Advertisement
ಈಗಾಗಲೇ ಅಸ್ಸಾಂನಲ್ಲಿ ನಡೆಸಲಾಗಿ ರುವ ಎನ್‌ಆರ್‌ಸಿ ಬಗ್ಗೆ ಸ್ವತಃ ಬಿಜೆಪಿಯೇ ವಿರೋಧ ವ್ಯಕ್ತಪಡಿಸಿದೆ. ಜತೆಗೆ ಅಸ್ಸಾಂ ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಅವರು, ರಾಜ್ಯದಲ್ಲಿ ಮತ್ತೂಮ್ಮೆ ಎನ್‌ಆರ್‌ಸಿಯಾಗಲಿ ಎಂದು ಆಗ್ರಹಿಸಿದ್ದಾರೆ. ಯಾರನ್ನೂ ಹೊರಗೆ ಹಾಕುವುದಿಲ್ಲ ಅಸ್ಸಾಂನಲ್ಲಿ 19 ಲಕ್ಷ ಜನರು ಪರಿಷ್ಕೃತ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿರುವುದನ್ನು ಪ್ರಸ್ತಾವಿಸಿದ ಅವರು, ಪಟ್ಟಿಯಿಂದ ಹೊರಗುಳಿದವರು ತಾಲೂಕು ಮಟ್ಟದಲ್ಲಿ ಸ್ಥಾಪಿಸಲಾಗಿರುವ ನ್ಯಾಯಪೀಠ ಗಳಿಗೆ ತಮ್ಮ ಅಹವಾಲು ಸಲ್ಲಿಸಬಹುದು. ಕಾನೂನು ಹೋರಾಟ ನಡೆಸಲು ಹಣವಿಲ್ಲ ದವರಿಗೆ ಅಸ್ಸಾಂ ಸರಕಾರವೇ ಧನ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ವಕೀಲರಿಗೆ ತಗಲುವ ಖರ್ಚನ್ನೂ ಅಸ್ಸಾಂ ಸರಕಾರವೇ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಇಡೀ ರಾಷ್ಟ್ರದಲ್ಲೇ ಎನ್‌ಆರ್‌ಸಿ ವಿಸ್ತರಣೆ ಯಾದರೂ ಪಶ್ಚಿಮ ಬಂಗಾಲದಲ್ಲಿ ಮಾತ್ರ
ಅದನ್ನು ಜಾರಿಗೊಳಿಸಲು ಅವಕಾಶ ನೀಡು ವುದಿಲ್ಲ ಎಂದು ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಪುನರುತ್ಛರಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, “ಪಶ್ಚಿಮ ಬಂಗಾಲದಲ್ಲಿ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರಕಾರ ಬೆಂಬಲಿಸುವುದಿಲ್ಲ. ಎನ್‌ಆರ್‌ಸಿ ಜಾರಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದರು. ಈ ಹಿಂದೆಯೂ ಎನ್‌ಆರ್‌ಸಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಯತ್ನ
ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಲಾಗುವುದು ಎಂದು ಅಮಿತ್ ಶಾ ಸದನಕ್ಕೆ ಹೇಳಿದರು. ಈ ಮಸೂದೆಯ ಉದ್ದೇಶ, ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ವಲಸೆ ಬಂದಿರುವ ಮುಸ್ಲಿಮೇತರ ಅಂದರೆ ಹಿಂದೂಗಳು, ಬೌದ್ಧರು, ಜೈನರು, ಕ್ರೈಸ್ತರು, ಸಿಕ್ಖರು ಹಾಗೂ ಪಾರ್ಸಿಗಳಿಗೆ ಭಾರತದ ನಾಗರಿಕತ್ವ ನೀಡುವುದಾಗಿದೆ. ಸರಕಾರ ಇವರಿಗೆ ನಾಗರಿಕತ್ವ ನೀಡುವ ಆಶಯ ಹೊಂದಿದೆ. ಈ ಹಿಂದೆ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿತ್ತು. ಅನಂತರ ಆಯ್ಕೆ ಸಮಿತಿಗೂ ಹೋಗಿತ್ತು. ರಾಜ್ಯಸಭೆಯಲ್ಲಿ ಅದು ಬಿದ್ದು ಹೋಯಿತು. ಈಗ ಮತ್ತೂಮ್ಮೆ ಬಂದಿದೆ. ಆದರೆ ಇದಕ್ಕೂ ಎನ್‌ಆರ್‌ಸಿಗೂ ಸಂಬಂಧವಿಲ್ಲ ಎಂದರು.