Advertisement

ಅಧಿಕಾರ ದುರ್ಬಳಕೆ ಆರೋಪ ಲಕ್ಷ್ಮೀನಾರಾಯಣಗೆ ನೋಟಿಸ್‌

12:48 PM Jun 03, 2017 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಸಂಧರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್‌ಗೆ ಹೈಕೋರ್ಟ್‌ ಶುಕ್ರವಾರ ನೋಟೀಸ್‌ ಜಾರಿಗೊಳಿಸಿದೆ.

Advertisement

ಲಕ್ಷ್ಮೀನಾರಾಯಣ್‌ ವಿರುದ್ಧದ  ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವುದು ತಮ್ಮ  ವ್ಯಾಪ್ತಿಗೆ  ಬರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಯ ನಿಲುವು ಪ್ರಶ್ನಿಸಿ “ನಮ್ಮ ಬೆಂಗಳೂರು ಫೌಂಡೇಶನ್‌’ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಕೆ ಮುಖರ್ಜಿ ಹಾಗೂ ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ ನೋಟೀಸ್‌ ಜಾರಿಮಾಡಿದೆ.

ಜೊತೆಗೆ ಲಕ್ಷ್ಮೀನಾರಾಯಣ್‌ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೂ ನೋಟೀಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಲಾಗಿದೆ. 

ಏನಿದು ಪ್ರಕರಣ?: ಕೋರಮಂಗಲದ  ಮೂರನೇ ಬ್ಲಾಕ್‌ನಲ್ಲಿ ಬ್ರೇಕ್‌ ಫಾಸ್ಟ್‌ ಕ್ಲಬ್‌ ಹೋಟೆಲ್‌ಗೆ ಅಗತ್ಯವಿದ್ದ ಆರೋಗ್ಯಾಧಿಕಾರಿಗಳ ಶಿಫಾರಸು ಪತ್ರ ಕೊಡಿಸುವಲ್ಲಿ ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ್‌ ಅಧಿಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಾಸಿಕ್ಯೂಶನ್‌ಗೆ ನಡೆಸಲು ಅನುಮತಿ ನೀಡುವಂತೆ  2015ರ ಫೆಬ್ರವರಿಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್‌, ನಗರಾಭಿವೃದ್ಧಿ ಇಲಾಖೆ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿತ್ತು. ಆದರೆ ನಗರಾಭಿವೃದ್ಧಿ ಇಲಾಖೆ ಮುಖ್ಯಕಾರ್ಯದರ್ಶಿ, ಪ್ರಾಸಿಕ್ಯೂಶನ್‌ ಅನುಮತಿ ನನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರ ನೀಡಿದ್ದರು. ಇದನ್ನು ಪ್ರಶ್ನಿಸಿ (ಎನ್‌ಬಿಎಫ್ )ಹೈಕೋರ್ಟ್‌ ಮೆಟ್ಟಿಲೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next