Advertisement

GST: ನವೆಂಬರ್‌ ಜಿಎಸ್‌ಟಿ ಶೇ.15 ಹೆಚ್ಚಳ ಕರ್ನಾಟಕದ ಜಮೆಯೂ ಶೇ.17ಕ್ಕೆ ಜಿಗಿತ

12:14 AM Dec 02, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯ ಸಂಗ್ರಹ ಪ್ರಮಾಣವು ನವೆಂಬರ್‌ನಲ್ಲಿ ಶೇ.15ರಷ್ಟು ಹೆಚ್ಚಳದೊಂದಿಗೆ 1.68 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಕರ್ನಾಟಕದಲ್ಲಿಯೂ ಕಳೆದ ವರ್ಷ ನವೆಂಬರ್‌ಗೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ.17ರಷ್ಟು ಹೆಚ್ಚಳದೊಂದಿಗೆ 11,970 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

Advertisement

ಸರಕಾರದ ದತ್ತಾಂಶಗಳ ಪ್ರಕಾರ 1,67,929 ಕೋಟಿ ರೂ. ಜಿಎಸ್‌ಟಿ ಕಳೆದ ತಿಂಗಳು ಸಂಗ್ರಹವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ.ಜಿಎಸ್‌ಟಿ ಸಂಗ್ರಹವಾಗಿತ್ತು. ಆದಾಗ್ಯೂ ಈ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹದೊಂದಿಗೆ ಜಿಎಸ್‌ಟಿ ಜಾರಿಯಾದಾಗಿನಿಂದ 2ನೇ ಬಾರಿಗೆ ಅತ್ಯಧಿಕ ಸಂಗ್ರಹವೆಂಬ ಖ್ಯಾತಿಗೂ ಇದು ಪಾತ್ರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next