Advertisement

Unauthorized shops: ಅನಧಿಕೃತ ಅಂಗಡಿಗಳ ತೆರವಿಗೆ ಖಡಕ್‌ ಸೂಚನೆ

03:28 PM Aug 28, 2023 | Team Udayavani |

ದೊಡ್ಡಬಳ್ಳಾಪುರ: ನಗರ ಪ್ರದೇಶದಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಇಟ್ಟಿರುವ ಅಂಗಡಿಗಳನ್ನು ತುರ್ತಾಗಿ ತೆರವು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಯಾವುದೇ ಪಾದಚಾರಿ ಮಾರ್ಗಗಳು ಒತ್ತುವರಿ ಆಗದಂತೆ ತಡೆಯುವ ಕೆಲಸ ನಿರಂತರವಾಗಿ ನಡೆಯಬೇಕು. ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಅನಿವಾರ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸಂದೀಪ್‌ ಸಾಲಿಯಾನ ಅವರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನ್ಯಾಯಾಧೀಶರ ನಡೆ ಹಳ್ಳಿಕಡೆ ಕಾರ್ಯಕ್ರಮದ ಅಂಗವಾಗಿ ನಗರದ ಅರಣ್ಯ ಇಲಾಖೆ ಸೇರಿದಂತೆ ವಿವಿಧಡೆಗಳಿಗೆ ಭೇಟಿ ನೀಡಿದ್ದ ಅವರು ನಗರದ ಎಪಿಎಂಸಿ ಬಳಿ ಇತ್ತೀಚೆಗಷ್ಟೆ ನಡೆದ ಭೀಕರ ಅಪಘಾತ ದಲ್ಲಿ ತಂದೆ, ಮಗಳು ಮೃತಪಟ್ಟ ಘಟನೆ ಕುರಿತಂತೆ ಪ್ರಸ್ತಾಪಿಸಿದ ಅವರು, ಮೃತರ ಕುಟುಂಬಕ್ಕೆ ಪರಿಹಾರ ಕೊಡಬಹುದೇ ಹೊರತು, ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲ. ಭೀಕರ ಅಪಘಾತ ಗಳಂತಹ ಘಟನೆ ಮರುಕಳಿಸದಂತೆ ನಗರಸಭೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸುವ ಮೂಲಕ ರಸ್ತೆ ಬದಿಯಲ್ಲಿ ಅನಧಿಕೃತವಾಗಿರುವ ಅಂಗಡಿ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ನಗರ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗಗಳ ಒತ್ತುವರಿ ತಡೆಯುವಲ್ಲಿ ನಗರಸಭೆ ಹಾಗೂ ಪೊಲೀಸ್‌ ಅಧಿಕಾರಿಗಳ ಜವಾಬ್ದಾರಿ ಮುಖ್ಯವಾಗಿದೆ. ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ನ್ಯಾಯಾಧೀಶರ ಗ್ರಾಮ ವಾಸ್ತವ್ಯ: ತಾಲೂಕಿನ ಹೊಸಹಳ್ಳಿ ಗ್ರಾಪಂ ಕಲ್ಲುಕುಂಟೆ, ಆರೂಢಿ ಗ್ರಾಪಂ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಕಾನೂನಿನ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿರಿಯ ಸಿವಿಲ್‌ ನ್ಯಾ.ಸಂದೀಪ್‌ ಸಾಲಿಯಾನ ಅವರ ನೇತೃತ್ವದಲ್ಲಿ ನಡೆಸಲಾಯಿತು. ಗ್ರಾಮಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಕುಂದು ಕೊರತೆ ಆಲಿಸಿದರು. ಸರಳ ಕಾರ್ಯಕ್ರಮ ಜನರ ವಿಶ್ವಾಸ ಗಳಿಸಿ ತು.ಕಾರ್ಯಕ್ರಮದ ಅಂಗವಾಗಿ ಗ್ರಾಮಗಳಿಗೆ ಬಂದ ನ್ಯಾಯಾಧೀಶರು ಏಕಾಏಕಿ ಸರ್ಕಾರಿ ಶಾಲೆ, ಅಂಗನವಾಡಿ, ರಸ್ತೆ, ಚರಂಡಿ ವೀಕ್ಷಿಸಿದರು.

ಇಲ್ಲಿ ಅವ್ಯವಸ್ಥೆ ಕುರಿತಂತೆ ಅಧಿಕಾರಿಗಳಿಗೆ ಬೆವರಿಳಿಸಿ, ಸಮಸ್ಯೆ ಬಗೆಹರಿಸಲು ತ್ವರಿತ ಕ್ರಮಕ್ಕೆ ಕಟ್ಟಪ್ಪಣೆ ನೀಡಿದರು. ಇದೇ ವೇಳೆ ಸ್ಮಶಾನ ಒತ್ತುವರಿ, ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ, ವಿದ್ಯುತ್‌ ಪೂರೈಕೆ, ಶಾಲೆಗೆ ಕಟ್ಟಡ, ಕಾಂಪೌಂಡ್‌, ನಕಾಶೆ ರಸ್ತೆ ತೆರವು ಮುಂತಾದ ಅಹವಾಲುಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿ ದರು. ಈ ವೇಳೆ ನ್ಯಾಯಾಧೀಶರಾದ ದೀಪಾ, ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ರಂಗಪ್ಪ, ಹೊಸಹಳ್ಳಿ ಠಾಣೆ ಇನ್‌ ಸ್ಪೆಕ್ಟರ್‌ ವಿಜಯಲಕ್ಷ್ಮೀ, ಅರಣ್ಯ ಇಲಾಖೆ ಅಧಿಕಾರಿ ಮುನಿರಾಜು, ತಾಪಂ ಅಧಿಕಾರಿ ಕುಮಾರ್‌ ಇದ್ದರು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ: ತಾಲೂಕಿನ ಹಾಡೋನಹಳ್ಳಿ ಸಮೀಪ 150 ಎಕರೆಯಷ್ಟು ಒತ್ತುವರಿಯಾಗಿದ್ದ ಭೂಮಿ ಅರಣ್ಯ ಇಲಾಖೆ ತೆರವು ಮಾಡಿರುವುದು ಶ್ಲಾಘನೀಯ. ಅರಣ್ಯ ಇಲಾಖೆಗೆ ಸೇರಿ ರುವ ಭೂಮಿಪರಿಶೀಲನೆ ಮಾಡಿದಾ ಗ ರೈತರಿಗೆ ಮಂಜೂ ರು ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ನ್ಯಾ. ಸಂದೀಪ್‌ ಸಾಲಿಯಾನ, ತೆರವು ಮಾಡಲಾಗಿರುವ ಭೂಮಿಯಲ್ಲಿ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಲು ಮುಂದಾಗಬೇಕು. ಅರಣ್ಯ ಸಂಪತ್ತು ಕುಸಿತದಿಂ ದ ಇಂದು ಮಳೆ ಕೊರತೆಯಾಗಿ ವಾತಾವರಗಿ ಏರುಪೇರಾಗುತ್ತಿದೆ. ಮನುಕುಲವಷ್ಟೇ ಅಲ್ಲದೆ ಇಡೀ ಪರಿಸರದಲ್ಲಿನ ಸಕಲ ಜೀವ ಸಂಕುಲ ಉಳಿಯಬೇಕಾ ದರೆ ಅರಣ್ಯ ಇಲಾಖೆ ಕೆಲಸ ಅತ್ಯಂತ ಮಹತ್ವದ್ದಾಗಿದೆ ಎಂದು ನ್ಯಾ. ಸಂದೀಪ್‌ ಸಾಲಿಯಾನ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next