Advertisement
ಜಿಲ್ಲೆಯ ಎಲ್ಲ ಖಾಸಗಿ, ಅನುದಾನಿತ, ಅನುದಾನರಹಿತ ಹಾಗೂ ಸರಕಾರಿ ಶಾಲೆಗಳಿಗೆ ಇದು ಅನ್ವಯವಾಗಲಿದೆ.
ಕೊರೊನಾ ಆತಂಕದಿಂದಾಗಿ ಅವಳಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಪತ್ರ ನೀಡಿ ಪೋಷಕರಿಗೆ ನೀಡುವಂತೆ ತಿಳಿಸಲಾಗಿದೆ. ಪತ್ರ ಓದಿದ ಪೋಷಕರಲ್ಲೂ ಗೊಂದಲ ಮೂಡಿದೆ. ಸಾಧ್ಯವಾದರೆ ಮಾಸ್ಕ್ ತೊಡಿಸಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಿ, ಜ್ವರ, ಕೆಮ್ಮು, ಶೀತ, ತಲೆನೋವು ಕಂಡುಬಂದರೆ ಅಂತಹ ಮಗುವನ್ನು ಶಾಲೆಗೆ ಕಳುಹಿಸಬೇಡಿ, ಜ್ವರ, ತಲೆನೋವಿನಂತಹ ಯಾವುದೇ ಲಕ್ಷಣ ಕಂಡು ಬಂದರೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ತತ್‌ಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ, ಶಾಲೆಯ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಿ ಸಹಿತ ಹಲವು ಅಂಶಗಳನ್ನು ಪತ್ರ ದಲ್ಲಿ ಉಲ್ಲೇಖೀಸಲಾಗಿದೆ. ಬ್ಯಾಂಕ್ ಸಿಬಂದಿ ಮಾಸ್ಕ್ ಧರಿಸಿ ಕೆಲಸ
ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಅತೀ ಹೆಚ್ಚು ಬೆರೆಯುವ ಕೆಲಸ ಇರುವ ಬ್ಯಾಂಕ್ ಸಿಬಂದಿಗೂ ಕೊರೊನಾ ಆತಂಕ ಎದುರಾಗಿದೆ. ಕೆಲವು ಬ್ಯಾಂಕ್‌ಗಳ ಸಿಬಂದಿಗೆ ಮಾಸ್ಕ್ ಧರಿಸಿಯೇ ಕೆಲಸ ನಿರ್ವಹಿಸುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿದೆ. ಹೀಗಾಗಿ ಕೆಲವು ಬ್ಯಾಂಕ್‌ಗಳ ಅಧಿಕಾರಿಗಳು, ಸಿಬಂದಿ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿಯೇ ಕೆಲಸ ನಿರ್ವಹಿಸುತ್ತಿದ್ದಾರೆ.