Advertisement

ನ. 24 – 26: ಉಡುಪಿಯಲ್ಲಿ ಧರ್ಮಸಂಸತ್‌

03:35 AM Jul 14, 2017 | Team Udayavani |

ಉಡುಪಿ: ಉಡುಪಿಯಲ್ಲಿ ಮುಂದಿನ ನವೆಂಬರ್‌ 24, 25 ಮತ್ತು26ರಂದು ನಡೆಯಲಿರುವ ಧರ್ಮ ಸಂಸತ್‌ನಲ್ಲಿ ರಾಷ್ಟ್ರದೆಲ್ಲೆಡೆಯ 2,000ಕ್ಕೂ ಮಿಕ್ಕಿದ ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ (ಆಂಧ್ರಪ್ರದೇಶ, ಕೇರಳ, ಕರ್ನಾಟಕ) ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಜೀ ಹೇಳಿದರು.

Advertisement

ಜಾತಿ ತಾರತಮ್ಯ, ಅಸ್ಪೃಶ್ಯತೆ ನಿವಾರಣೆ, ಮತಾಂತರ ತಡೆ ಮತ್ತು ಗೋರ ಕ್ಷಣೆ ವಿಷಯಗಳ ಕುರಿತು ಧರ್ಮ ಸಂಸತ್‌ನಲ್ಲಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗುತ್ತದೆ. ರಾಮ ಜನ್ಮಭೂಮಿ ವಿಷಯವೂ ಚರ್ಚೆಯಾಗುವ ಸಾಧ್ಯತೆ ಇದೆ. ರಾಮಮಂದಿರ ನಿರ್ಮಾಣಕ್ಕೆ ದಿನ ನಿಗದಿಯಾದರೂ ಆಗಬಹುದು. ಮೋಹನ್‌ ಜಿ. ಭಾಗವತ್‌, ರವಿಶಂಕರ್‌ ಗುರೂಜಿ, ಪೇಜಾವರ ಶ್ರೀ, ಸುತ್ತೂರು ಶ್ರೀ, ಪ್ರವೀಣ್‌ ತೊಗಾಡಿಯಾ ಮತ್ತಿತರ ನಾಯಕರು ಪಾಲ್ಗೊಳ್ಳಲಿದ್ದಾರೆ.

ಸೇನೆಯ ಸುಪರ್ದಿಗೆ
ಅಮರನಾಥ-ಆಗ್ರಹ

ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಅಮರನಾಥ ಯಾತ್ರಾರ್ಥಿಗಳ ಮೇಲೆ ಮತೀಯವಾದಿಗಳು, ಪಾಕಿಸ್ಥಾನಿಗಳು ಉಗ್ರರು ದಾಳಿ ನಡೆಸಿದ್ದಾರೆ. ಆದರೆ ಹಿಂದೂ ಯಾತ್ರಾರ್ಥಿಗಳು ಎದೆ ಗುಂದದೆ ಯಾತ್ರೆ ಮುಂದುವರಿಸಿ ದ್ದಾರೆ. ಉಗ್ರರನ್ನು ಸಂಪೂರ್ಣ ನಿರ್ನಾಮ ಮಾಡಬೇಕಿದೆ. ಅದಕ್ಕಾಗಿ ಅಮರನಾಥ ಯಾತ್ರೆಯ ರಕ್ಷಣೆ ಜವಾಬ್ದಾರಿಯನ್ನು ದೇಶದ ಸೈನ್ಯದ ಸುಪರ್ದಿಗೆ ಒಪ್ಪಿಸಬೇಕು ಎಂದು ಗೋಪಾಲ್‌ ಆಗ್ರಹಿಸಿದರು.

ಸಿಎಂ ಅಲ್ಪಸಂಖ್ಯಾಕ ತುಷ್ಟೀಕರಣ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿ ನಿಂದಲೂ ಹಿಂದೂಗಳ ದಮನಕ್ಕೆ ಯತ್ನ ಮಾಡುತ್ತಲೇ ಇದ್ದಾರೆ. ಆದರೆ ನಾವು ಎದೆಗುಂದಿಲ್ಲ. ಅವರು ಅಲ್ಪಸಂಖ್ಯಾಕರ ತುಷ್ಟೀಕರಣ ಮಾಡುತ್ತಿದ್ದಾರೆ. ಮಂಗಳೂರು ಬಂಟ್ವಾಳದ ಗಲಭೆಗೆ ಸಂಬಂಧಿಸಿ ಹಿಂದೂ ನಾಯಕರಾದ ಶರಣ್‌ ಪಂಪ್‌ವೆಲ್‌, ಸತ್ಯಜಿತ್‌ ಸುರತ್ಕಲ್‌ ಮತ್ತಿತರರ ಮೇಲೆ ಸೆಕ್ಷನ್‌ 307ರಡಿ ಕೇಸು ದಾಖಲಿಸಿ ಅವರನ್ನು ಪ್ರಕರಣ ದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಾರೆ. ಪೊಲೀಸರನ್ನು ಬಳಸಿ ರಾತೋರಾತ್ರಿ ಮನೆಗಳಿಗೆ ದಾಳಿ ನಡೆಸುತ್ತಿದ್ದಾರೆ. ಇದು ಅನ್ಯಾಯ ಎಂದರು.

2 ಗಂಟೆಯಲ್ಲಿ ಬಂಧಿಸಬಹುದು
ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಹತ್ಯೆ ಆರೋಪಿ ಗಳನ್ನು ಬಂಧಿಸಲು ಇನ್ನೂ ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ನಡುವೆ ಹಿಂದೂಗಳ ಮೇಲೆ ಕೇಸು ದಾಖಲಿಸಿ ಕೊಳ್ಳುತ್ತಿದ್ದಾರೆ. ರಾಜಕೀಯ ಷಡ್ಯಂತ್ರ ದಿಂದ ಹಿಂದೂಗಳ ಮೇಲೆ ಕೇಸು ದಾಖಲಾಗುತ್ತಿದೆ. ಎಸ್‌ಡಿಪಿಐ, ಪಿಎಫ್ಐ ನಾಯಕರನ್ನು ಮೊದಲು ಬಂಧಿಸಿ ಠಾಣೆಗೆ ಕರೆದೊಯ್ದರೆ 2 ಗಂಟೆಯೊಳಗೆ ಶರತ್‌ ಕೊಲೆ ಆರೋಪಿಗಳನ್ನು ಪೊಲೀಸರಿಗೆ ಬಂಧಿ ಸಲು ಸಾಧ್ಯವಿದೆ. ಎಲ್ಲ ಕೊಲೆಗಳ ಹಿಂದೆ ಅವರದ್ದೇ ಕೈವಾಡವಿದೆ. ಕೇರಳದಿಂದ ಜನರನ್ನು ಮಂಗಳೂರಿಗೆ ಕರೆಸಿಕೊಂಡು ಕೃತ್ಯ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದರು.

Advertisement

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ನಡೆದುಕೊಳ್ಳು ತ್ತಿರುವ ರೀತಿ, ಜಿಲ್ಲೆಯಲ್ಲಿ ಸಚಿವ ರಮಾನಾಥ ರೈ ಅವರ ನಡವಳಿಕೆ, ನಿವೃತ್ತ ಅಧಿಕಾರಿ ಕೆಂಪಯ್ಯ ಅವರಿಗೆ ಅಧಿಕಾರಿಗಳ ಸಭೆ ನಡೆಸಲು ಅನುಮತಿ ಕೊಡುವುದು. ಇದೆಲ್ಲವೂ ಅಲ್ಪಸಂಖ್ಯಾಕರ ತುಷ್ಟೀಕರಣ ಮಾಡಿ ಹಿಂದೂ ದಮನಕ್ಕೆ ನಡೆಯುತ್ತಿರುವ ಸರ್ವ ಪ್ರಯತ್ನವಾಗಿದೆ. ಇದಕ್ಕೆ ದಿಟ್ಟ ಉತ್ತರ ನೀಡಲಿದ್ದೇವೆ ಎಂದರು.

ಪೇಜಾವರ ಶ್ರೀಗಳು ಆಯೋಜಿಸಿದ್ದ ಈದ್‌ ಉಪಾಹಾರ ಕೂಟದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಕ್ಕೆ ಉತ್ತರಿಸಿದ ಅವರು, ಪೇಜಾವರ ಶ್ರೀಗಳಲ್ಲಿ ಮಾತನಾಡಿದ್ದೇವೆ. ಉಪಾಹಾರ ಕೂಟ ಆಯೋಜಿಸಿದ್ದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಗೋಪಾಲ್‌ ತಿಳಿಸಿದರು.

ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್‌ ನಾಯಕ್‌ ಪಾಂಗಾಳ, ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಸುನೀಲ್‌ ಕೆ.ಆರ್‌., ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next