Advertisement
ಭಾಲ್ಕಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಪಲ್ಸ್ ಪೋಲಿಯೋ ತಾಲೂಕು ಕಾರ್ಯಪಡೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಲ್ಸ್ ಪೊಲೀಯೋ ಲಸಿಕೆ ಅಭಿಯಾನಕ್ಕಿಂತ ಮುಂಚಿತವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಲ್ಲಿಯೂ ಲಸಿಕೆಗೆ ಕೊರತೆಯಾಗಬಾರದು. ಯಾವೊಂದು ಮಗುವೂ ಲಸಿಕೆಯಿಂದ ವಂಚಿತರಾಗಬಾರದು ಎಂದು ನಿರ್ದೇಶನ ನೀಡಿದರು.
ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದರು. ತಾಲೂಕು ಶಿಕ್ಷಣಾಧಿಕಾರಿ ಶಿವಗುಂಡಪ್ಪಾ ಎಚ್.ಎಸ್., ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಟಿ.ರುಬಿನಾ, ವೈದ್ಯಾಧಿಕಾರಿ ಡಾ| ದೇವಕಿ ಖಂಡ್ರೆ, ಡಾ| ಜಗದೀಶ, ಡಾ| ನೇಹಾ ಸಮರೀನ್, ಡಾ| ಲೋಕೇಶ, ಡಾ| ಸುಕಾನಂದ, ಡಾ| ಸುಶೀಲಕುಮಾರ, ಡಾ| ಶೇಶನಾಗ,
ಡಾ|ಶರಣಬಸಪ್ಪಾ, ಡಾ|ಸ್ವಾತಿ ಪಾಟೀಲ, ಡಾ|ಅಶ್ವಿನಿ, ಡಾ| ಪ್ರಿಯಂಕಾ, ಆರೋಗ್ಯ ಇಲಾಖೆಯ ಶಕುಂತಲಾ, ಪ್ರತಿಭಾ, ಓಂಕಾರ, ವಿಶಾಲಕುಮಾರ, ತಾಲೂಕಿನ ಎಲ್ಲಾ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.