Advertisement

ನ. 1-7: ರಾಜ್ಯೋತ್ಸವ ಸಾಹಿತ್ಯ ಸಂಭ್ರಮ

10:45 AM Oct 28, 2018 | |

ಸುಳ್ಯ: ಇಲ್ಲಿನ ಸುವಿಚಾರ ಸಾಹಿತ್ಯ ವೇದಿಕೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಲ್ಕನೇ ವರ್ಷದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನ. 1ರಿಂದ 7ರ ತನಕ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಡಾ| ಹರಪ್ರಸಾದ್‌ ತುದಿಯಡ್ಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನ. 1ರಂದು ಸಮೂಹ ಸಂಪನ್ಮೂಲ ಕೇಂದ್ರ ದೇವಚಳ್ಳ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಎಲೆಮಲೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ವಿಷ್ಣು ಭಟ್‌ ಎಂ. ಭುವನೇಶ್ವರಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ ಧ್ವಜಾರೋಹಣ ಮಾಡಲಿದ್ದಾರೆ ಎಂದರು.

Advertisement

ವಿದ್ಯಾರ್ಥಿಗಳಿಗೆ ‘ಕಥಾ ಸಮಯ’ ನಡೆಯಲಿದ್ದು, ಲಂಕಾ ದಹನದ ಬಗ್ಗೆ ಡಾ| ಪ್ರಭಾಕರ ಶಿಶಿಲ ಹಾಗೂ ಕೃಷ್ಣಲೀಲೆ-ಕಂಸ ವಧೆ ಬಗ್ಗೆ ವೆಂಕಟರಾಮ ಭಟ್‌ ಕಾರ್ಯಕ್ರಮ ನಡೆಸಲಿದ್ದಾರೆ. ಕನ್ನಿಕಾ ಡಿ. ಅಂಬೆಕಲ್ಲು ಅವರಿಂದ ಭಾವ-ಗಾನ-ಕುಂಚ ನಡೆಯಲಿದೆ. ಬಳಿಕ ಸಂಗೀತ ಸಂಭ್ರಮ, ನೃತ್ಯ ಸಾಹಿತ್ಯ ಸಂಭ್ರಮ, ಸಂಜೆ ಡಾ| ಶಿವರಾಮ ಕಾರಂತ ಕುರಿತು ಉಪನ್ಯಾಸ ನಡೆಯಲಿದೆ.

ನ. 2ರಂದು ಅರಂತೋಡು ಎನ್ನೆಂಸಿ ಕಾಲೇಜಿನಲ್ಲಿ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಶಾಲಾ ಸಂಚಾಲಕ ಕೆ. ಆರ್‌. ಗಂಗಾಧರ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ವಿಟ್ಠಲ ನಾಯಕ್‌ ಬೊಳಂತಿಮೊಗರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಮಿತ್ತಡ್ಕ ರೋಟರಿ ಪ.ಪೂ. ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಭ್ರಮವನ್ನು ರೋಟರಿ ಶಾಲಾ ಸಂಚಾಲಕ ಜಿತೇಂದ್ರ ಎನ್‌.ಎ. ಉದ್ಘಾಟಿಸಲಿದ್ದಾರೆ.

ನ. 4ರಂದು ಸುಳ್ಯ ಪ.ಪಂಗಡ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಮಹಿಳಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಅಮರಜ್ಯೋತಿ ಪ.ಪೂ. ವಿದ್ಯಾಲಯದ ಪ್ರಾಂಶುಪಾಲೆ ಯಶೋದಾ ರಾಮಚಂದ್ರ ಉದ್ಘಾಟಿಸಲಿದ್ದಾರೆ. ಶಿವಣ್ಣ ಎಚ್‌. ಅವರು ಜಾನಪದದಲ್ಲಿ ಸ್ತ್ರೀ ಸಂವೇದನೆ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನ. 5ರಂದು ಐವರ್ನಾಡು ಪ.ಪೂ. ವಿದ್ಯಾಲಯದಲ್ಲಿ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಪರ್ಲಿಕಜೆ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಶಿವಣ್ಣ ಎಚ್‌. ಭಾಗವಹಿಸಲಿದ್ದಾರೆ.

ನ. 6ರಂದು ಅಂಬೆಟಡ್ಕ ಕನ್ನಡ ಭವನದಲ್ಲಿ ಶಿಕ್ಷಕರ ಕವಿಗೋಷ್ಠಿ ಸಂಭ್ರಮ ನಡೆಯಲಿದೆ. ಡಾ| ಸುಂದರ ಕೇನಾಜೆ ಉದ್ಘಾಟಿಸಲಿದ್ದಾರೆ. ಪ್ರಮಿಳಾರಾಜ್‌ ಅವರ ಕವನ ಸಂಕಲನವನ್ನು ಯು.ಸು.ಗೌ. ಬಿಡುಗಡೆ ಮಾಡುವರು. ಬಳಿಕ 21 ಶಿಕ್ಷಕರು ಕವನ ವಾಚಿಸಲಿದ್ದಾರೆ. ಕುತ್ಯಾಳ ನಾಗಪ್ಪ ಗೌಡ (ಕಿರಣ) ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ನ. 7ರಂದು ಕನ್ನಡ ಭವನ ಅಂಬೆಟಡ್ಕದಲ್ಲಿ ಸಮಾರೋಪ ಸಮಾರಂಭ ಹಾಗೂ ಸಮ್ಮಾನ ನಡೆಯಲಿದೆ. ಸುಗಮ ಸಂಗೀತ ಕ್ಷೇತ್ರದ ಕೆ.ಆರ್‌. ಗೋಪಾಲಕೃಷ್ಣ, ನೃತ್ಯ ಸಂಗೀತ ಕ್ಷೇತ್ರದ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಜಾನಪದ ಕ್ಷೇತ್ರದ ರಮೇಶ್‌ ಮೆಟ್ಟಿನಡ್ಕ ಅವರನ್ನು ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಇದರ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಸಮ್ಮಾನಿಸಲಿದ್ದಾರೆ.

ಸುವಿಚಾರ ಸಾಹಿತ್ಯ ವೇದಿಕೆ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯದರ್ಶಿ ಗಿರಿಜಾ ಎಂ.ವಿ., ಕಸಾಪ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ತೇಜಸ್ವಿ ಕಡಪಳ, ಕೋಶಾಧಿಕಾರಿ ಎಸ್‌ .ದಯಾನಂದ ಆಳ್ವ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಾಹಿತ್ಯ ಸಂಭ್ರಮ
ಬೆಳ್ಳಾರೆ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನ. 3ರಂದು ವಿದ್ಯಾರ್ಥಿ ಸಾಹಿತ್ಯ ಸಂಭ್ರಮ ನಡೆಯಲಿದೆ. ಡಾ| ಹರಪ್ರಸಾದ್‌ ತುದಿಯಡ್ಕ ಧ್ವಜಾರೋಹಣಗೈಯಲಿದ್ದಾರೆ. ಸುಳ್ಯ ಸ.ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚರಿಷ್ಮಾ ಕೆ.ವೈ. ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ನಾಗರಾಜ್‌ ಉದ್ಘಾಟಿಸಲಿದ್ದಾರೆ. ಆನಂತರ ಭಾವಗಾನ ಸಂಭ್ರಮ, ಸಾಹಿತ್ಯ ವಿಚಾರಗೋಷ್ಠಿ, ಗಮಕ ವಾಚನ, ಮುಕ್ತ ರಸಪ್ರಶ್ನೆ, ನೃತ್ಯ ಸಂಭ್ರಮ, ವಿದ್ಯಾರ್ಥಿ ಕವಿಗೋಷ್ಠಿ, ಗಾನ ಸಂಭ್ರಮ, ಜಾನಪದ ಸಂಭ್ರಮ, ಹಾಸ್ಯ ಸಂಭ್ರಮ, ನಟನಾ ಸಂಭ್ರಮ, ಯಕ್ಷಗಾನ ನಾಟ್ಯ ಕುಂಚ ಕಾರ್ಯಕ್ರಮ ನಡೆಯಲಿದೆ. ಪ್ರದೀಪ್‌ ಕುಮಾರ್‌ ರೈ ಪನ್ನೆ ಸಮಾರೋಪ ಭಾಷಣಗೈಯಲಿದ್ದಾರೆ.
ಸಮ್ಮೇಳನಾಧ್ಯಕ್ಷೆ ಚರಿಷ್ಮಾ ಕೆ.ವೈ 

Advertisement

Udayavani is now on Telegram. Click here to join our channel and stay updated with the latest news.

Next