Advertisement

ವಾರದೊಳಗೆ ಸಮಗ್ರ ವರದಿ ಸಲ್ಲಿಕೆಗೆ ಸೂಚನೆ

12:27 PM Apr 02, 2021 | Team Udayavani |

ಬಳ್ಳಾರಿ: ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಯಾವ್ಯಾವಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆಎಂಬುದರ ಕುರಿತು 100 ದಿನಗಳ ಸಮಗ್ರವರದಿಯನ್ನು ಒಂದು ವಾರದೊಳಗೆಸಲ್ಲಿಸಬೇಕು ಎಂದು ಜಿಲ್ಲಾ ಧಿಕಾರಿಪವನಕುಮಾರ್‌ ಮಾಲಪಾಟಿ ಸೂಚನೆನೀಡಿದ್ದಾರೆ.

Advertisement

ನಗರದ ಜಿಲ್ಲಾ ಧಿಕಾರಿಗಳ ಕಚೇರಿಸಭಾಂಗಣದಲ್ಲಿ ಜಲಶಕ್ತಿ ಅಭಿಯಾನಕ್ಕೆಸಂಬಂ ಧಿಸಿದಂತೆ ಗುರುವಾರ ಜಿಲ್ಲಾಮಟ್ಟದಅ ಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.ಜಲಶಕ್ತಿ ಅಭಿಯಾನದಡಿ ಜಲಸಂರಕ್ಷಣೆಮತ್ತು ಮಳೆನೀರು ಕೊಯ್ಲು, ಸಾಂಪ್ರಾದಾಯಿಕಮತ್ತು ಇತರೆ ಜಲಮೂಲಗಳು/ಕೆರೆಗಳನವೀಕರಣ, ಬೋರ್‌ವೆಲ್‌ಗ‌ಳ ಮರುಪೂರಣಮತ್ತು ಮರುಬಳಕೆ, ಜಲಾನಯನ ಅಭಿವೃದ್ಧಿ,ಅರಣ್ಯೀಕರಣ ಕೈಗೆತ್ತಿಕೊಳ್ಳುವುದಾಗಿದ್ದು,ವಿವಿಧ ಇಲಾಖೆಗಳ ಅ ಧಿಕಾರಿಗಳು ಇದಕ್ಕೆಸಂಬಂ ಧಿಸಿದಂತೆ ಏ.1ರಿಂದ ಜೂನ್‌ಅಂತ್ಯದವರೆಗೆ ಅಂದರೇ 100 ದಿನಗಳಕ್ರಿಯಾಯೋಜನೆ ವಿವರವಾಗಿ ರೂಪಿಸಿ ಸಲ್ಲಿಸಿ.

100 ದಿನಗಳಲ್ಲಿ ಜಲಶಕ್ತಿ ಅಭಿಯಾನದಡಿಕಣ್ಣಿಗೆ ಕಾಣುವಂತ ಅಭಿವೃದ್ಧಿಯನ್ನು ಇಲಾಖೆಅ ಧಿಕಾರಿಗಳು ಮಾಡಬೇಕು ಎಂದರು.ಜಲಸಂರಕ್ಷಣೆಯ ವಿಕೇಂದ್ರೀಕರಣದಪರಿಣಾಮದಿಂದಾಗಿ ಮಣ್ಣಿನ ತೇವಾಂಶಮತ್ತು ಸಸ್ಯ ಸಂಪತ್ತಿನ ವೃದ್ಧಿ, ಅಂತರ್ಜಲಮಟ್ಟದ ಏರಿಕೆ, ನೀರಾವರಿ ಮತ್ತುಕುಡಿಯುವ ನೀರಿಗಾಗಿ ಅಂತರ್ಜಲವನ್ನು ಬಳಸಲು ಕಡಿಮೆ ಅಶ್ವಶಕ್ತಿ ಪಂಪ್‌ಗಳನ್ನು ಉಪಯೋಗಿಸುವುದರಿಂದ ಉಳಿತಾಯವಾಗುತ್ತದೆ.

ನಗರ ಪ್ರದೇಶಗಳತಗ್ಗು ಪ್ರದೇಶಗಳಲ್ಲಿ ವಾಹನಗಳನ್ನುತಡೆಗಟ್ಟಬಹುದಾಗಿದೆ ಎಂದು ಅವರುಹೇಳಿದರು.ಬೋರ್‌ವೆಲ್‌ಗ‌ಳ ಮಾಹಿತಿ ನೀಡಿ:ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಳಸುವಬೋರ್‌ವೆಲ್‌ಗ‌ಳ ವಾಟರ್‌ ಲೇವೆಲ್‌ಟೇಬಲ್‌ ಮಾಹಿತಿ ನೀಡುವಂತೆ ಗ್ರಾಮೀಣಕುಡಿಯುವ ನೀರು ಮತ್ತು ಸರಬರಾಜುಎಂಜಿನಿಯರ್‌ ಅವರಿಗೆ ಜಿಪಂ ಸಿಇಒಕೆ.ಆರ್‌. ನಂದಿನಿ ಸೂಚನೆ ನೀಡಿದರು. ಈಬೋರ್‌ವೆಲ್‌ಗ‌ಳಿಗೆ ಆದ್ಯತೆಯ ಮೇರೆಗೆರಿಚಾರ್ಜ್‌ ಪಿಟ್‌ ನಿರ್ಮಾಣ ಮಾಡಲುಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳುಮತ್ತು ವಸತಿ ನಿಲಯಗಳಿಗೆ ಮಳೆನೀರುಕೊಯ್ಲು ಅಳವಡಿಸುವುದು, ಹಾಸ್ಟೆಲ್‌ಕಟ್ಟಡಗಳ ಆವರಣಗಳಲ್ಲಿ ಸ್ವತ್ಛತೆ ಕಾಪಾಡಲುಬಚ್ಚಲುಗುಂಡಿ ನಿರ್ಮಿಸಬೇಕು ಮತ್ತುಪೌಷ್ಟಿಕ ತೋಟ ಮಾಡಲು ಕ್ರಮವಹಿಸಬೇಕುಎಂದು ಅ ಧಿಕಾರಿಗಳಿಗೆ ಸೂಚಿಸಿದರು.

Advertisement

ಸಣ್ಣ ನೀರಾವರಿ ಅಡಿ 89 ಕೆರೆಗಳು:ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಡಿ89 ಕೆರೆಗಳು ಬರುತ್ತಿದ್ದು, ಅವುಗಳಲ್ಲಿ 2ಕೆರೆಗಳು ತಾತ್ಕಾಲಿಕ ಒತ್ತುವರಿಯಾಗಿವೆ;ಅವುಗಳ ಒತ್ತುವರಿ ತೆರವುಗೊಳಿಸಲುಕ್ರಮವಹಿಸುವುದಾಗಿ ಸಣ್ಣ ನೀರಾವರಿಎಂಜನಿಯರ್‌ ಅವರು ಜಿಲ್ಲಾ ಧಿಕಾರಿಗಳಿಗೆತಿಳಿಸಿದರು. ಜತೆಗೆ ಪ್ರಸಕ್ತ ವರ್ಷ 20 ಕೆರೆಗಳಸಮಗ್ರ ಅಭಿವೃದ್ಧಿಗಾಗಿ ಕ್ರಿಯಾಯೋಜನೆರೂಪಿಸಿಕೊಂಡು ಕೆರೆಹೂಳೆತ್ತುವಿಕೆ, ಕೆರೆ ಏರಿದುರಸ್ಥಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿಸಸಿಗಳನ್ನು ನೆಡುವಿಕೆ, ಕೆರೆ ಕೋಡಿ ಮತ್ತು ರೈತರಜಮೀನುಗಳಿಗೆ ನೀರು ಹರಿದುಹೋಗುವಕಾಲುವೆಗಳನ್ನು ದುರಸ್ತಿಗೊಳಿಸುವಂತೆ ಡಿಸಿಮಾಲಪಾಟಿ ತಿಳಿಸಿದರು.

ಹೊಸ ಕೆರೆ ನಿರ್ಮಾಣ: ಗ್ರಾಪಂವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮತ್ತು ಅರಣ್ಯಪ್ರದೇಶದಲ್ಲಿ ಹೊಸದಾಗಿ ಕೆರೆಗಳನ್ನು ಈಜಲಶಕ್ತಿ ಅಭಿಯಾನದಡಿ ನಿರ್ಮಿಸುವುದಕ್ಕೆಕ್ರಿಯಾಯೋಜನೆ ರೂಪಿಸುವಂತೆ ಜಿಪಂಸಿಇಒ ಕೆ.ಆರ್‌.ನಂದಿನಿ ಅವರು ಸೂಚನೆನೀಡಿದರು.ಪಾಲಿಕೆ ಆಯುಕ್ತೆ ಪ್ರೀತಿ ಗೆಹೊÉàಟ್‌,ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪಮುದಗಲ್‌, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ,ಕಾರ್ಯನಿರ್ವಾಹಕ ಎಂಜಿನಿಯರ್‌ ಕಾಳಪ್ಪಸೇರಿದಂತೆ ವಿವಿಧ ಇಲಾಖೆಗಳ ಅ ಧಿಕಾರಿಗಳುಇದ್ದರು

Advertisement

Udayavani is now on Telegram. Click here to join our channel and stay updated with the latest news.

Next