ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್‌ಎಸ್‌ಎಫ್) ಮುಖ್ಯಸ್ಥರು 12 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರುವಂತಿಲ್ಲ ಎಂದು ಕ್ರೀಡಾ ಸಚಿವಾಲಯವು ನೀಡಿದ ನಿರ್ದೇಶನದಂತೆ 2021ರ ಸೆಪ್ಟಂಬರ್‌ನಲ್ಲಿ ಎನ್‌ಆರ್‌ಎಐ ಅಧ್ಯಕ್ಷರಾಗಿ ಮರು ಆಯ್ಕೆಯಾದ 55 ವರ್ಷದ ರಣೀಂದರ್ ಸಿಂಗ್ ಅವರು ರಜೆಯಲ್ಲಿ ತೆರಳಿದರು.
Advertisement
ರಣೀಂದರ್ ಸಿಂಗ್ ಅವರು ಅಧ್ಯಕ್ಷರಾಗಿ 2022ರ ಡಿಸೆಂಬರ್‌ಗೆ 12 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಸಚಿವಾಲಯವು ಕಳೆದ ತಿಂಗಳು ಗಮನ ಸೆಳೆದಿತ್ತು ಮತ್ತು ಕ್ರೀಡಾ ಸಂಹಿತೆಯ ಪ್ರಕಾರ, ಅವರು ಎನ್‌ಆರ್‌ಎಐ ಮುಖ್ಯಸ್ಥರಾಗಿ ಮುಂದುವರಿಯಲು ಸಾಧ್ಯವಿರಲಿಲ್ಲ.ಗುರುವಾರ ನಡೆದ ಎನ್‌ಆರ್‌ಎಐಯ ಆಡಳಿತ ಮಂಡಳಿ ವರ್ಚುವಲ್ ಸಭೆಯಲ್ಲಿ ಅವಿರೋಧವಾಗಿ ಸಿಂಗ್ ದಿಯೊ ಅವರನ್ನು ಅಧ್ಯಕ್ಷರನ್ನಾಗಿ ಅನುಮೋದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.