Advertisement

NPS: ಸರಕಾರಿ ವಂತಿಗೆ ಶೇ.14ಕ್ಕೆ ಏರಿಕೆ; ಶೇ.60 ಹಿಂಪಡೆತ Tax free

04:10 PM Dec 10, 2018 | udayavani editorial |

ಹೊಸದಿಲ್ಲಿ : ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ ಪಿ ಎಸ್‌) ಅಡಿ ಸರಕಾರದ ವಂತಿಗೆಯನ್ನು ಈಗಿನ ಶೇ.10ರಿಂದ ಶೇ.14ಕ್ಕೆ ಏರಿಸಲಾಗುವುದು ಮತ್ತು ಶೇ.60 ರಷ್ಟು ಹಿಂಪಡೆಯಲಾಗುವ ಹಣವನ್ನು ತೆರಿಗೆ ಮುಕ್ತಗೊಳಿಸಲಾಗುವುದು. 

Advertisement

ಎನ್‌ಪಿಎಸ್‌ ನ ಟಯರ್‌-2 ಸರಕಾರಿ ನೌಕರರು ಪಾವತಿಸುವ 1.50 ಲಕ್ಷ ರೂ. ವರೆಗಿನ ವಂತಿಗೆ ಈಗಿನ್ನು ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಪ್ರಕಾರ ವಿನಾಯಿತಿಗೆ ಒಳಪಡಲಿದೆ. 

ಎನ್‌ಪಿಎಸ್‌ ನ ಈ ಬದಲಾವಣೆಗಳಿಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು. 

ಎನ್‌ಪಿಎಸ್‌ ಗೆ ಸರಕಾರಿ ನೀಡುವ 1.50 ಲಕ್ಷ ರೂ. ವರಗಿನ ವಾರ್ಷಿಕ ವಂತಿಗೆಗೆ ಸೆ.80ಸಿ ಅಡಿ ತೆರಿಗೆ ವಿನಾಯಿತಿ ದೊರಕಲು ಆ ಮೊತ್ತ ಮೂರು ವರ್ಷಗಳ ಲಾಕ್‌ ಇನ್‌ ಪೀರಿಯಡ್‌ಗೆ ಒಳಪಡಬೇಕಿದೆ. 

ಎನ್‌ಪಿಎಸ್‌ ಅಡಿ 2 ಖಾತೆ ಇದೆ. ಅದೆಂದರೆ ಟಯರ್‌ 1 ಮತ್ತು ಟಯರ್‌ 2. ಟಯರ್‌ 1 ಖಾತೆ ಕಡ್ಡಾಯವಾಗಿರುತ್ತದೆ. ನೋಂದಣಿದಾರರಿಗೆ ಟಯರ್‌ 2 ಖಾತೆಯಡಿ ಈ ಖಾತೆಯನ್ನು ತೆರೆಯಲು, ನಿರ್ವಹಿಸಲು ಆಯ್ಕೆ ಇರುತ್ತದೆ. ಈ ಖಾತೆಯಲ್ಲಿನ ಉಳಿತಾಯದ ಹಣವನ್ನು ಯಾವಾಗ ಬೇಕೆಂದಾಗ ಹಿಂಪಡೆಯುವದಕ್ಕೆ ಅವಕಾಶವಿರುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next