Advertisement

ಸರಕಾರ ಯೂ ಟರ್ನ್; ಸ್ಟೆಂಟ್‌ ಬೆಲೆ ಏರಿಕೆ!

02:04 AM Apr 01, 2017 | Karthik A |

ಹೊಸದಿಲ್ಲಿ: ಹೃದ್ರೋಗಿಗಳಿಗೆ ಅಗತ್ಯವಾದ ಸ್ಟೆಂಟ್‌ ಬೆಲೆಯನ್ನು ಇಳಿಸಿದ್ದ ಕೇಂದ್ರ ಸರಕಾರ ಇದೀಗ ಮತ್ತೆ ದರ ಪರಿಷ್ಕರಣೆ ಮಾಡಿದೆ. ಔಷಧ ಬೆಲೆ ನಿಯಂತ್ರಿಸುವ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ಸ್ಟೆಂಟ್‌ ಬೆಲೆಗಳನ್ನು ಶೇ.2ರಷ್ಟು ಏರಿಸಿದೆ. ನೂತನ ಬೆಲೆ ಶನಿವಾರದಿಂದ ಜಾರಿಗೆ ಬರಲಿದೆ. ಸಗಟು ದರ ಸೂಚ್ಯಂಕ ಆಧಾರದ ಮೇಲೆ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ. 

Advertisement

ಇದರಿಂದ ಸದ್ಯ ಮೆಟಲ್‌ ಸ್ಟೆಂಟ್‌ಗಳ ಬೆಲೆ 7,400 ರೂ. ಆಗಲಿದೆ. ಈ ಮೊದಲು ಇಂತಹ ಸ್ಟೆಂಟ್‌ಗಳ ಬೆಲೆ 7,260 ರೂ. ಆಗಿತ್ತು. ಇದರೊಂದಿಗೆ ಡ್ರಗ್‌ ಹೊಂದಿರುವ ಸ್ಟೆಂಟ್‌ಗಳ ಬೆಲೆ 29,600 ರಿಂದ 30,180 ರೂ.ಗೆ ಏರಿಕೆಯಾಗಿದೆ.  ಕಳೆದ ಫೆಬ್ರವರಿಯಲ್ಲಷ್ಟೇ ಸ್ಟೆಂಟ್‌ಗಳ ಬೆಲೆಯನ್ನು ಎನ್‌ಪಿಪಿಎ ಇಳಿಕೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next