Advertisement

ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

12:45 PM Apr 13, 2021 | Team Udayavani |

ಶಿರಸಿ: ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಟ್ಟುನಿಟ್ಟಿನಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆನೀಡಿದ್ದಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

Advertisement

ಸೋಮವಾರ ನಗರದ ಮಿನಿವಿಧಾನ ಸೌಧದಲ್ಲಿ ತಾಲೂಕು ಹಂತದಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿನಡೆಸಿ ಮಾತನಾಡಿ, ತಾಲೂಕು ಹಂತದಎಲ್ಲ ಸರಕಾರದ ಇಲಾಖೆಗಳೂ ಆಯಾ ಹಂತದಲಿ ಕೋವಿಡ್‌ ಕುರಿತು ಜಾಗೃತಿ ಮೂಡಿಸಬೇಕು. ವೈದ್ಯಕೀಯಸೌಲಭ್ಯವನ್ನು ವ್ಯವಸ್ಥೆ ಮಾಡಿ ಕೊಂಡಿದ್ದೇವೆ. ಯಾರೂ ಆತಂಕ ಪಡಬಾರದು. ಆದರೆ, ಮಾಸ್ಕ್ ಧಾರಣೆ ಕಡ್ಡಾಯ. ಸಾಮಾಜಿಕಅಂತರ ಪಾಲಿಸಿ ಕೋವಿಡ್‌ ಅಲೆಯಿಂದ ಬಚಾವ್‌ ಆಗಬೇಕು ಎಂದು ಹೇಳಿದರು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಸೋಂಕು ಹರಡುತ್ತಿದೆ. ಎಂಟು ಊರಿನಲ್ಲಿ ನೈಟ್‌ ಕರ್ಫ್ಯೂ ಇದೆ. ಉತ್ತರ ಕನ್ನಡ ಗ್ರೀನ್‌ ಝೋನ್‌ನಲ್ಲೇಇರುವಂತೆ ಆಗಬೇಕು. ಸಂತೆಯನ್ನು ವಿಕಾಸಾ ಶ್ರಮ ಬಯಲಿಗೂ ಬದಲಾಯಿಸುವ ಕುರಿತು ತೀರ್ಮಾನ ಕೈಗೊಳ್ಳಲು ನಗರಸಭೆಗೆ ತಿಳಿಸಿದ್ದೇವೆ ಎಂದರು.

ತಾ.ಪಂ, ಗ್ರಾಮ ಪಂಚಾಯತ್‌, ಸರಕಾರಿ ಇಲಾಖೆ ವ್ಯವಸ್ಥೆಯಲ್ಲಿ ಜನರಲ್ಲಿ ಜಾಗೃತಿ ತರಬೇಕು. ಹರಡುವಿಕೆ ತಡೆಗಟ್ಟಲು ಸರಕಾರದ ನಿಯಮಾವಳಿಯನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಬೇಕು ಎಂದರು.

ರೋಗ ಲಕ್ಷಣ ಏನೇ ಬಂದರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಔಷಧ, ಚಿಕಿತ್ಸೆ ಎರಡೂ ಇದೆ. ಲ್ಯಾಬ್‌ ಟೆಸ್ಟ್‌ ವಿಳಂಬದಿಂದ ಕೋವಿಡ್‌ಸೋಂಕಿತರಿಗೆ ಸಮಸ್ಯೆ ಆಗಬಾರದು. ಈನಿಟ್ಟಿನಲ್ಲಿ ಶಿರಸಿಯಲ್ಲೇ ಕೋವಿಡ್‌ ಟೆಸ್ಟ್‌ಮಾಡಲೂ ಯತ್ನಿಸುತ್ತಿದ್ದೇವೆ. ಇನ್ನೊಂದು ಅಂಬ್ಯುಲೆನ್ಸ್‌ಗೂ ಪ್ರಯತ್ನ ಮಾಡಗುತ್ತದೆ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೊಲೀಸ್‌ ಉಪಾಧೀಕ್ಷಕ ರವಿ ನಾಯ್ಕ, ತಹಶೀಲ್ದಾರ್‌ ಎಂ.ಆರ್‌. ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿ ಡಾ| ವಿನಾಯಕ ಕಣ್ಣಿ, ಡಾ| ಗಜಾನನ ಭಟ್ಟ, ಎಫ್‌.ಜಿ. ಚಿಣ್ಣನವರ್‌,ಜಿ.ಪಂ. ಸದಸ್ಯೆ ಉಷಾ ಹೆಗಡೆ, ರವಿ ಹಳದೋಟ, ನಂದನ್‌ ಸಾಗರ್‌ ಇತರರು ಇದ್ದರು.

Advertisement

ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳ :

ಪಣಜಿ: ರಾಜ್ಯದಲ್ಲಿ ಕೋವಿಡ್ ಸೋಂಕು ಭಾರಿ ಪ್ರಮಾಣದಲ್ಲಿ ಹರಡುತ್ತಿದ್ದು, ಸೋಂಕು ದೃಢಪಡುತ್ತಿರುವ ಪ್ರಮಾಣ ಶೇ. 21ಕ್ಕೆ ತಲುಪಿದೆ.

ಕಳೆದ 11 ದಿನಗಳಲ್ಲಿ ಹೋಲಿಸಿದರೆ ಇದು ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಸದ್ಯ ಕೋವಿಡ್ ಸೋಂಕು ಹರಡುತ್ತಿರುವ ಪ್ರಮಾಣ ಆತಂಕಕಾರಿಯಾಗಿದೆ. ಇದುವರೆಗೂ ರಾಜ್ಯದಲ್ಲಿ 57,134 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.ಗೋವಾ ರಾಜ್ಯದಲ್ಲಿ ಏ. 4ರಂದು ಸೋಂಕು ದೃಢಪಡುತ್ತಿರುವ ಪ್ರಮಾಣ ಶೇ. 12.88ರಷ್ಟಿತ್ತು. ಏ. 8ರಂದು ಈ ಪ್ರಮಾಣ ಶೇ. 18.15ಕ್ಕೆಏರಿಕೆಯಾಗಿತ್ತು. ಏ. 19ರಂದು ಈ ಪ್ರಮಾಣ ಶೇ. 20.15ಕ್ಕೆಏರಿಕೆಯಾಗಿತ್ತು. ಇದೀಗ ರಾಜ್ಯದಲ್ಲಿ ಸೋಂಕು ದೃಢಪಡುತ್ತಿರುವಪ್ರಮಾಣ ಶೇ. 21ಕ್ಕೆ ತಲುಪಿದೆ. ರಾಜ್ಯ ಆರೋಗ್ಯ ಇಲಾಖೆ ಈ ಆತಂಕಕಾರಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next