Advertisement

ಎನ್‌ಆರ್‌ಸಿ ಪಟ್ಟಿ: ಸಿಜೆಐಗೆ ತರುಣ್‌ ಗೊಗೋಯ್‌ ಪತ್ರ

12:54 AM Sep 07, 2019 | Team Udayavani |

ಗುವಾಹಟಿ: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಅಂತಿಮ ಪಟ್ಟಿಯ ಹೊಣೆ ಹೊತ್ತುಕೊಂಡಿದ್ದ ಸಂಚಾಲಕ ಪ್ರತೀಕ್‌ ಹಜೇಲಾ ಅವರು ತಮ್ಮ ಕರ್ತವ್ಯವನ್ನು ದಕ್ಷತೆಯಿಂದ ಮಾಡಿಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ತರುಣ್‌ ಗೊಗೋಯ್‌ ಪತ್ರ ಬರೆದಿದ್ದಾರೆ. ಜತೆಗೆ, ಎನ್‌ಆರ್‌ಸಿ ಅಂತಿಮ ಪಟ್ಟಿಯ ವಿಚಾರದಲ್ಲಿ ಪುನರ್‌ಪರಿಶೀಲನೆಯ ಅಗತ್ಯವಿದೆ ಎಂದೂ ಅವರು ಕೋರಿದ್ದಾರೆ.

Advertisement

ಎನ್‌ಆರ್‌ಸಿ ಅಪ್‌ಡೇಟ್ ಪ್ರಕ್ರಿಯೆಯಲ್ಲಿ ಸುಮಾರು 50 ಸಾವಿರ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರೂ, ಅದಕ್ಕಾಗಿ 1,200 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದರೂ, ಹಜೇಲಾ ಅವರು ಸುಪ್ರೀಂ ಕೋರ್ಟ್‌ನ ಆದೇಶವನ್ನು ಸರಿಯಾಗಿ ಪಾಲಿಸಿಲ್ಲ. 19 ಲಕ್ಷ ಮಂದಿ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದು, ಅವರ ಭವಿಷ್ಯದ ಬಗ್ಗೆ ಪ್ರಶ್ನೆಯೆದ್ದಿದೆ. ಇವರೆಲ್ಲರೂ ಈಗ ವಿದೇಶಿಯರ ನ್ಯಾಯಾಧಿಕರಣದ ಮೊರೆ ಹೋಗಿ, ದೌರ್ಜನ್ಯ ಅನುಭವಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವವರ ಹೆಸರೂ ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲ. ಇದು ಹೇಗೆ ಸಾಧ್ಯ ಎಂದೂ ತರುಣ್‌ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next