Advertisement
ಡಿಸಿ ಕಚೇರಿಯಲ್ಲಿ ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯುಕ್ತರು ಮತ್ತು ಅಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಹುಬ್ಬಳ್ಳಿಯ ಸ್ಟೇಶನ್ ರಸ್ತೆ, ಕೊಪ್ಪಿಕರರಸ್ತೆ, ದಾಜಿಬಾನ್ ಪೇಟೆ, ಬ್ರಾಡ್‌ವೇಹಾಗೂ ಧಾರವಾಡದ ಸುಭಾಸ ರಸ್ತೆ,ಟಿಕಾರೆ ರಸ್ತೆ, ಲೈನ್ ಬಜಾರ್‌ದಂತಹಪ್ರಮುಖ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡದೆ ಸ್ವಚ್ಛತೆ, ಸುಗಮಸಂಚಾರದೊಂದಿಗೆ ಸಿಟಿ ಇಮೇಜ್ ರೋಡ್‌ಗಳಾಗಿ ರೂಪಿಸಬೇಕು. ಇದರಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರುಹಾಗೂ ಇತರರು ನಗರದ ಬಗ್ಗೆ ಉತ್ತಮಅಭಿಪ್ರಾಯ ವ್ಯಕ್ತಪಡಿಸಲು ಹಾಗೂನಗರವನ್ನು ಮಾದರಿಯಾಗಿ ನಿರ್ಮಿಸಲು ಸಹಾಯವಾಗುತ್ತದೆ ಎಂದರು.
Related Articles
Advertisement
ಮಹಾನಗರದಲ್ಲೂ ಜನಸಂಪರ್ಕ ಸಭೆ :
ಗ್ರಾಮೀಣ ಭಾಗದಲ್ಲಿ ಆಯೋಜಿಸುತ್ತಿರುವ ಗ್ರಾಮ ವಾಸ್ತವ್ಯದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿಂದ ಪಾಲಿಕೆ ಆಯುಕ್ತರೊಂದಿಗೆ ಪ್ರತಿ
ತಿಂಗಳಿಗೊಂದು ದಿನ ವಲಯವಾರು ಜನಸಂಪರ್ಕ ಸಭೆ ಜರುಗಿಸಿ ನಾಗರಿಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದರು.
ಮೊದಲ ಸಭೆ ಏಪ್ರಿಲ್ ತಿಂಗಳಿನಲ್ಲಿ ಧಾರವಾಡದ ವಲಯ-1ರಲ್ಲಿ ಆಯೋಜಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಒಂದು ವಲಯದಲ್ಲಿ ನನ್ನೊಂದಿಗೆ ಪಾಲಿಕೆ ಆಯುಕ್ತರು ಭಾಗವಹಿಸುತ್ತಾರೆ. ಅದೇ ದಿನ ಉಳಿದ ವಲಯಗಳಲ್ಲಿಆಯಾ ವಲಯ ಸಹಾಯಕ ಆಯುಕ್ತರು ಜನಸಂಪರ್ಕ ಸಭೆ ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಕುರಿತ ವರದಿ ಸಲ್ಲಿಸಬೇಕು ಎಂದರು.
ಕಟ್ಟಡ ಸಿಸಿ ದುರ್ಬಳಕೆ; ಜಿಲ್ಲಾಧಿಕಾರಿ ಎಚ್ಚರಿಕೆ :
ಅವಳಿನಗರದ ಅನೇಕ ಕಟ್ಟಡಗಳ ಮಾಲೀಕರು ಕೆಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬದಲಾಗಿ ಅದನ್ನು ಅಂಗಡಿ, ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಕಟ್ಟಡದ ಸಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಪ್ರತಿ ಕಟ್ಟಡದ ಸಿಸಿ ಪರಿಶೀಲಿಸಬೇಕು. ಕೆಳಮಹಡಿಯಲ್ಲಿ ಪಾರ್ಕಿಂಗ್ ಸ್ಥಳ ತೋರಿಸಿ ಅನ್ಯ ಕಾರ್ಯಕ್ಕೆ ಬಳಸುತ್ತಿರುವ ಕಟ್ಟಡ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಿ ಸಿಸಿ ಕ್ಯಾನ್ಸಲ್ ಮಾಡಲು ನೋಟಿಸ್‌ಜಾರಿಗೊಳಿಸಬೇಕು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು. ಪಾರ್ಕಿಂಗ್‌ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿ, ಸ್ಟೋರ್‌ಗಳ ಟ್ರೆಡ್ ಲೈಸನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು. ಅನುಸರಣಾ ವರದಿಯನ್ನು 15 ದಿನಗಳಲ್ಲಿಸಲ್ಲಿಸಬೇಕು. ಪಾರ್ಕಿಂಗ್ ಸ್ಥಳ ಕ್ಲಿಯರ್ ಆಗದಿದ್ದಲ್ಲಿ ಬೆಸ್‌ಮೆಂಟ್ ಜಾಗದಲ್ಲಿಅಂಗಡಿ, ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅವಳಿನಗರದಲ್ಲಿ ಸಂಚಾರಿ ದಟ್ಟಣೆ ನಿಭಾಯಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ 140 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ವರದಿ ನೀಡಿದ್ದಾರೆ. ಶೀಘ್ರದಲ್ಲಿ ನಗರ ಪೊಲೀಸ್ ಆಯುಕ್ತರಿಂದ 140 ರಸ್ತೆಗಳ ಪಕ್ಕದಲ್ಲಿ ಪಾರ್ಕಿಂಗ್ ಸೌಲಭ್ಯಕ್ಕೆ ಅಧಿಸೂಚನೆ ಪ್ರಕಟಿಸಲಾಗುವುದು.– ನಿತೇಶ ಪಾಟೀಲ, ಜಿಲ್ಲಾಧಿಕಾರಿ