Advertisement

ಜೊಕೋ ಗುರಿ ಆಸ್ಟ್ರೇಲಿಯನ್‌ ಓಪನ್‌

12:50 AM Jan 07, 2019 | Team Udayavani |

ದೋಹಾ: ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸಿಗ, ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರ ಮುಂದಿನ ಗುರಿಯೇನು? ಈ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. ಸದ್ಯದಲ್ಲೇ ಆರಂಭವಾಗಲಿರುವ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಾದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗುವುದು ಅವರ ಸದ್ಯದ ಕನಸಂತೆ.

Advertisement

ಅವರ ಈ ಮಾತಿಗೆ ಕೊಂಚ ಮಹತ್ವ ಬಂದಿರುವುದಕ್ಕೂ ಒಂದು ಕಾರಣವಿದೆ. ಕಳೆದ ವರ್ಷದ ಪ್ಯಾರಿಸ್‌ ಮಾಸ್ಟರ್ 1000, ಎಟಿಪಿ ಫೈನಲ್ಸ್‌ ಹಾಗೂ ಕತಾರ್‌ ಓಪನ್‌ ಪಂದ್ಯಾವಳಿಗಳಲ್ಲಿ ಜೊಕೋವಿಕ್‌ ಪ್ರಶಸ್ತಿ ಗೆಲ್ಲುವಲ್ಲಿ ವಿಫ‌ಲರಾಗಿದ್ದರು. ಪ್ಯಾರಿಸ್‌ ಮಾಸ್ಟರ್ ಫೈನಲ್‌ನಲ್ಲಿ ರಶ್ಯದ ಕರೇನ್‌ ಕಶನೋವ್‌ ವಿರುದ್ಧ ಹಾಗೂ ಎಟಿಪಿ ಫೈನಲ್ಸ್‌ ಪ್ರಶಸ್ತಿ ಸುತ್ತಿನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ ಸೋಲು ಕಂಡಿದ್ದಾರೆ. ಶನಿವಾರವಷ್ಟೇ ಕತಾರ್‌ ಓಪನ್‌ ಪುರುಷರ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಸ್ಪೇನ್‌ನ ರಾಬರ್ಟೊ ಅಗುಟ್‌ ವಿರುದ್ಧ ಸೋಲು ಕಂಡು ಟೂರ್ನಿಯ ಹೊರನಡೆದಿದ್ದಾರೆ. ಹೀಗಾಗಿ ಹೊಸ ವರ್ಷದಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆಲ್ಲುವ ಇರಾದೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next