Advertisement

Kannada Habba: ನ.1-7: ಕುಂದಾಪುರದಲ್ಲಿ ಕನ್ನಡ ಹಬ್ಬ

04:55 PM Oct 18, 2024 | Team Udayavani |

ಉಡುಪಿ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.1ರಿಂದ 7ರವರೆಗೆ ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ ಕಲಾಮಂದಿರದಲ್ಲಿ ಕನ್ನಡ ಹಬ್ಬ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಬಿ.ಕಿಶೋರ್‌ ಕುಮಾರ್‌ ತಿಳಿಸಿದರು.

Advertisement

ಕನ್ನಡ ಹಬ್ಬದ ಪೂರ್ವಭಾವಿಯಾಗಿ ಅ.31ರಂದು ಕನ್ನಡ ರಥೋತ್ಸವ ಹಮ್ಮಿಕೊಂಡಿದ್ದೇವೆ. ಅಂದು ಸಂಜೆ ಬೋರ್ಡ್‌ಹೈಸ್ಕೂಲ್‌ನಿಂದ ಹೊರಡಲಿರುವ ರಥೋತ್ಸವ ಹೊಸ ಬಸ್‌ನಿಲ್ದಾಣ ಮಾರ್ಗವಾಗಿ ಶಾಸ್ತ್ರೀ ಸರ್ಕಲ್‌ ಸುತ್ತಿ ಪುನಃ ಬೋರ್ಡ್‌ ಹೈಸ್ಕೂಲ್‌ಗೆ ಬರಲಿದೆ. ಜಿಲ್ಲಾಧಿಕಾರಿ, ಎಸ್‌.ಪಿ., ಸಂಸದರು, ಶಾಸಕರು, ಮಾಜಿ ಸಚಿವರು ಸಹಿತವಾಗಿ ಜನ ಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ, ತಾಲೂಕು ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಕನ್ನಡಾಭಿಮಾನಿಗಳ ಸೇರಿ 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಹಬ್ಬದ ನಿಮಿತ್ತ ಕುಂದಾಪುರ ಪೇಟೆಯ ಎಲ್ಲ ಅಂಗಡಿಗಳು ವಿದ್ಯುದ್ದೀಪಾಲಂಕಾರ ಮಾಡಲಿವೆ. ನಿತ್ಯವೂ ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನ.1ರ ಸಂಜೆ 6 ಗಂಟೆಗೆ ಉದ್ಘಾಟನೆಯನ್ನು ಉದ್ಯಮಿ ಆನಂದ ಸಿ. ಕುಂದರ್‌ ನೆರವೇರಿಸಲಿದ್ದಾರೆ. ಕನ್ನಡ ನೆಲದಲ್ಲಿ ಡಾ| ರಾಜ್‌ಕುಮಾರ್‌ ಎಂಬ ವಿಷಯವಾಗಿ ನಟ ರಾಮಕೃಷ್ಣ ಉಪನ್ಯಾಸ ನೀಡಲಿದ್ದಾರೆ. ಹೀಗೆ ನ.7ರವರೆಗೂ ಒಂದೊಂದು ದಿನ ಒಬ್ಬೊಬ್ಬರ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಾಟಕ, ಯಕ್ಷಗಾನ ಇತ್ಯಾದಿ ಇರಲಿದೆ ಎಂದರು.

ಟ್ರಸ್ಟ್‌ ಸದಸ್ಯರಾದ ಶ್ರೀಧರ್‌ ಸುವರ್ಣ, ರಾಮಚಂದ್ರ ಬಿ.ಎನ್‌. ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next