Advertisement

ಈಗ ಪಾಕ್‌ನದ್ದು ನೈಜ ಸ್ನೇಹ: ಡೊನಾಲ್ಡ್‌ ಟ್ರಂಪ್‌

07:10 AM Oct 15, 2017 | Team Udayavani |

ವಾಷಿಂಗ್ಟನ್‌: ಪಾಕಿಸ್ಥಾನದ ಸ್ನೇಹದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೆಚ್ಚುಗೆಯ ಮಾತನಾಡಿದ್ದು, “”ಪಾಕಿ ಸ್ಥಾನವು ಅಮೆರಿಕದಿಂದ ಕಳೆದೊಂದು ವರ್ಷದಲ್ಲಿ ಊಹಿಸಲಾಗದಷ್ಟು ಪ್ರಯೋ ಜನ ಪಡೆದುಕೊಂಡಿದೆ. ಆದರೆ ಈಗ ನೈಜ ಬಾಂಧವ್ಯ ಪ್ರದರ್ಶಿಸಿದೆ. ಮುಂದಿನ ದಿನಗಳಲ್ಲಿ ಬಾಂಧವ್ಯ ವೃದ್ಧಿಗೆ ಪಾಕ್‌ ನಾಯಕರ ಜತೆ ಮಾತುಕತೆ  ನಡೆಸಲಾಗುವುದು” ಎಂದಿದ್ದಾರೆ.

Advertisement

ಹಖಾನಿ ಭಯೋತ್ಪಾದಕರಿಂದ ಅಪ ಹರಿ ಸಲ್ಪಟ್ಟ ಅಮೆರಿಕ ಮೂಲದ ಕೆನಡಿ ಯನ್‌ ಕುಟುಂಬವನ್ನು ಐದು ವರ್ಷಗಳ ಬಳಿಕ ಬಿಡುಗಡೆ ಮಾಡಿದ ಬೆನ್ನಲ್ಲೇ ಟ್ರಂಪ್‌ ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, “”ಪಾಕಿಸ್ತಾನ ಕಳೆದ ಎಷ್ಟೋ ವರ್ಷಗಳಿಂದಲೂ ಅಮೆರಿಕದಿಂದ ಸಾಕಷ್ಟು ಲಾಭ ಪಡೆದುಕೊಂಡಿದೆ. ಆದರೆ, ಆರಂಭದಲ್ಲಿ ಪಾಕಿಸ್ಥಾನದೊಂದಿಗಿನ ಬಾಂಧವ್ಯ ಈಗ ನೈಜತೆ ಪಡೆದು ಕೊಂಡಿದೆ. ಅಮೆರಿಕ, ಉಳಿದ ರಾಷ್ಟ್ರಗಳಂ ತೆಯೇ ಪಾಕಿಸ್ತಾನವನ್ನೂ  ಗೌರವದಿಂದ ನಡೆಸಿಕೊಂಡು ಬಂದಿದೆ” ಎಂದಿದ್ದಾರೆ ಟ್ರಂಪ್‌. ಅಮೆರಿಕದ ಮಹಿಳೆ ಕೈಟ್ಲಾನ್‌ ಕೊಲೆ ಮನ್‌ ಹಾಗೂ ಆಕೆಯ ಪತಿ ಕೆನಡಾದ ಜೊಸುವಾ ಬೊಯ್ಲೆ,  3 ಮಕ್ಕಳನ್ನು ಉಗ್ರರ ಕಪಿಮುಷ್ಠಿಯಿಂದ ಬಿಡುಗಡೆ ಮಾಡುವಲ್ಲಿ ಪಾಕ್‌ ಸಹಕಾರವನ್ನು ಟ್ರಂಪ್‌ ಇದೇ ವೇಳೆ ಸ್ಮರಿಸಿದ್ದಾರೆ.

ಪಾಕ್‌ ಬಗ್ಗೆ ಟ್ರಂಪ್‌ ಶ್ಲಾ ಸಿರುವ ಬಗ್ಗೆ ಈಗ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಇದರಿಂದ ಪ್ರಧಾನಿ ಮೋದಿ ಅವರ ನಡೆಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬ ಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next