ಕಾಲಿಂಪಾಂಗ್ : ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ) ಗೂರ್ಖಾಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ : ಟಿಎಂಸಿ ಪಕ್ಷದವರು ಎಸ್ ಸಿ ಸಮುದಾಯದವರನ್ನು ಭಿಕ್ಷುಕರೆಂದು ನಿಂದಿಸಿದ್ದಾರೆ : ಪ್ರಧಾನಿ ಕಿಡಿ
ಪಶ್ಚಿಮ ಬಂಗಾಳದ ಕಾಲಿಂಪಾಂಗ್ ನಲ್ಲಿ ನಡೆದ ರೋಡ್ ಶೋ ನಂತರ ಮಾತನಾಡಿದ ಅಮಿತ್ ಶಾ, ಪಶ್ಚಿಮ ಬಂಗಾಳದ ಆಡಳಿತ ಪಕ್ಷ ಟಿಎಂಸಿ ಜನರಲ್ಲಿ ಭಯ ಹುಟ್ಟಿಸಲು ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವವರೆಗೂ ಯಾವುದೇ ಗೂರ್ಖಾಗೆ ತೊಂದರೆಯಾಗುವುದಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಇದನ್ನೂ ಓದಿ : ಸಹಕಾರಿ ಸಂಘಗಳ ಕಾರ್ಯದರ್ಶಿಗಳ ನಿಯಂತ್ರಣಕ್ಕೆ ಹೊಸ ಕಾಯ್ದೆ : ಸಚಿವ ಸೋಮಶೇಖರ್
ರಾಜಕೀಯ ಲಾಭಕ್ಕಾಗಿ ಅವರಲ್ಲಿ ಭಯ ಹುಟ್ಟಿಸುವ ಸಲುವಾಗಿ ಗೂರ್ಖಾಗಳ ಮೇಲೆ ಎನ್ ಆರ್ ಸಿ ಗೆ ಒಳಗಾಗುವ ಸಾಧ್ಯತೆಯ ಬಗ್ಗೆ
ಟಿಎಂಸಿ ಸುಳ್ಳು ಹೇಳುತ್ತಿದೆ, ”ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಕುರಾನ್ ನ 26 ಸೂಕ್ತ ರದ್ದುಗೊಳಿಸಬೇಕೆಂಬ ಅರ್ಜಿ ವಜಾಗೊಳಿಸಿ,50 ಸಾವಿರ ದಂಡ ವಿಧಿಸಿದ ಸುಪ್ರೀಂ