Advertisement

ಈಗ ಗಡ್ಕರಿಯಲ್ಲಿ ಕೇಜ್ರಿ ಕ್ಷಮೆಯಾಚನೆ: ಮಾನಹಾನಿ ಕೇಸು ಹಿಂದಕ್ಕೆ

03:33 PM Mar 19, 2018 | udayavani editorial |

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಕ್ಷಮೆಯಾಚಿಸುವ ಮೂಲಕ ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಬಾಕಿ ಇರುವ ಗಡ್ಕರಿ ವಿರುದ್ಧದ ಮಾನಹಾನಿ ದಾವೆಯನ್ನು ಹಿಂಪಡೆಯುವ ಸಲುವಾಗಿ ಗಡ್ಕರಿ ಜತೆಗಿನ ಜಂಟಿ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 

Advertisement

“ವೈಯಕ್ತಿಕವಾಗಿ ನನಗೆ ನಿಮಗೆ ವಿರುದ್ಧ ಏನೂ ಹೇಳಲಿಕ್ಕಿಲ್ಲ. ಸತ್ಯಾಂಶಗಳನ್ನು ಪರಿಶೀಲಿಸದೆಯೇ ನಾನು ನಿಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆ. ದಯವಿಟ್ಟು  ಹಿಂದಿನದನ್ನು ಮರೆತು ಬಿಡಿ’ ಎಂದು ಸಚಿವ ಗಡ್ಕರಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಈ ಕ್ಷಮೆಯಾಚನೆಯನ್ನು ಅನುಸರಿಸಿ ನಿತಿನ್‌ ಗಡ್ಕರಿ ಅವರು ಅರವಿಂದ ಕೇಜ್ರಿವಾಲ್‌ ಜತೆಗಿನ ಜಂಟಿ ಹೇಳಿಕೆಗೆ ಸಹಿ ಹಾಕಿ ದಿಲ್ಲಿಯ ಪಟಿಯಾಲ ಕೋರ್ಟ್‌ ಹೌಸ್‌ ನ್ಯಾಯಾಲಯಕ್ಕೆ ಸಲ್ಲಿಸಿ ಅಲ್ಲಿ  ವಿಚಾರಣೆ ಹಂತದಲ್ಲಿರುವ ಮಾನಹಾನಿ ದಾವೆಯನ್ನು ಹಿಂಪಡೆದುಕೊಂಡಿದ್ದಾರೆ.  

ಅರವಿಂದ ಕೇಜ್ರಿವಾಲ್‌ ಅವರು ಪಂಜಾಬ್‌ ಮಾಜಿ ಕಂದಾಯ ಸಚಿವ ಬಿಕ್ರಂ ಸಿಂಗ್‌ ಮಜೀತಿಯ ಅವರಲ್ಲಿ  ಕಳೆದ ವಾರವಷ್ಟೇ ಕ್ಷಮೆಯಾಚಿಸಿ ಅವರೊಂದಿಗಿನ ಮಾನಹಾನಿ ದಾವೆಯನ್ನು ಕೋರ್ಟಿನಲ್ಲಿ ಇತ್ಯರ್ಥಪಡಿಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next