Advertisement
ಸಿಸಿಪಸ್ ಅವರಿನ್ನು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ ಕ್ವಾರ್ಟರ್ ಫೈನಲ್ ಆಡಲಿದ್ದಾರೆ. 21ರ ಹರೆಯದ ಜ್ವೆರೇವ್ ರಶ್ಯದ ಡ್ಯಾನಿಲ್ ಮೆಡ್ವೆಡೇವ್‌ಗೆ 6-3, 6-2 ಅಂತರದ ಸೋಲುಣಿಸಿದರು. ಇದು ಒಂದು ವಾರದ ಅವಧಿಯಲ್ಲಿ ಜ್ವೆರೇವ್-ಸಿಸಿಪಸ್ ನಡುವಿನ 2ನೇ ಮುಖಾಮುಖೀ ಯಾಗಿದೆ. ಕಳೆದ ವಾಷಿಂಗ್ಟನ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಸಿಸಿಪಸ್ ವಿರುದ್ಧ ಜ್ವೆರೇವ್ ಜಯ ಸಾಧಿಸಿದ್ದರು.
ಸ್ವಿಜರ್‌ಲ್ಯಾಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕ ಕೂಡ ಕೂಟದಿಂದ ಹೊರಬಿದ್ದಿದ್ದಾರೆ. ಅವರನ್ನು ಅಗ್ರ ಶ್ರೇಯಾಂಕದ ರಫೆಲ್ ನಡಾಲ್ 7-5, 7-6 (4) ಅಂತರದಿಂದ ಸೋಲಿಸಿದರು. ಮೊದಲ ಸೆಟ್ ವೇಳೆ ಮಳೆ ಸುರಿದುದರಿಂದ ಪಂದ್ಯ ವಿಳಂಬಗೊಂಡಿತ್ತು. ನಡಾಲ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಕ್ರೊವೇಶಿಯಾದ ಮರಿನ್ ಸಿಲಿಕ್.