Advertisement

ಈಗ ಡಬಲ್‌ ಡೋಸ್‌ ಪಡೆದವರೇ ಹೆಚ್ಚು!

01:40 AM Nov 18, 2021 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದಲ್ಲಿ ಕೊರೊನಾ ಲಸಿಕೆಯ ಎರಡು ಡೋಸ್‌ ಪಡೆದವರ ಸಂಖ್ಯೆ, ಈಗ ಒಂದು ಡೋಸ್‌ ಪಡೆದವರ ಸಂಖ್ಯೆಯನ್ನು ದಾಟಿದೆ.

Advertisement

ಲಸಿಕೆ ನೀಡಿಕೆಯ ಮಾಹಿತಿ ಪ್ರಚುರಪಡಿಸುವ, ಸರಕಾರಿ ಸ್ವಾಮ್ಯದ ಕೊವಿನ್‌ ಜಾಲತಾಣದ ಪ್ರಕಾರ, ನ. 17ರ ಹೊತ್ತಿಗೆ ದೇಶದಲ್ಲಿ ಎರಡು ಡೋಸ್‌ ಲಸಿಕೆ ಪಡೆದವರ ಸಂಖ್ಯೆ 38 ಕೋಟಿ ದಾಟಿದೆ. ಇದೇ ದಿನದ ಹೊತ್ತಿಗೆ ಒಂದು ಡೋಸ್‌ ಲಸಿಕೆ ಪಡೆದವರ ಸಂಖ್ಯೆ 37.5 ಕೋಟಿಯಷ್ಟಿದೆ. ಇದು ಕೊರೊನಾ ವಿರುದ್ಧದ ಭಾರತ ಸಾರಿರುವ ಸಮರದಲ್ಲಿ ಜಯ ಸಾಧಿಸುವತ್ತ ದಾಪುಗಾಲು ಇಟ್ಟಂತಾಗಿದೆ.

ಈ ಕುರಿತಂತೆ ಟ್ವಿಟರ್‌ನಲ್ಲಿ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ, “ಭಾರತದ ಲಸಿಕಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳ­ಬೇಕೆಂಬುದು ಪ್ರಧಾನಿಯವರ ಕನಸು ನನಸಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರ: ಕುಲ್ಗಾಮ್‌ನಲ್ಲಿ ಐವರು ಉಗ್ರರ ಹತ್ಯೆ

ಮಾನ್ಯತೆ: ಭಾರತದಲ್ಲಿ ತಯಾರಾದ ಕೊವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆಗಳಿಗೆ ನ್ಯೂಜಿಲೆಂಡ್‌ ಸರಕಾರ ಮಾನ್ಯತೆ ನೀಡಿದೆ. ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾ ಸರಕಾರ ಕೂಡ ಈ ಎರಡೂ ಲಸಿಕೆಗಳಿಗೆ ಮಾನ್ಯತೆ ನೀಡಿತ್ತು.

Advertisement

ಏತನ್ಮಧ್ಯೆ ಐರೋಪ್ಯ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನಗಳೆದಂತೆ ಗಣನೀಯವಾಗಿ ಹೆಚ್ಚುತ್ತಲೇ ಇವೆ. ರಷ್ಯಾದಲ್ಲಿ ಮಂಗಳವಾರ – ಬುಧವಾರ ನಡುವಿನ 24 ಗಂಟೆಗಳಲ್ಲಿ 36,626 ಹೊಸ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ, ಹಂಗೇರಿ, ಜೆಕ್‌ ಗಣರಾಜ್ಯ, ಜರ್ಮನಿ, ಆಸ್ಟ್ರಿಯಾದಲ್ಲೂ ಸೋಂಕು ಏರಿಕೆಯಾಗುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next