Advertisement

ಬಿಜೆಪಿ- ಟಿಎಂಸಿ ನಡುವೆ ಈಗ ಸ್ಲೋಗನ್‌ ವಾರ್‌

01:47 AM Jun 06, 2019 | Team Udayavani |

ಕೋಲ್ಕತ್ತಾ:ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ಸ್ಲೋಗನ್‌ ವಾರ್‌ನಲ್ಲಿ ಶ್ರೀರಾಮನ ಬಳಿಕ ಈಗ ಕಾಳಿ ಮಾತೆ ಸಿಲುಕಿಕೊಂಡಿದ್ದಾರೆ. ಉದ್ಘೋಷಗಳಿಗೆ ಸಂಬಂಧಿಸಿ ಎರಡೂ ಪಕ್ಷಗಳ ನಡುವೆ ವಾಕ್ಸಮರ ಮುಂದುವರಿದಿದೆ. ಈಗ ಮಮತಾರ ಸಂಬಂಧಿ, ಸಂಸಂದ ಅಭಿಷೇಕ್‌ ಬ್ಯಾನರ್ಜಿ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ‘ಬಿಜೆಪಿಯವರು ಶ್ರೀರಾಮನ ಟಿಆರ್‌ಪಿ ಕಡಿಮೆಯಾದ ಕಾರಣ, ಈಗ ಕಾಳಿ ಮಾತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂಬ ಹೇಳಿಕೆ ನೀಡಿದ್ದಾರೆ.

Advertisement

ಕಳೆದ ವಾರವಷ್ಟೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ‘ಬಿಜೆಪಿ ಜೈ ಶ್ರೀರಾಂ ಸ್ಲೋಗನ್‌ ಬಳಸಿದರೆ, ನಾವು ಜೈ ಹಿಂದ್‌ ಮತ್ತು ಜೈ ಬಾಂಗ್ಲಾ ಸ್ಲೋಗನ್‌ ಮೂಲಕ ತಿರುಗೇಟು ನೀಡುತ್ತೇವೆ’ ಎಂದಿದ್ದರು. ಅದಾದ ನಂತರ ಬಿಜೆಪಿಯು, ‘ಬಂಗಾಳದಲ್ಲಿ ಜೈ ಶ್ರೀ ರಾಮ್‌ ಮತ್ತು ಜೈ ಮಾ ಕಾಳಿ’ಯೇ ನಮ್ಮ ಸ್ಲೋಗನ್‌ ಎಂದಿತ್ತು. ಈ ನಡುವೆ, ಬುಧವಾರ ಈದ್‌ ಹಬ್ಬದ ಹಿನ್ನೆಲೆ ಟ್ವೀಟ್ ಮಾಡಿರುವ ಮಮತಾ, ‘ಹಿಂದೂಗಳು ತ್ಯಾಗದ ಸಂಕೇತ, ಮುಸಲ್ಮಾನರು ಸಮಗ್ರತೆಯ ಸಂಕೇತ, ಕ್ರಿಶ್ಚಿಯನ್ನರು ಪ್ರೇಮದ ಹಾಗೂ ಸಿಖVರು ಬಲಿದಾನದ ಸಂಕೇತ. ಇದು ನಮ್ಮ ಪ್ರೀತಿಯ ಹಿಂದುಸ್ಥಾನ. ಅದನ್ನು ನಾವು ಕಾಪಾಡುತ್ತೇವೆ. ಯಾರು ನಮ್ಮ ತಂಟೆಗೆ ಬರುತ್ತಾರೋ, ಅವರನ್ನು ಚೂರು ಚೂರು ಮಾಡುತ್ತೇವೆ. ಇದುವೇ ನಮ್ಮ ಸ್ಲೋಗನ್‌’ ಎಂದು ಬರೆದುಕೊಂಡಿದ್ದಾರೆ.

ಟಿಎಂಸಿ ನಾಯಕನ ಹತ್ಯೆ:ಮಂಗಳವಾರ ರಾತ್ರಿ ಟಿಎಂಸಿ ನಾಯಕ ನಿರ್ಮಲ್ ಕುಂಡು (35) ಎಂಬವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಕೃತ್ಯವು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next