Advertisement
ನಕಲಿ ವಿಮೆ ಪಡೆದ ಕಾರಣಕ್ಕಾಗಿ ನರಿಮೊಗರಿನ ಅಬ್ದುಲ್ ಖಾದರ್ ಹಾಗೂ ವಿಶ್ವನಾಥ ಡಿ’ಸೋಜಾ ಅವರ ವಿರುದ್ಧ ದೂರು ದಾಖಲಾಗಿರುವ ಕಾರಣ ಅ. 20ರಂದು ಠಾಣೆಗೆ ಹಾಜರಾಗಿದ್ದರು. ಈ ಇಬ್ಬರಿಗೆ ಮೂರು ದಿನಗಳ ಅನಂತರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಯುನೈಟೈಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿಯ ಪುತ್ತೂರು ಶಾಖಾ ಪ್ರಬಂಧಕರು ನಕಲಿ ವಿಮೆ ಕುರಿತು ನಗರ ಠಾಣೆಗೆ ಅ. 20ರಂದು ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಮೇಲಾಧಿಕಾರಿಗಳಿಗೆ ಕಳಿಸಿದ್ದಾರೆ. ಅಲ್ಲದೇ ಶಾಸಕರಾದ ಸಂಜೀವ ಮಠಂದೂರು ಅವರಿಗೆ ದೂರು ಸಲ್ಲಿಸಿದ್ದೇವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. ಆಟೋ ಆರ್‌ಸಿ ಮಾಲಕ ಅಬ್ದುಲ್ ಖಾದರ್ ಮತ್ತು ವಿಶ್ವನಾಥ ಅವರಿಗೆ ನಕಲಿ ವಿಮೆ ನೀಡಿದ ಆರ್‌ಟಿಒ ದಲ್ಲಾಳಿ ಅಶ#ಕ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿಲ್ಲ. ಅ. 15ರಂದು ಅಸ್ಫಕ್‌ನನ್ನು ನಗರ ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭ ಆತ ತಪ್ಪೊಪ್ಪಿಕೊಂಡಿದ್ದ. ಅದಾಗ್ಯೂ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಈತನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿ ವಿಚಾರಣೆಗೆ ಒಳಪಡಿಸಿದರೆ ನಕಲಿ ವಿಮೆಯ ಮೂಲ ಪತ್ತೆ ಆಗಲಿದೆ. ಇಲ್ಲಿ ಖಾದರ್ ಹಾಗೂ ವಿಶ್ವನಾಥ ಅವರು ತಪ್ಪಿತಸ್ಥರಲ್ಲದಿದ್ದರೂ, ನಕಲಿ ವಿಮೆ ಹೊಂದಿರುವ ಕಾರಣ ಅವರ ಮೇಲೆ ಪ್ರಕರಣ ದಾಖಲಾಗಿದೆ. ವಿಚಾರಣೆ ಸಂದರ್ಭ ತನಗೆ ನಕಲಿ ವಿಮೆ ನೀಡಿ ವಂಚಿಸಿದ ಆರೋಪಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಅವರೆಲ್ಲರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.
Related Articles
ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿಗಳ ಪ್ರಕಾರ ವಾಹನಗಳು ಚಾಲ್ತಿಯಲ್ಲಿರುವ ವಾಹನ ವಿಮೆ ಹೊಂದಿರುವುದು ಕಡ್ಡಾಯವಾಗಿದೆ. ಕೆಲವು ಮಂದಿ ನಕಲಿ ವಾಹನ ವಿಮಾಗಳನ್ನು ಸೃಷ್ಟಿಸಿ ವಾಹನ ಮಾಲಕರಿಗೆ ನೀಡುತ್ತಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿದೆ. ವಾಹನ ಮಾಲಕರು ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ವಾಹನಗಳ ವಿಮೆ ಮಾಡಿಸುವಾಗ ಅಥವಾ ನವೀಕರಿಸುವಾಗ ಸಂಬಂಧಪಟ್ಟ ವಿಮಾ ಕಂಪೆನಿಗಳ ಡಾಟಾ ಬೇಸ್‌ನಲ್ಲಿ ಪಾಲಿಸಿ ವಿವರಗಳನ್ನು ಅಪ್‌ಡೇಟ್ ಮಾಡಲಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Advertisement