ಬಾಗಲಕೋಟೆ: ಸರಕಾರ ರೈತರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ರೈತರು ತಮಗೆ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದರ ಜೊತೆಗೆ ರೈತರನ್ನು ಅಲೆದಾಟ ತಪ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಮ್ಮ ಯಾವುದೇ ಕೆಲಸಗಳು ತ್ವರಿತಗತಿಯಲ್ಲಿ ಮಾಡುವುದಾಗಿ ತಿಳಿಸಿದರು.
ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ|ವೀರಣ್ಣ ಚರಂತಿಮಠ, ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ ಎಂದರು.
ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ, ಸರಕಾರವು ಮಣ್ಣಿನ ಹಾಗೂ ನೀರು ಸಂರಕ್ಷಣೆಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದು, ಅವುಗಳ ಅಳವಡಿಕೆಯಿಂದಾಗುವ ಲಾಭಗಳನ್ನು ರೈತರು ಪಡೆಯಬೇಕು. ಅವೈಜ್ಞಾನಿಕ ಕೃಷಿ ಪದ್ದತಿಯಿಂದ ರೈತರು ದೂರವಿದ್ದು, ತಜ್ಞರ ಸಲಹೆ ಮಾರ್ಗದರ್ಶನದಂತೆ ಉಳಿಮೆ ಬಿತ್ತನೆ ಮಾಡಬೇಕು ಎಂದರು.
Advertisement
ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನ್ನದಾತನ ಸಮಸ್ಯೆ ಈಡೇರಿಸುವುದರ ಜೊತೆಗೆ ಸರಕಾರ ತಂದಿರುವ ಯೋಜನೆಗಳ ಲಾಭ ತಲುಪಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
Related Articles
Advertisement
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸದಸ್ಯರಾದ ಹನಮವ್ವ ಕರಿಹೋಳಿ, ಹೂವಪ್ಪ ರಾಠೊಡ, ರಂಗಪ್ಪ ಗೌಡರ, ಶೋಭಾ ಬಿರಾದಾರಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ಮುತ್ತನಗೌಡ ಗೌಡರ, ಉಪಾಧ್ಯಕ್ಷ ದುರುಗಪ್ಪ ಸಿದ್ದಾಪುರ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ|ವೈ.ಕೆ.ಕೋಟೆಕಲ್ಲ, ಪ್ರಾದೇಶಿಕ ಕೃಷಿ ಸಂಶೋದನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ|ಎಸ್.ಡಿ.ಕಲಘಟಗಿ ಉಪಸ್ಥಿತರಿದ್ದರು.
ಕೃಷಿಕರಿಗೆ ಪ್ರಶಸ್ತಿ ವಿತರಣೆ:
ಆತ್ಮ ಯೋಜನೆ ಅಡಿಯಲ್ಲಿ 2018-19 ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿಕ ಪ್ರಶಸ್ತಿಯನ್ನು ದೇವನಾಳ ಗ್ರಾಮದ ಗಂಗಪ್ಪ ತುಂಬರಮಟ್ಟಿ (ಸಮಗ್ರ ಕೃಷಿ), ಜಿಲ್ಲಾ ಮಟ್ಟದ ಉದಯೋನ್ಮುಖ ಕೃಷಿಕ ಪ್ರಶಸ್ತಿಯನ್ನು ಶಿರೂರಿನ ನೀಲವ್ವ ಚಂದ್ರಶೇಖರ ಆಡಿನ (ಸಮಗ್ರ ಕೃಷಿ), ತಾಲೂಕು ಮಟ್ಟದ ಉದಯೋನ್ಮುಖ ಕೃಷಿಕ ಪ್ರಶಸ್ತಿಯನ್ನು ಹಳ್ಳೂರಿನ ರಾಮಣ್ಣ ಹುಚ್ಚಪ್ಪ ಸುನಗದ, ಗೋವಿನಕೊಪ್ಪದ ಶಿವರಾಯ ಹೂಗಾರ, ಕೇಸನೂರಿನ ಮಲ್ಲಪ್ಪ ತಿಪ್ಪಣ್ಣ ಕೊನಪ್ಪನವರ, ಡೋಮನಾಳದ ಶಾಂತವ್ವ ಅಂಬಿಗೇರ, ಬೊಮ್ಮಣಗಿಯ ಲಾಡಸಾಬ ರಾಜೇಸಾಬ ವಾಲಿಕಾರ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.