Advertisement

ನ.8 ಕಪ್ಪುಹಣ ವಿರೋಧಿ ದಿನ

06:10 AM Oct 26, 2017 | Team Udayavani |

ಹೊಸದಿಲ್ಲಿ,/ಚೆನ್ನೈ: ಪ್ರಧಾನಿ ನರೇಂದ್ರ ಮೋದಿ 500 ರೂ., ಮತ್ತು 1 ಸಾವಿರ ರೂ.ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ನ.8ಕ್ಕೆ ವರ್ಷ ಪೂರ್ತಿಯಾಗಲಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಕರಾಳ ದಿನವನ್ನಾಗಿ ಆಚರಿಸಲು ಈಗಾಗಲೇ ನಿರ್ಧರಿಸಿವೆ. ಅವುಗಳಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಅದೇ ದಿನ ಕಪ್ಪುಹಣ ವಿರೋಧಿ ದಿನವನ್ನಾಗಿ ಆಚರಿಸಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನವದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ನೋಟು ಅಮಾನ್ಯ ವಿರುದ್ಧ ಕಾಂಗ್ರೆಸ್‌ ತಳೆದಿರುವ ನಿಲುವು ಪ್ರಶ್ನಾರ್ಹ ಮತ್ತು ಅಧಿಕಾರದಲ್ಲಿ ಇದ್ದಷ್ಟೂ ವರ್ಷಗಳು ಕಪ್ಪುಹಣ ನಿಯಂತ್ರಣಕ್ಕೆ ಆ ಪಕ್ಷ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆಕ್ಷೇಪಿಸಿದ್ದಾರೆ. 

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಕಪ್ಪುಹಣ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕ್‌ ಖಾತೆಗಳಲ್ಲಿ ಮತ್ತು ಇತರ ಮೂಲಗಳಲ್ಲಿ ಪತ್ತೆಯಾದ ಕಪ್ಪುಹಣದ ಮೂಲವನ್ನು ಪತ್ತೆ ಅದರ ವಿರುದ್ಧ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ನ.8ರಂದು ದೇಶದ ವಿವಿಧ‌ ಭಾಗಗಳಲ್ಲಿ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ನೋಟು ಅಮಾನ್ಯದಿಂದ ದೇಶದ ಅರ್ಥ ವ್ಯವಸ್ಥೆಗೆ ಉಂಟಾದ ಲಾಭವನ್ನು ಮತ್ತು ಪ್ರತಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರದ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಎಂದು ಹೇಳಿದ್ದಾರೆ.

ಮೂರು ಲಾಭಗಳು: ಅಮಾನ್ಯ ಮಾಡಿದ್ದರಿಂದಲಾಗಿ ದೇಶದನಲ್ಲಿ ನಗದು ವಹಿವಾಟು ಕಡಿಮೆಯಾಗಿದೆ. ವಾಣಿಜ್ಯ ವಹಿವಾಟಿನಲ್ಲಿ ಹೆಚ್ಚಳವಾಗಿದೆ. ತೆರಿಗೆ ಮೊತ್ತ ಸಂಗ್ರಹಣೆಯ ಪ್ರಮಾಣ ಏರಿಕೆಯಾಗಿದೆ. ಈ ಮೂರು ಪ್ರಮುಖ ಲಾಭಗಳು ದೇಶದ ಅರ್ಥ ವ್ಯವಸ್ಥೆಗೆ ಆಗಿದೆ ಎಂದು ಅವರು ಹೇಳಿದ್ದಾರೆ. ಅಮಾನ್ಯದಿಂದಾಗಿ ಸರಕಾರ ನಿಗದಿ ಮಾಡಿದಷ್ಟು ಕಪ್ಪುಹಣ ಸರಕಾರದ ಬೊಕ್ಕಸಕ್ಕೆ ಬಂದಿಲ್ಲ ಎಂಬ ಪ್ರತಿಪಕ್ಷಗಳ ವಾದ ತಿರಸ್ಕರಿಸಿದ ಜೇಟಿÉ, ಅವರಿಗೆ ಸರಕಾರದ ಉದ್ದೇಶವೇ ಗೊತ್ತಾಗಿಲ್ಲ ಎಂದು ಲೇವಡಿ ಮಾಡಿದರು. 

ಎಸ್‌ಐಟಿ ರಚನೆ: ಕಪ್ಪುಹಣ ಪ್ರಕರಣಗಳ ತನಿಖೆಗಾಗಿ ಬಿಜೆಪಿ ನೇತೃತ್ವದ ಸರಕಾರ ವಿಶೇಷ ತನಿಖಾ ತಂಡವನ್ನು ಅಧಿಕಾರಕ್ಕೆ ಬಂದ ಕೂಡಲೇ ರಚನೆ ಮಾಡಿದೆ. ಕಾಂಗ್ರೆಸ್‌ ತನ್ನ ಅಧಿಕಾರದ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿನ ಹಣಕಾಸು ವ್ಯವಸ್ಥೆ ತಪ್ಪಿ ಹೋಗುವಂತೆ ಮಾಡಿತು. ಆದರೆ ಬಿಜೆಪಿ ನೇತೃತ್ವದ ಸರಕಾರ ಅದನ್ನು ಸರಿಪಡಿಸುವಲ್ಲಿ ನಿರತವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಎಡಪಕ್ಷಗಳ ಆಕ್ಷೇಪ: ಕಪ್ಪುಹಣ ವಿರೋಧಿ ದಿನ ಆಚರಿಸುವ ಬಿಜೆಪಿಯ ನಿರ್ಧಾರವನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ. ನೋಟು ಅಮಾನ್ಯ ನಿರ್ಧಾರ ಕಪ್ಪುಕುಳಗಳಿಗೆ ತಮ್ಮಲ್ಲಿರುವ ಅಕ್ರಮ ಹಣವನ್ನು ಸಕ್ರಮಗೊಳಿಸಲು ನೆರವಾಗಿದೆ. ಹೀಗಾಗಿ ನ.8ರ ಬಿಜೆಪಿ ಕಾರ್ಯಕ್ರಮ ಹಾಸ್ಯಾಸ್ಪದ ಎಂದಿದ್ದಾರೆ. ನೋಟು ಅಮಾನ್ಯ ಬಳಿಕ ದೇಶಕ್ಕೆ ಕಪ್ಪುಹಣ ಬಂದಿದೆಯೇ ಎಂದು ಅವರು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next