Advertisement

ನಟ ದುನಿಯಾ ವಿಜಯ್‌ ಕುಟುಂಬಕ್ಕೆ ನೋಟಿಸ್‌

11:47 AM Nov 04, 2018 | |

ಬೆಂಗಳೂರು: ಶಾಂತಿ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದ ಆರೋಪದ ಮೇಲೆ ಸಿಆರ್‌ಪಿಸಿ 107ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ನಟ ದುನಿಯಾ ವಿಜಯ್‌ ಸೇರಿ 7 ಮಂದಿ ಕುಟುಂಬ ಸದಸ್ಯರಿಗೆ ದಕ್ಷಿಣ ವಲಯ ಉಪ ಪೊಲೀಸ್‌ ಆಯುಕ್ತ ಕೆ.ಅಣ್ಣಾಮಲೈ ಎದುರು ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ನಟ ದುನಿಯಾ ವಿಜಯ್‌, ಅವರ ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿಗೌಡ, ನಾಗರತ್ನ ಸಹೋದರ, ವಿಜಯ್‌ ಪೋಷಕರು ಹಾಗೂ ಚಾಲಕ ಸೇರಿ 7 ಮಂದಿಗೂ ನೋಟಿಸ್‌ ನೀಡಿದ್ದಾರೆ. ಮೊದಲ ಪತ್ನಿ ನಾಗರತ್ನ ಹಾಗೂ ಕೀರ್ತಿಗೌಡ ಪರಸ್ಪರ ಜಗಳ ಮಾಡಿಕೊಂಡು ಗಿರಿನಗರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಿಸಿದ್ದರು.

ಜತೆಗೆ, ಹೊಸಕೆರೆಹಳ್ಳಿಯ ಮನೆಗೆ ಹೋಗಿದ್ದಾಗ ತಂದೆ ವಿಜಯ್‌ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿ ಪುತ್ರಿ ಮೋನಿಕಾ ಕೂಡ ತಂದೆ ವಿಜಯ್‌ ವಿರುದ್ಧ ಸೆ.24 ರಂದು ಗಿರಿನಗರ ಠಾಣೆಯಲ್ಲಿ ಮತ್ತೂಂದು ದೂರು ದಾಖಲಿಸಿದ್ದರು. ಅಲ್ಲದೆ, ಈ ಹಿಂದೆ ಬಾಮೈದುನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಸಿ ಇದೇ ಠಾಣೆಯಲ್ಲಿ ದೂರು ದಾಖಲಾಗಿತ್ತು.  

ಪದೇ ಪದೇ ಕೌಟುಂಬಿಕ ಕಲಹದ ಮೂಲಕ ಠಾಣೆ ಮೇಟ್ಟಿಲೇರುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಈ ಮೂಲಕ ಸಮಾಜದಲ್ಲಿ ಶಾಂತಿಗೆ ಭಂಗ ತರುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡುವ ಉದ್ದೇಶದಿಂದ ಇಡೀ ಕುಟುಂಬದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next