Advertisement

ಉತ್ತರ ಪ್ರದೇಶದ ಆಲಿಗಢದಲ್ಲಿ ಗುಂಪು ಹಿಂಸೆ: ಇಬ್ಬರು ಬಲಿ

10:46 AM Aug 14, 2018 | udayavani editorial |

ಆಲಿಗಢ : ದೇಶದಲ್ಲಿ ಉದ್ರಿಕ್ತ ಗುಂಪುಗಳು ಅಮಾಯಕರನ್ನು ಚಚ್ಚಿ ಕೊಲ್ಲುವ  ಪ್ರಕರಣಗಳು ಇನ್ನೂ ಮುಂದುವರಿದೇ ಇದೆ. ತಾಜಾ ಪ್ರಕರಣವಾಗಿ ಉತ್ತರ ಪ್ರದೇಶದ ಆಲಿಗಢದಲ್ಲಿ ಉದ್ರಿಕ್ತ ಸಮೂಹವೊಂದು ಕಳ್ಳರೆಂಬ ಶಂಕೆಯಲ್ಲಿ ಇಬ್ಬರನ್ನು ಚಚ್ಚಿ ಸಾಯಿಸಿದ್ದಾರೆ. ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. 

Advertisement

ಕೋಪೋದ್ರಿಕ್ತ ಗುಂಪೊಂದು ನಿನ್ನೆ ಸೋಮವಾರ ಕಳ್ಳರೆಂಬ ಶಂಕೆಯಲ್ಲಿ ಇಬ್ಬರನ್ನು ನಿರ್ದಯವಾಗಿ ಹೊಡೆದು ಹಲ್ಲೆ ಮಾಡಿತು. ಗುಂಪಿನ ಈ  ಹಲ್ಲೆಯಿಂದ ತೀವ್ರಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. 

ವಾಸ್ತವವಾಗಿ ಮೂವರು ಕಳ್ಳರು ದರೋಡೆ ಮಾಡುವಾಗ ಜನರ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಕೋಪೋದ್ರಿಕ್ತ ಸಮೂಹದ ಹಲ್ಲೆಗೆ ಗುರಿಯಾದ ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ದ್ವಿವೇದಿ ಸುದ್ದಿಗಾರರಿಗೆ ತಿಳಿಸಿದರು. 

ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗುಂಪಿನ ಹಿಂಸೆಗೆ ಗುರಿಯಾಗಿ ಮೃತಪಟ್ಟವರ ಗುರುತು, ಮಾಹಿತಿ ಇನ್ನೂ ಸಿಕ್ಕಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next