Advertisement

ಡೇವಿಸ್‌ ಕಪ್‌ ಫೈನಲ್ಸ್‌ನಲ್ಲೂ ಜೊಕೋವಿಕ್‌ ಆಡುವುದಿಲ್ಲ!

11:06 PM Sep 05, 2022 | Team Udayavani |

ಇಪ್ಪತ್ತೊಂದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸರದಾರ ನೊವಾಕ್‌ ಜೊಕೋವಿಕ್‌ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುವುದು ಇನ್ನಷ್ಟು ವಿಳಂಬಗೊಳ್ಳಲಿದೆ.

Advertisement

ಡೇವಿಸ್‌ ಕಪ್‌ ಫೈನಲ್ಸ್‌ನಲ್ಲಿ ಅವರು ತವರಿನ ಸರ್ಬಿಯಾ ತಂಡದಲ್ಲಿ ಆಡದಿರುವ ನಿರ್ಧಾರಕ್ಕೆ ಬಂದಿರುವುದೇ ಇದಕ್ಕೆ ಕಾರಣ. ಇದಕ್ಕೆ “ವೈಯಕ್ತಿಕ’ ಕಾರಣ ನೀಡಿದ್ದಾರೆ ಎಂಬುದಾಗಿ ಸರ್ಬಿಯಾ ಟೆನಿಸ್‌ ಫೆಡರೇಶನ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಸರ್ಬಿಯಾದ ಡೇವಿಸ್‌ ಕಪ್‌ ಫೈನಲ್ಸ್‌ ಪಂದ್ಯಗಳು ಮುಂದಿನ ವಾರ ವೆಲೆನ್ಸಿಯಾದಲ್ಲಿ ನಡೆಯಲಿವೆ. ಸರ್ಬಿಯಾ “ಬಿ’ ವಿಭಾಗದಲ್ಲಿದ್ದು, ಸ್ಪೇನ್‌, ದಕ್ಷಿಣ ಕೊರಿಯಾ, ಕೆನಡಾ ವಿರುದ್ಧ ಆಡಲಿದೆ.

ಕೋವಿಡ್‌-19 ಚುಚ್ಚುಮದ್ದು ತೆಗೆದುಕೊಳ್ಳದ ಕಾರಣ ಜೊಕೋವಿಕ್‌ ಯುಎಸ್‌ ಓಪನ್‌ನಿಂದ ಹೊರಗುಳಿದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next