Advertisement

Waqf property: ನೋಟಿಸ್‌ ವಾಪಸ್‌, ಆದರೂ ಪ್ರತಿಭಟನೆ ಏಕೆ: ಸಿಎಂ ಪ್ರಶ್ನೆ

01:27 AM Nov 04, 2024 | Team Udayavani |

ಬೆಂಗಳೂರು: ಕೆಲವು ರೈತರ ಜಮೀನುಗಳಿಗೆ “ವಕ್ಫ್ ಆಸ್ತಿ’ ಎಂದು ನೀಡಿದ ನೋಟಿಸ್‌ ರಾಜ್ಯಾದ್ಯಂತ ವಿವಾದದ ಅಲೆ ಸೃಷ್ಟಿಸಿದ ಬೆನ್ನಲ್ಲೇ ಎಚ್ಚೆತ್ತ ಸರಕಾರವು ತನ್ನ ನಿಲುವು ಬದಲಿಸಿದ್ದು, ಈ ವಿಚಾರ ದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ ಗಳನ್ನು ತತ್‌ಕ್ಷಣ ಹಿಂಪಡೆ ಯಲು ನಿರ್ಧರಿಸಿದೆ.

Advertisement

“ವಕ್ಫ್ ವಿಚಾರದಲ್ಲಿ ರೈತರಿಗೆ ನೀಡ ಲಾಗಿರುವ ನೋಟಿಸ್‌ಗಳನ್ನು ಕೂಡಲೇ ವಾಪಸ್‌ ಪಡೆಯಬೇಕು. ರೈತರ ಸ್ವಾಧೀನದಲ್ಲಿರುವ ಜಮೀನು ಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳಿಗೆ ಶನಿವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಮಧ್ಯೆ ರವಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತತ್‌ಕ್ಷಣ ಹಿಂಪಡೆಯಲು ಸರ ಕಾರ ಸೂಚನೆ ನೀಡಿದ ಅನಂ ತರವೂ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾ ಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶವೇ ವಿನಾ ಇದರಲ್ಲಿ ರೈತರ ಹಿತಾಸಕ್ತಿಯ ಯಾವುದೇ ಸದುದ್ದೇಶ ಇಲ್ಲ ಎಂದು ಕಿಡಿಕಾರಿದ್ದಾರೆ.

ವಕ್ಫ್ ವಿಷಯದಲ್ಲಿ ರೈತರಿಗೆ ನೀಡಿ ರುವ ನೋಟಿಸ್‌ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಂದಾಯ, ಅಲ್ಪಸಂಖ್ಯಾಕರ ಕಲ್ಯಾಣ ಮತ್ತು ವಕ್ಫ್ ಮಂಡಳಿಯ ಹಿರಿಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಈ ನಿರ್ದೇಶನ ನೀಡಿದರು.

ರೈತರಿಗೆ ನೋಟಿಸ್‌ ಕುರಿತ ಬೆಳ ವಣಿಗೆಗಳ ಸಂಪೂರ್ಣ ಮಾಹಿತಿ ಪಡೆದ ಸಿಎಂ, ಕಾನೂನು ಬಾಹಿರ ಹಾಗೂ ನೋಟೀಸ್‌ ನೀಡದೆ ಪಹಣಿ ಯಲ್ಲಿ ಯಾವುದೇ ರೀತಿಯ ತಿದ್ದು ಪಡಿಗಳನ್ನು ಮಾಡಿದ್ದರೆ ತತ್‌ಕ್ಷಣ ರದ್ದು ಮಾಡಬೇಕು.

Advertisement

ನಕಲಿ ದಾಖಲೆಗಳ ಸೃಷ್ಟಿ : ಅಶ್ವತ್ಥನಾರಾಯಣ
ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ ಮಾತನಾಡಿ, 1974ರ ವಕ್ಫ್ ಆಸ್ತಿ ಕುರಿತ ಗೆಜೆಟ್‌ ಅಧಿಸೂಚನೆ ಹಿಂಪಡೆಯಲು ಆಗ್ರಹಿಸಿ ಮತ್ತು ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದು. ಕರ್ನಾಟಕದ ವಕ್ಫ್ ನಲ್ಲಿ ನಡೆದಿರುವ ನಕಲಿ ದಾಖಲೆಗಳ ಸೃಷ್ಟಿ, ಆ ಮೂಲಕ ಮಾಡಿಕೊಂಡಿರುವ ಲಾಭದ ಕುರಿತು ಇ.ಡಿ. (ಜಾರಿ ನಿರ್ದೇಶನಾಲಯ) ತನಿಖೆಯಾಗಬೇಕು. ರಾಜ್ಯದಲ್ಲಿ ವಕ್ಫ್ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಮಾನ್ಯಗಳು, ಹಿಂದೂ ದೇವಾಲಯಗಳ ಸಹಿತ ಎಲ್ಲರೂ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಫ್ ಕಾಯ್ದೆಯು ಮುಸ್ಲಿಂ ತುಷ್ಟೀಕರಣಕ್ಕಾಗಿ ಮತ ಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ ಎಂದು ಟೀಕಿಸಿದರು.

50 ಸಾವಿರ ಎಕರೆಗೂ ಹೆಚ್ಚು ಅತಿಕ್ರಮ: ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ರಾಜ್ಯದಲ್ಲಿ ಸುಮಾರು 50 ಸಾವಿರ ಎಕರೆಗೂ ಅಧಿಕ ಪ್ರಮಾಣದ ಭೂಮಿಯನ್ನು ವಕ್ಫ್ ಆಸ್ತಿ ಎಂದು ಕಬಳಿಸುವ ಹುನ್ನಾರ ನಡೆಯುತ್ತಿದೆ. ವಕ್ಫ್ ಆಸ್ತಿಗೆ ತಿದ್ದುಪಡಿ ತರಬೇಕೆಂದು ಕೇಂದ್ರ ಸರಕಾರ ಮುಂದಾದ ಬೆನ್ನಲ್ಲೇ ರಾಜ್ಯದಲ್ಲಿ ಇಂತಹ ಕೃತ್ಯ ನಡೆದಿದೆ. ರಾಜ್ಯ ಸರಕಾರ ಈ ಮಟ್ಟಕ್ಕೆ ಇಳಿಯಬಾರದಿತ್ತು. ಇದರ ವಿರುದ್ಧ ವಿಪಕ್ಷವಾಗಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಬೆಂಗಳೂರಿನ ಕೆ.ಆರ್‌. ಪುರಂ ತಾಲೂಕು ಕಚೇರಿ ಮುಂಭಾಗ ನಡೆಯಲಿರುವ ಪ್ರತಿಭಟನೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮುಖಂಡರಾದ ಬೈರತಿ ಬಸವರಾಜ, ನಂದೀಶ್‌ ರೆಡ್ಡಿ, ಎಸ್‌. ರಘು, ಮಂಜುಳಾ ಅರವಿಂದ ಲಿಂಬಾವಳಿ ಭಾಗಿಯಾದರೆ, ಕೆಂಗೇರಿ ತಾಲೂಕು ಕಚೇರಿ ಮುಂದೆ ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ, ಶಾಸಕರಾದ ಕೆ. ಗೋಪಾಲಯ್ಯ, ರವಿಸುಬ್ರಹ್ಮಣ್ಯ, ಎಸ್‌. ಸುರೇಶಕುಮಾರ್‌, ಎನ್‌. ಮುನಿರತ್ನ ಪಾಲ್ಗೊಳ್ಳಲಿದ್ದಾರೆ. ಯಲಹಂಕ ತಾಲೂಕು ಕಚೇರಿ ಎದುರು ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಎಸ್‌. ಮುನಿರಾಜು, ಮಾಜಿ ಸಚಿವ ಕಟ್ಟಾ ಜಗದೀಶ್‌ ಪಾಲ್ಗೊಳ್ಳಲಿದ್ದು, ಆನೇಕಲ್‌ ತಾಲೂಕು ಕಚೇರಿ ಎದುರು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಶಾಸಕರಾದ ಎಂ. ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next