Advertisement

ಮೆರಿಟ್‌, ರೋಸ್ಟರ್‌ ಪದ್ಧತಿ ಅನುಸಾರ ಪ್ರವೇಶಾತಿಗೆ ಸೂಚನೆ

10:55 PM Sep 09, 2020 | mahesh |

ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2020-21ನೇ ಸಾಲಿನ ಆನ್‌ಲೈನ್‌ ದಾಖಲಾತಿ ಸಂಬಂಧ ಮೆರಿಟ್‌ ಹಾಗೂ ರೋಸ್ಟರ್‌ ಪಟ್ಟಿ ಅಂತಿಮಗೊಳಿಸಿ ಪ್ರವೇಶಾತಿ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Advertisement

ಪ್ರವೇಶಾತಿಗೆ ಸಂಬಂಧಿಸಿದ ಕ್ರಮಗಳ ಕುರಿತು ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಆದ್ಯತೆ ಮೇರೆಗೆ ಕಾಲೇಜುವಾರು ಮೆರಿಟ್‌ ಹಾಗೂ ರೋಸ್ಟರ್‌ ಅನ್ವಯ ಪಟ್ಟಿಯನ್ನು ಸಿದ್ಧಪಡಿಸಿ ಎರಡು ಹಂತಗಳಲ್ಲಿ ಕಾಲೇಜುಗಳಿಗೆ ರವಾನಿಸಲಾಗಿದೆ. ಇದರನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ಪ್ರಾಂಶು ಪಾಲರಿಗೆ ಸೂಚಿಸಲಾಗಿದೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳ ಕಾಲೇಜುವಾರು ಮೆರಿಟ್‌, ರೋಸ್ಟರ್‌ ಪಟ್ಟಿಯನ್ನು ಮುಂದಿನ ಹಂತದಲ್ಲಿ ಕೇಂದ್ರ ಕಚೇರಿಯಿಂದ ಕಾಲೇಜುಗಳಿಗೆ ಬಿಡು ಗಡೆ ಮಾಡಲಾಗುವುದಿಲ್ಲ. ಅಲ್ಲದೆ, ಸಲ್ಲಿಕೆಯಾದ ಅರ್ಜಿಗಳನ್ನು ಕಾಲೇ ಜಿನ ಪ್ರವೇಶಾತಿ ಪೋರ್ಟಲ್‌ಗ‌ಳಲ್ಲಿ ನೇರವಾಗಿ ದೊರೆಯುವಂತೆ ಮಾಡಬೇಕು. ಸ್ವೀಕೃತ ಎಲ್ಲ ಅರ್ಜಿಗಳನ್ನು ಕಾಲೇಜು ಹಂತದಲ್ಲೇ ಪರಿಶೀಲಿಸಿ ಪ್ರವೇಶ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next