೇ ಉತ್ತಮ ಹಾಗೂ ವಿಶಾಲ ಆಟದ ಮೈದಾನ ಹೊಂದಿರುವ ಈ ಶಾಲೆಯ ಬಗ್ಗೆ ಹೆಮ್ಮಯಿದೆ.

– ಸಿ.ಆರ್ .ಉಮೇಶ್ ಪಿಡಿಒ. ದೊಡ್ಡಸಾಗ್ಗೆರೆ.

ನಮ್ಮ ಗ್ರಾಪಂ ತಾಲ್ಲೂಕಿನ ಗಡಿಯ ಭಾಗದಲ್ಲಿದ್ದೂ, ಈ ಗ್ರಾಮದಲ್ಲಿ ,ಇಲ್ಲಿನ ಮಕ್ಕಳಿಗೆ ಉತ್ತಮವಾದ ದೈಹಿಕ ಹಾಗೂ ಮಾನಸಿಕ ಸಧೃಡತೆಗೆ ಕ್ರೀಡೆ ಬಹಳ ಸಹಕಾರಿಯಾಗಿದೆ . ಅದಕ್ಕಾಗಿ ನಮ್ಮ ಗ್ರಾಪಂನಿಂದ ಉತ್ತಮ ಸೌಲಭ್ಯ ಕಲ್ಲಿಸಿಕೊಡಬೇಕೆಂಬ ಆಸೆಯಿದೆ.ನೂರಾರು ಮಕ್ಕಳಿಗೆ ಆಟದ ಮೈದಾನ ಅನುಕೂಲವಾಗಲಿದೆ.ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಮತ್ತಷ್ಟು ಆಭಿವೃದ್ದಿ ಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next