Advertisement

ಈಗ 13.39 ಲಕ್ಷ ಮತದಾರರು

09:08 AM Jan 17, 2019 | Team Udayavani |

ಚಿತ್ರದುರ್ಗ: ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ವಿಶೇಷವಾಗಿ ಪರಿಷ್ಕರಣೆ ಮಾಡಲಾಗಿದೆ. ಅಂತಿಮವಾಗಿ ಜಿಲ್ಲೆಯಲ್ಲಿ 13,39,248 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2018ರ ಅಕ್ಟೋಬರ್‌ 10 ರಂದು ಪ್ರಕಟಿಸಿದ ಕರಡು ಪಟ್ಟಿ ಅನ್ವಯ 13,32,168 ಮತದಾರರಿದ್ದರು. ಪರಿಷ್ಕರಣೆ ಅವಧಿಯಲ್ಲಿ ಒಟ್ಟು 1648 ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ 26,433 ಮತದಾರರನ್ನು ಸೇರ್ಪಡೆ ಮಾಡಲಾಗಿದ್ದು, 20,594 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

ಪರಿಷ್ಕರಣೆ ನಂತರ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರದ ಅನ್ವಯ ಮೊಳಕಾಲ್ಮೂರು 2,30,560, ಚಳ್ಳಕೆರೆ 2,09,814, ಚಿತ್ರದುರ್ಗ 2,51,312, ಹಿರಿಯೂರು 2,33,775, ಹೊಸದುರ್ಗ 1,87,654, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,26,133 ಮತದಾರರಿದ್ದಾರೆ. ಪರಿಷ್ಕರಣೆ ಅವಧಿಯಲ್ಲಿ ಹೊಸದಾಗಿ ನೋಂದಾಯಿಸಲು ನಮೂನೆ-6ರ ಅಡಿ 26,511 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 26,433 ಅನುಮೋದನೆಯಾಗಿ 78 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ 7ರಲ್ಲಿ ಪಟ್ಟಿಯಿಂದ ಕೈಬಿಡಲು ಸಲ್ಲಿಸಿದ 21,201 ಅರ್ಜಿಗಳಲ್ಲಿ 20,594 ಅರ್ಜಿಗಳಿಗೆ ಅನುಮೋದನೆ ನೀಡಿ 607 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ-8ರ ಅಡಿ ತಿದ್ದುಪಡಿಗಾಗಿ 8855 ಅರ್ಜಿಗಳು ಸಲ್ಲಿಕೆಯಾಗಿದ್ದು, 8830 ಅನುಮೋದನೆಯಾಗಿ 25 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ-8 ಎ ಅಡಿ 1114 ಅರ್ಜಿಗಳನ್ನು ಸ್ವೀಕರಿಸಿ 1111 ಅನುಮೋದನೆಯಾಗಿ 3 ತಿರಸ್ಕರಿಸಲ್ಪಟ್ಟಿವೆ ಎಂದು ವಿವರಿಸಿದರು.

ಇಂಟರ್‌ನೆಟ್ ಮೂಲಕ ನಮೂನೆ-6 (1) ಅಡಿ 31, ನಮೂನೆ-7 (1) ಅಡಿ 22, ನಮೂನೆ-8 (1) ಅಡಿ 12 ಅರ್ಜಿಗಳು ಸ್ವೀಕೃತವಾಗಿ ಅನುಮೋದಿಸಲಾಗಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ ಮೂಲಕ ನಮೂನೆ-6 ರಲ್ಲಿ 94, ನಮೂನೆ-7 ರಲ್ಲಿ 18, 7ಎ ದಲ್ಲಿ 113 ಹಾಗೂ ನಮೂನೆ-8 ಎ ಅಡಿ 2 ಅರ್ಜಿಗಳು ಸ್ವೀಕೃತವಾಗಿದ್ದು ಅವೆಲ್ಲವನ್ನೂ ಅನುಮೋದಿಸಲಾಗಿದೆ. ಜಿಲ್ಲೆಯಲ್ಲಿ 17,87,580 ಜನಸಂಖ್ಯೆ ಇದ್ದು, ಇದರಲ್ಲಿ 13,39,248 ಮತದಾರರಿದ್ದಾರೆ.

ಇದು ಒಟ್ಟು ಜನಸಂಖ್ಯೆಯಲ್ಲಿ ಸರಾಸರಿ ಶೇ. 74.89 ಆಗುತ್ತದೆ. ಕರಡು ಪಟ್ಟಿಯಂತೆ 15,016 ಯುವ ಮತದಾರರಿದ್ದು ಪರಿಷ್ಕರಣೆ ಅವಧಿಯಲ್ಲಿ 12,817 ಯುವ ಮತದಾರರು ನೋಂದಾಯಿಸಿದ್ದರು. 18-19 ವರ್ಷದ ವಯೋಮಾನವುಳ್ಳ 27,833 ಯುವ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಲು 1950 ಟೋಲ್‌ ಫ್ರೀ ಸಹಾಯವಾಣಿ ಸ್ಥಾಪಿಸಲಾಗಿದೆ. ಏನಾದರೂ ದೂರುಗಳಿದ್ದಲ್ಲಿ ಈ ಸಂಖ್ಯೆಗೆ ಕರೆ ಮಾಡಿ ದೂರು, ಮಾಹಿತಿ ನೀಡಬಹುದಾಗಿದೆ ಎಂದರು.

Advertisement

ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ಚುನಾವಣಾ ತಹಶೀಲ್ದಾರ್‌ ಪ್ರತಿಭಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next