ಮಂಗಳೂರು: ವಿದೇಶಿವಿನಿಮಯ ವಹಿವಾಟು ದೇಶದ ಆರ್ಥಿಕ ಅಭಿವೃದ್ಧಿಗೆ ಅತ್ಯಮೂಲ್ಯ ವಾಗಿದ್ದು, ಬ್ಯಾಂಕಿಂಗ್ ರಂಗವು ಇದಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈಗ ವಿದೇಶೀ ಹೂಡಿಕೆಗಳಿಗೆ ಆದ್ಯತೆ ಲಭ್ಯವಾಗುತ್ತಿದ್ದು, ಆರ್‌ಬಿಐ ಕೂಡ ವಿದೇಶಿ ಬಂಡವಾಳಗಳ ಹೂಡಿಕೆಗೆ ಅನೇಕ ಸವಲತ್ತು ಮತ್ತು ರಿಯಾಯಿತಿಗಳನ್ನು ದೇಶದ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನೀಡುತ್ತಿದೆ. ಈ ಅವಕಾಶವನ್ನು ಭಾರತೀಯ ರಫ್ತುಗಾರರು ಉಪ ಯೋಗಪಡಿಸಿಕೊಂಡು, ರಫ್ತು ವ್ಯವ ಹಾರವನ್ನು ಹೆಚ್ಚಿಸುವುದರ ಮೂಲಕ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ಣಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರಕ್ಟರ್ ಮತ್ತು ಸಿಇಒ ಮಹಾಬಲೇಶ್ವರ ಎಂ. ಎಸ್. ಹೇಳಿದರು.
ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ವಿದೇಶಿ ವಿನಿಮಯ ಕುರಿ ತಾದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಕೂಡ ಈ ದಿಶೆಯಲ್ಲಿ ಅತ್ಯಂತ ಕ್ರಿಯಾ ಶೀಲವಾಗಿದ್ದು, ಆಮದು ಮತ್ತು ರಫ್ತು ಉದ್ದಿಮೆದಾರರ ಆರ್ಥಿಕ ಅಗತ್ಯಗಳ ಶೀಘ್ರ ಪೂರೈಕೆಗಾಗಿ ವಿಶೇಷ ವಿಭಾಗವನ್ನೇ ರೂಪಿಸಿದೆ. ಈ ವಿಭಾಗ ವಿದೇಶಿ ವ್ಯವಹಾರವನ್ನು ಹೊಂದಿದ ಎಲ್ಲ ಸ್ತರದ ಉದ್ದಿಮೆದಾರರಿಗೆ ಮತ್ತು ಎಂಎಸ್‌ಎಂಇ ವಲಯಕ್ಕೂ ಅನ್ವಯವಾಗುವಂತೆ ಸಹಾಯ ಹಸ್ತ ನೀಡುತ್ತಿದೆ ಎಂದರು.
ಬ್ಯಾಂಕಿನ ಚೀಫ್ ಆಪರೇಟಿಂಗ್ ಆಫೀಸರ್ ವೈ.ವಿ. ಬಾಲಚಂದ್ರ, ಚೀಫ್ ಬ್ಯುಸಿನೆಸ್ ಆಫೀಸರ್ ಗೋಕುಲದಾಸ ಪೈ ಉಪಸ್ಥಿತರಿದ್ದರು.
ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನಯ ಭಟ್ ಪಿ.ಜೆ. ಪ್ರಸಕ್ತ ವರ್ಷದ ವಿದೇಶಿ ವಿನಿಮಯ ವಹಿವಾಟಿನ ಮುಂಗಡಗಳ ಆವಲೋಕನ ಮಾಡಿ ದರು.
ಡೆಪ್ಯುಟಿ ಜನರಲ್ ಮ್ಯಾನೇಜರ್ ಸಾಂಡ್ರಾ ಮರಿಯಾ ಲೊರೆನಾ ಸ್ವಾಗತಿಸಿದರು. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರೇಣುಕಾ ಬಂಗೇರಾ ವಂದಿಸಿದರು.