Advertisement

ಇನ್ನು ರೈಲ್ವೇ ಟಿಕೆಟ್ ಶುಲ್ಕ ರಿಫಂಡ್ ಗೂ ಮೊದಲು ಒಟಿಪಿ ಬರುತ್ತದೆ!

10:19 AM Oct 30, 2019 | Team Udayavani |

ನವದೆಹಲಿ: ನೀವು ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದಲ್ಲಿ ಅಥವಾ ತತ್ಕಾಲ್ ನಲ್ಲೇ ಉಳಿದ ಟಿಕೆಟ್ ಗಳಿಗೆ ಹಣ ಹಿಂದಿರುಗಿಸುವ ವಿಧಾನವನ್ನು ಭಾರತೀಯ ರೈಲ್ವೇ ಇನ್ನಷ್ಟು ಪಾರದರ್ಶಕಗೊಳಿಸಿದೆ. ಒಟಿಪಿ ಆಧಾರಿತ ಹಣ ವಾಪಸಾತಿ ವಿಧಾನಕ್ಕೆ ಮಂಗಳವಾರದಂದು ಚಾಲನೆ ನೀಡಿರುವ ಭಾರತೀಯ ರೈಲ್ವೇ ಈ ಮೂಲಕ ನೀವು ಅಧಿಕೃತ ಐ.ಆರ್.ಸಿ.ಟಿ.ಸಿ. ಏಜೆಂಟರ ಮೂಲಕ ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ರದ್ದುಗೊಳಿಸಿದರೆ ಅಥವಾ ನಿಮ್ಮ ಪ್ರಯಾಣ ಖಾತ್ರಿಯಾಗದಿದ್ದರೆ ಆ ಸಂದರ್ಭದಲ್ಲಿ ಒಟಿಪಿ ಸಂದೇಶವನ್ನು ಪ್ರಯಾಣಿಕರ ಮೊಬೈಲ್ ಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ. ಟಿಕೆಟ್ ಶುಲ್ಕವನ್ನು ರಿಫಂಡ್ ಮಾಡುವ ಸಂದರ್ಭದಲ್ಲೇ ಈ ಒಟಿಪಿ ಸಂದೇಶವೂ ಸಹ ಬರುತ್ತದೆ.

Advertisement

ಭಾರತೀಯ ರೈಲ್ವೇಯ ಪಿ.ಎಸ್.ಯು. ಮತ್ತು ಐ.ಆರ್.ಸಿ.ಟಿ.ಸಿ. ಜಂಟಿಯಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಐ.ಆರ್.ಸಿ.ಟಿ.ಸಿ. ಅಧಿಕೃತ ಏಜೆಂಟರುಗಳ ಮೂಲಕ ಬುಕ್ಕಿಂಗ್ ಮಾಡಿದ ಟಿಕೆಟ್ ಗಳಿಗೆ ಮಾತ್ರವೇ ಈ ಒಟಿಪಿ ಸಂದೇಶ ಬರುತ್ತದೆ.

ಟಿಕೆಟ್ ಅಲಭ್ಯತೆಯಿಂದ ಅಥವಾ ಇನ್ಯಾವುದೇ ಕಾರಣಗಳಿಂದ ಒಂದು ವೇಳೆ ನಿಮ್ಮ ಉದ್ದೇಶಿತ ರೈಲ್ವೇ ಪ್ರಯಾಣವು ರದ್ದುಗೊಂಡಲ್ಲಿ, ಪ್ರಯಾಣಿಕರು ಅಧಿಕೃತ ಏಜೆಂಟರ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ಸಂದರ್ಭದಲ್ಲಿ ನೀಡುವ ಮೊಬೈಲ್ ನಂಬರ್ ಗೆ ಒಟಿಪಿ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಒಟಿಪಿ ಸಂದೇಶವನ್ನು ನೀವು ಟಿಕೆಟ್ ಬುಕ್ಕಿಂಗ್ ಮಾಡಿರುವ ಏಜೆಂಟ್ ಅವರಿಗೆ ತೋರಿಸುವ ಮೂಲಕ ನೀವು ನಿಮ್ಮ ಟಿಕೆಟ್ ಹಣವನ್ನು ಮರಳಿ ಪಡೆಯಬಹುದಾಗಿರುತ್ತದೆ.

ಒಟಿಪಿ ಆಧಾರಿತ ಟಿಕೆಟ್ ಶುಲ್ಕ ಹಿಂದಿರುಗಿಸುವಿಕೆ ವಿಧಾನವು ಹೆಚ್ಚು ಪಾರದರ್ಶಕತೆಯಿಂದ ಕೂಡಿದ್ದಾಗಿದೆ ಎಂದು ನಂಬಲಾಗುತ್ತಿದೆ. ಯಾಕೆಂದರೆ ಈ ವಿಧಾನದಲ್ಲಿ ಪ್ರಯಾಣಿಕರಿಗೆ ತಮ್ಮ ಟಿಕೆಟ್ ಶುಲ್ಕದಲ್ಲಿ ಎಷ್ಟು ಮೊತ್ತ ರಿಫಂಡ್ ಆಗಿ ಏಜೆಂಟರ ಕೈಸೇರಿದೆ ಎಂಬ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಇದರಿಂದಾಗಿ ಟಿಕೆಟ್ ರಿಫಂಡ್ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಈ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳಲು ರೈಲ್ವೇ ಪ್ರಯಾಣಿಕರು ತಾವು IRCTCಯ ಅಧಿಕೃತ ಏಜೆಂಟರ ಬಳಿ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ತಮ್ಮ ಸರಿಯಾದ ಮೊಬೈಲ್ ನಂಬರನ್ನು ನೀಡುವುದು ಅಗತ್ಯವಾಗಿರುತ್ತದೆ, ಮಾತ್ರವಲ್ಲದೇ ಏಜೆಂಟರುಗಳು ಈ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದನ್ನೂ ಸಹ ಖಚಿತಪಡಿಸಿಕೊಳ್ಳುವುದು ಪ್ರಯಾಣಿಕರ ಜವಾಬ್ದಾರಿಯಾಗಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next