Advertisement

ಆದಿಲ್‌ಶಾಹಿ ಕಾಲದ ವರ್ಣಚಿತ್ರ ಪ್ರದರ್ಶನಕ್ಕೆ ಸೂಚನೆ

02:56 PM Nov 03, 2017 | |

ವಿಜಯಪುರ: ಆದಿಲ್‌ಶಾಹಿ ಇತಿಹಾಸವನ್ನು ಸಾರಿ ಹೇಳುವ ಸಮಗ್ರ ವರ್ಣಚಿತ್ರಗಳನ್ನು ಸಂಗ್ರಹಿಸಲಾಗಿದೆ. ಈ ಎಲ್ಲ ಸಮಗ್ರ ವರ್ಣಚಿತ್ರಗಳನ್ನು ಡೆಕ್ಕನ್‌ ಸಲ್ತನತ್‌ ಸಂಪುಟಗಳಂದ ಸಂಗ್ರಹಿಸಲಾಗಿದೆ. ಪ್ರತ್ಯೇಕವಾಗಿ ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಸದರಿ ಚಿತ್ರ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಸಲಹೆ ನೀಡಿದರು.

Advertisement

ಪ್ರವಾಸೋದ್ಯಮ ಇಲಾಖೆ, ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ನ. 7ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣ ಎದುರು ಇರುವ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪ್ಲಾಜಾ ಬ್ಲಾಕ್‌-1 ರಲ್ಲಿರುವ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1489ರಿಂದ 1686ರ ಆದಿಲ್‌ಶಾಹಿ ಆಡಳಿತಾವಧಿಯ ವಿವಿಧ ವರ್ಣಚಿತ್ರಗಳು ಹಂಚಿ ಹೋಗಿದ್ದನ್ನು ಸಂಗ್ರಹಿಸಲಾಗಿದೆ. ಅವೆಲ್ಲವುಗಳನ್ನು ಪ್ರತ್ಯೇಕವಾಗಿ ಪ್ರದರ್ಶನಗೊಳ್ಳುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಆದಿಲ್‌ ಶಾಹಿ ಕಾಲದ ಐತಿಹಾಸಿಕ ಮಹತ್ವದ ಕುರಿತು ಈ ವರ್ಣಚಿತ್ರ ಕಲೆಗಳು ತಿಳಿಹೇಳುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಇತಿಹಾಸ ತಿಳಿಹೇಳುವ ಅವಶ್ಯಕತೆ ಇದೆ. ಈಗಾಗಲೇ ಹಮ್ಮಿಕೊಂಡಿರುವ ಈ ಪ್ರದರ್ಶನವು ಗಮನ
ಸೆಳೆಯುತ್ತಿದೆ. ಸಮಗ್ರ ವರ್ಣಚಿತ್ರಗಳನ್ನು ಡೆಕ್ಕನ್‌ ಸಲ್ತನತ್‌ ಸಂಪುಟಗಳಂದ ಸಂಗ್ರಹಿಸಲಾದ ಅನೇಕ ವರ್ಣಚಿತ್ರಗಳು ಲಭ್ಯವಿದ್ದು, ಅವುಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸಿ ಮುಖ್ಯಮಂತ್ರಿಗ ಳಿಂದ ಉದ್ಘಾಟನೆಗೆ ಅಣಿಗೊಳಿಸುವಂತೆ ಸಲಹೆ ನೀಡಿದರು.

ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ಆದಿಲ್‌ಶಾಹಿ ರಾಜರು ಕಲೆ, ಸಂಗೀತಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಚಾಂದಬೀಬಿ ಖುದ್ದು ಚಿತ್ರ ಕಲಾವಿದರಾಗಿದ್ದರಿಂದ ಅವರು ಜಗತ್ಪ್ರಸಿದ್ದ ಚಿತ್ರಕಲಾವಿದರು ಆದಿಲ್‌ಶಾಹಿ ಕಾಲದಲ್ಲಿ ಆಗಿ ಹೋಗಿದ್ದಾರೆ. ಆದಿಲ್‌ಶಾಹಿ ಆಡಳಿತ ಪತನದ ನಂತರ ವಿಶ್ವದ ಅಮೇರಿಕ, ಫ್ರಾನ್ಸ್‌, ಜರ್ಮನಿ, ಇಂಗ್ಲೆಂಡ್‌, ರಷ್ಯಾ, ದೇಶಗಳಲ್ಲಿ ಅನೇಕ ವರ್ಣಚಿತ್ರಗಳು ಹಂಚಿಹೋಗಿದ್ದವು. ಅಂತಹ ವರ್ಣಚಿತ್ರಗಳಲ್ಲಿ ಹಲವಾರು ವರ್ಣಚಿತ್ರಗಳನ್ನು ಡೆಕ್ಕನ್‌ ಸಲ್ತನತ್‌ ಸಂಪುಟದಲ್ಲಿ ಸಂಗ್ರಹವಾಗಿದೆ ಎಂದರು.

ಈ ಮಹತ್ವದ ಹಾಗೂ ಸಾಹಸದ ಕೆಲಸಕ್ಕೆ ಸಚಿವ ಎಂ.ಬಿ. ಪಾಟೀಲ ಅವರ ಆಸಕ್ತಿ, ಪ್ರಯತ್ನದ ಫಲವಾಗಿ ಅಲಭ್ಯ ಎಂದುಕೊಂಡ ವರ್ಣಚಿತ್ರಗಳು ಲಭ್ಯವಾಗಿವೆ. ಇದರಲ್ಲಿ 132 ವರ್ಣಚಿತ್ರಗಳ ಪೈಕಿ 45 ವರ್ಣಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸಚಿವರ ಸೂಚನೆಯಂತೆ ಇತರೆ ಚಿತ್ರಗಳನ್ನೂ ಪ್ರದರ್ಶಿಸಲು ಸಂಬಂಧಪಟ್ಟ ಇಲಾಖೆ ಸಹಯೋಗದಲ್ಲಿ ಹೆಜ್ಜೆ ಇಡುವುದಾಗಿ ಹೇಳಿದರು.

Advertisement

ಶಾಸಕರಾದ ಡಾ| ಎಂ.ಎಸ್‌. ಬಾಗವಾನ, ರಾಜು ಆಲಗೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಝಾದ್‌ ಪಟೇಲ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಿಪಂ ಸಿಇಒ ಎಂ.ಸುಂದರೇಶಬಾಬು, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ದುರುಗೇಶ ರುದ್ರಾಕ್ಷಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next