Advertisement

ಮುದ್ರಾದಿಂದ ಎನ್‌ಪಿಎ ಹೆಚ್ಚಳ: ಆರ್‌ಬಿಐ ಎಚ್ಚರಿಕೆ

12:35 AM Jan 14, 2019 | Team Udayavani |

ಹೊಸದಿಲ್ಲಿ: ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚುತ್ತಿರುವಂತೆಯೇ ಆರ್‌ಬಿಐ ಮತ್ತೂಂದು ಆತಂಕವನ್ನು ಕೇಂದ್ರದ ಮುಂದಿಟ್ಟಿದೆ. 

Advertisement

ಸರಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಕೂಡ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ. 

ವಿತ್ತ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಯೋಜನೆಯಿಂದ ಇದುವರೆಗೆ ಎನ್‌ಪಿಎ 11 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. 2017-18ನೇ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ 2.46 ಲಕ್ಷ ಕೋಟಿ ರೂ.ಗಳನ್ನು ಯೋಜನೆ ಅನ್ವಯ ಬಿಡುಗಡೆ ಮಾಡಲಾಗಿದೆ. 2015ರ ಎ. 8ರಂದು ಮುದ್ರಾ ಯೋಜನೆ ಜಾರಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next