Advertisement

ಮುಂದುವರಿದ ಮಾದಕ ದ್ರವ್ಯ ಬೇಟೆ

12:28 AM Sep 23, 2020 | mahesh |

ಬೆಂಗಳೂರು: ಸ್ಯಾಂಡಲ್‌ವುಡ್‌ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕು ಗೊಳಿಸಿ ರುವ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಪೊಲೀಸರು ಅಂತಾರಾಷ್ಟ್ರೀಯ ಡ್ರಗ್ಸ್‌ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಇಬ್ಬರು ಪ್ರಮುಖ ರಾಜಕಾರಣಿಗಳ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಹಾಲಿ ಮತ್ತು ಮಾಜಿ ಸಂಸದರಿಬ್ಬರ ಪುತ್ರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ಪೀಣ್ಯ ಬಳಿ ಡ್ರಗ್ಸ್‌ ಪೆಡ್ಲರ್‌ಗಳಾದ ಕೇರಳ ಮೂಲದ ರಾಣಾ, ಗೋಕುಲಕೃಷ್ಣ ಮತ್ತು ಆಫ್ರಿಕಾ ಮೂಲದ ಡ್ಯಾನಿಯಲ್‌ ಎಂಬವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಐಎಸ್‌ಡಿ 25 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸುಮಾರು 15 ಮಂದಿ ಸಿನೆಮಾ-ಕಿರುತೆರೆಯ ಕಲಾವಿದರಿದ್ದಾರೆ.ಉಳಿದವರು ರಾಜಕೀಯ ಹಾಗೂ ಉದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದವರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇಬ್ಬರು ರಾಜಕೀಯ ಮುಖಂಡರ ಪುತ್ರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ ಈ ಪೈಕಿ ಒಬ್ಬರು ವಿಚಾರಣೆಗೆ ಬರಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಮತ್ತೂಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ ನೋಟಿಸ್‌ ಬಂದಿತ್ತು. ಪ್ರಶ್ನಿಸಿದಾಗ ಕೆಲವು ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ. ಅವರ ಬಗ್ಗೆ ನಿಮಗೆ ಗೊತ್ತಿರುವ ಮಾಹಿತಿ ಕೊಡಿ ಎಂದು ಸೂಚಿಸಿದ್ದರು. ನನ್ನ ಪ್ರಕಾರ ಡ್ರಗ್ಸ್‌ ಜಾಲದಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಬಗ್ಗೆ ಕೇಳಲು ಕರೆದಿರಬಹುದು ಅಥವಾ ಆ ವ್ಯಕ್ತಿಗಳನ್ನು ಈ ಮೊದಲು ಎಲ್ಲಾದರೂ ಭೇಟಿಯಾಗಿದ್ದಿರಾ, ಯಾವು ದಾದರೂ ಪಾರ್ಟಿಗೆ ಹೋಗಿದ್ದಿರಾ, ಎಂದು ಕೇಳಲು ಕರೆದಿರುವ ಸಾಧ್ಯತೆ ಯಿದೆ. ಈಗಾಗಲೇ ಕೆಲವು ನಟ- ನಟಿಯರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬರಬಹುದು ಎಂದರು.

ನಟಿ ಗೀತಾ ಭಾರತಿ ಭಟ್‌ ಮಾತನಾಡಿ, ಸೆ. 19ರಂದು ನೋಟಿಸ್‌ ಬಂದಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಯಾವ ಕಾರಣಕ್ಕೆ ಕರೆದಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನಮ್ಮನ್ನು ಆರೋಪಿಗಳ ನ್ನಾಗಿ ಮಾಡುತ್ತಿಲ್ಲ ಎಂದರು.

Udayavani is now on Telegram. Click here to join our channel and stay updated with the latest news.

Next