Advertisement

ಆರೋಗ್ಯ ಕೇಂದ್ರ ಸ್ಥಳಾಂತರಕ್ಕೆ ಸೂಚನೆ

12:11 PM Dec 17, 2019 | Suhan S |

ದಾವಣಗೆರೆ: ಶಿಥಿಲಾವಸ್ಥೆಯಲ್ಲಿರುವ ಭಾರತಿ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಸೂಚಿಸಿದ್ದಾರೆ.

Advertisement

ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಅಂತರ್‌ ಇಲಾಖೆಗಳ ಕುಂದುಕೊರತೆ ಹಾಗೂ ಇತರೆ ಕೆಲಸ ಕಾರ್ಯಗಳ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತಿ ಕಾಲೋನಿ ಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಾವಸ್ಥೆಯಲ್ಲಿದ್ದು, ಇಂದೇ ತೋಟಗಾರಿಕಾ ಇಲಾಖಾ ಕಟ್ಟಡದ ಕೊಠಡಿಗೆ ಸ್ಥಳಾಂತರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಮಾತೃವಂದನ ಮತ್ತು ಮಾತೃಶ್ರೀ ಯೋಜನೆಗಳಡಿ ಫಲಾನುಭವಿಗಳ ಉಳಿತಾಯ ಖಾತೆ ತೆರೆಯಲು ಎಸ್‌ ಬಿಐ ಸೇರಿದಂತೆ ಕೆಲವು ಬ್ಯಾಂಕುಗಳು ಫಲಾನುಭವಿಗಳ ಪಾನ್‌ ಕಾರ್ಡ್‌ ಕೇಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ಆರೋಗ್ಯ ಇಲಾಖೆ ಫಲಾನುಭವಿಗಳಿಗೆ ಶೂನ್ಯ ಉಳಿತಾಯ ಖಾತೆ ತೆರೆಯಲೂ ಸಹ ಬ್ಯಾಂಕ್‌ನವರು ಪಾನ್‌ ಕಾರ್ಡ್‌ ಕೇಳುತ್ತಿದ್ದಾರೆ. ಆ ಕಾರಣಕ್ಕಾಗಿ ಉಳಿತಾಯ ಖಾತೆ ತೆರೆಯದೆ ಬಾಕಿ ಇರಿಸಲಾಗಿದೆ ಎಂದಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ ಧ್ವನಿಗೂಡಿಸಿದರು.

ಮಾತೃವಂದನ ಮತ್ತು ಮಾತೃಶ್ರೀ ಯೋಜನೆಗಳಂತಹ ಫಲಾನುಭವಿಗಳ ಖಾತೆ ತೆರೆಯಲು ಪಾನ್‌ಕಾರ್ಡ್‌ ನ ಅವಶ್ಯಕತೆ ಇರುವುದಿಲ್ಲ. ಬ್ಯಾಂಕ್‌ಗಳಿಗೆ ಮಾರ್ಗಸೂಚಿ ನೀಡಲಾಗಿದೆ ಎಂದು ಲೀಡ್‌ಬ್ಯಾಂಕ್‌ ವ್ಯವಸ್ಥಾಪಕ ಸುಶ್ರುತ್‌ ಡಿ. ಶಾಸ್ತ್ರಿ ತಿಳಿಸಿದರು. ಪಾನ್‌ಕಾರ್ಡ್‌ ಕೇಳುವ ಬ್ಯಾಂಕ್‌ಗಳ ಪಟ್ಟಿ ಒದಗಿಸಿ, ಅಂತಹ ಬ್ಯಾಂಕ್‌ಗಳ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಗಾಜಿನ ಮನೆಗೆ ಸಮರ್ಪಕ ರಸ್ತೆ ಇಲ್ಲ. ಕೆಎಸ್ಸಾರ್ಟಿಸಿ ಬಸ್‌ ಸಹ ಸರಿಯಾಗಿ ಬರುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌ ತಿಳಿಸಿದರು.

Advertisement

ಮಹಾನಗರ ಪಾಲಿಕೆಯವರು ಗಾಜಿನ ಮನೆಗೆ ಸೂಕ್ತ ಸಂಪರ್ಕ ರಸ್ತೆ ವ್ಯವಸ್ಥೆ ಮಾಡಬೇಕು. ಕೆಎಸ್ಸಾರ್ಟಿಸಿಯವರು ಇನ್ನೊಂದೆರಡು ಟ್ರಿಪ್‌ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಮರಳು ಸಾಕಷ್ಟಿದೆ. ಸರ್ಕಾರಿ ಕೆಲಸಕ್ಕೆ ಯಾವುದೇ ತೊಂದರೆ ಇಲ್ಲದ ಹಾಗೆ ಬಳಸಿಕೊಳ್ಳಬಹುದು. ಹೊನ್ನಾಳಿಯಲ್ಲಿ 970 ಮೆಟ್ರಿಕ್‌ ಟನ್‌ನಷ್ಟಿದೆ. ಎಸ್‌ಆರ್‌ ದರದಲ್ಲಿ ನಿಯಮಾನುಸಾರ ಯಾರು ಬೇಕಾದರೂ ಖರೀದಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ಥಳೀಯವಾಗಿ ಮರಳನ್ನು ಅಕ್ರಮವಾಗಿಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ತಮ್ಮಂತೆ ಎಸ್‌ಪಿ, ಸಿಇಒ ಅತ್ಯಂತ ಜವಾಬ್ದಾರಿಯಿಂದ ಎಲ್ಲ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಎಲ್ಲ ಹಂತದಲ್ಲಿ ಅಧಿ ಕಾರಿಗಳು, ಸಿಬ್ಬಂದಿಕೆಲಸ ಮಾಡಬೇಕು. ಅಕ್ರಮವಾಗಿ ಯಾವ ಕೆಲಸವೂ ಆಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡುವ ಮೂಲಕ ಪ್ರಗತಿ ಸಾ ಧಿಸಬೇಕು ಎಂದು ಜಿಲ್ಲಾಧಿಕಾರಿಸೂಚನೆ ನೀಡಿದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕಾಧಿ ಕಾರಿ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾ ಧಿಕಾರಿ ಜಿ. ನಜ್ಮಾ, ಸ್ಮಾರ್ಟ್‌ಸಿಟಿಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next