Advertisement

“ಬಡವರ ಫ್ರಿಜ್‌’ಗೆ ಈಗ ಭಾರೀ ಬೇಡಿಕೆ

11:10 AM Mar 16, 2019 | Team Udayavani |

ಹುಮನಾಬಾದ: ಬಿಸಿಲಿನ ಬೇಗೆಯಿಂದ ಬಳಲಿದ ಜನರಿಗೆ ತಂಪನ್ನೀಯಲು ಮಾರುಕಟ್ಟೆಗೆ ಆಗಮಿಸಿರುವ ಬಡವರ ಫ್ರಿಜ್‌
ಗಳಿಗೆ ಭಾರೀ ಬೇಡಿಕೆ ಬಂದಿದೆ. ವೀರಭದ್ರೇಶ್ವರ ಅಗ್ನಿಕುಂಡದ ಮುಂಭಾಗದಲ್ಲಿ ಬಸವಕಲ್ಯಾಣ ತಾಲೂಕು ರಾಜೇಶ್ವರದ ಪರಿವಾರವೊಂದು ಎರಡು ವಾರದಿಂದ ಮಡಿಕೆ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಮನೆಯಲ್ಲಿ ಫ್ರಿಜ್‌ಗಳಿರುವ ಈ ಕಾಲದಲ್ಲಿಯೂ ಜನರು ಈ ಮಡಿಕೆಗಳನ್ನು ಖರಿದಿಸುತ್ತಾರಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಪದವಿ ಶಿಕ್ಷಣ ಪಡೆಯುತ್ತಿರುವ ಬಸವಕಲ್ಯಾಣ ತಾಲೂಕು ರಾಜೇಶ್ವರ ಗ್ರಾಮದ ಧನರಾಜ ಕುಂಬಾರ ಹೀಗೆ ಪ್ರತಿಕ್ರಿಯಿಸುತ್ತಾರೆ. ಇದೂ ಮೇಲ್ನೋಟಕ್ಕೆ ಬಡವರ ಫ್ರಿಜ್‌ ಎಂಬ ಖ್ಯಾತಿಗೆ ಪಾತ್ರವಾದರೂ ಇವುಗಳನ್ನು ಕೇವಲ ಬಡವರು ಮಾತ್ರ ಖರೀದಿಸುವುದಿಲ್ಲ. ಶೇ.75ರಷ್ಟು ಮಡಿಕೆಗಳು ಫ್ರಿಜ್‌ ಉಳ್ಳವರ ಮನೆಗೇ ಹೋಗುತ್ತವೆ. ಫ್ರಿಜ್‌ ನೀರು ಕುಡಿಯುವುದರಿಂದ ಸೀತ ಬರುತ್ತದೆ. ಆದರೆ ನಮ್ಮ ಫ್ರಿಜ್‌ ನೀರು ದೇಹಕ್ಕೆ ತಂಪು ನೀಡುವುದರ ಜೊತೆಯಲ್ಲಿ ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ.

Advertisement

ಅಂದಹಾಗೆ ನಮ್ಮ ಬಳಿ ನೀರುವ ಸಂಗ್ರಹ ಸಾಮರ್ಥ್ಯ ಆಧರಿಸಿ, 50 ರೂ.ದಿಂದ 350 ರೂ. ವರೆಗಿನ ಮಡಿಕೆಗಳಿವೆ.
ಪ್ರತಿನಿತ್ಯ ಎಲ್ಲ ಅಳತೆಯ ಮಡಿಕೆ ಸೇರಿ ಕನಿಷ್ಟ 75ರಿಂದ 100ಮಡಿಕೆಗಳು ಮಾರಾಟ ಆಗುತ್ತವೆ. ಅಂದಹಾಗೆ ಈ ಎಲ್ಲ
ಮಡಿಕೆಗಳನ್ನೂ ಯಾವುದೋ ದೂರದ ಊರಿಂದ ಬಂದು ಖರೀದಿಸುವುದಿಲ್ಲ. ಪ್ರತೀ ವರ್ಷ ಜನವರಿ ಕೊನೆ ವಾರದಿಂದ
ಏಪ್ರಿಲ್‌ ಅಂತ್ಯದ ವರೆಗೆ ತಯಾರಿಸುತ್ತೇವೆ. ನಮ್ಮಲ್ಲಿ ಸಿದ್ಧಗೊಂಡ ಮಡಿಕೆಗಳು ಉಳಿದ ನಿದರ್ಶನ ವಿರಳ ಎಂದು
ಧನರಾಜ ಹೇಳುತ್ತಾರೆ. ಇಸ್ಲಾಂಪೂರ ಗ್ರಾಮದ ನಾಗರೆಡ್ಡಿ ಅವರು ದೇಸಿ ಫ್ರಿಜ್‌ ಬಳಕೆ ಆರೋಗ್ಯಕ್ಕೆ ಪೂರಕ ಎನ್ನುತ್ತಾರೆ.

ಫ್ರಿಜ್‌ ನೀರು ಸೇವನೆ ಅನಾರೋಗ್ಯಕ್ಕೆ ಮೂಲ. ತಕ್ಷಣಕ್ಕೆ ಆರಾಮ ಅನ್ನಿಸಿದರೂ ನಂತರ ಸೀತ ಇತರೆ ಕಾಯಿಲೆ
ಬರುವುದು ಖಚಿತ. ವಿದ್ಯಾರ್ಥಿಗಳಿಗೆ ತಂಪಾದ ನೀರಿನ ಸೌಲಭ್ಯ ಕಲ್ಪಿಸಲು ಪ್ರತೀ ವರ್ಷ ಕನಿಷ್ಟ 25 ಮಡಿಕೆ ಖರೀದಿಸುತ್ತೇನೆ. ನಮ್ಮ ಪುತ್ರ ನಿರ್ವಹಿಸುವ ಇನ್ನೊಂದು ಕಾಲೇಜಿಗೂ ಅಷ್ಟೇ ಮಡಿಕೆಗಳನ್ನು ಖರೀದಿಸುತ್ತೇವೆ. ಮಕ್ಕಳು ತಂಪು ನೀರು ಸೇವಿಸಿ ನೆಮ್ಮದಿಯಿಂದ ಪಾಠ ಆಲಿಸುತ್ತಾರೆ.
 ಮೀನಾಕ್ಷಿ ಯಲಾಲ್‌, ಯಲಾಲ್‌ ಶಿಕ್ಷಣ ದತ್ತಿಗಳು

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next