Advertisement

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸೂಚನೆ

01:57 PM Jan 03, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಗಣಿ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು.

Advertisement

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು, ಕಾಳೇನಹಳ್ಳಿ, ಚನ್ನನಕೆರೆ, ಹಂಗರಹಳ್ಳಿಗ್ರಾಮಗಳ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಸ್ಥಳಗಳಿಗೆ ಭೇಟಿ ನೀಡಿದ್ದು, ಅಕ್ರಮ ಗಣಿಗಾರಿಕೆನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆಎಂದು ಕೆಆರ್‌ಎಸ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ದಂಡ ಕಟ್ಟದಿದ್ದರೆ ವಿದ್ಯುತ್‌ ಕಡಿತ: ಅಕ್ರಮ ಗಣಿಗಾರಿಕೆ ಮಾಡುತ್ತಿರುವವರಿಗೆ ದಂಡ ವಿಧಿಸಿದ್ದು, ದಂಡ ಕಟ್ಟದಿದ್ದರೆ ವಿದ್ಯುತ್‌ ಕಡಿತ ಮಾಡುವಂತೆಸೂಚನೆ ನೀಡಲಾಗಿದೆ. ಅದರಂತೆ ರಾಜಧನ ಹೆಚ್ಚಿಸಿ,ಗಣಿಗಾರಿಕೆಗೆ ಅನುಮತಿ ನೀಡಲಾಗುವುದು. ಇದರಜತೆಗೆ ಅಕ್ರಮವಾಗಿ ಕಲ್ಲು ಗಣಿಗಾರಿಕೆನಡೆಸುತ್ತಿರುವವರಿಗೆ ದಂಡ ಹಾಗೂ ರಾಜಧನ ಪಾವತಿ ಮಾಡುವಂತೆ ಸೂಚಿಸ ಲಾಗುವುದು. ಈಗಾಗಲೇಚನ್ನನಕೆರೆ ಗ್ರಾಮದ ಬಳಿರಾಮದೇವ್‌ ಎಂಬ ಗಣಿಮಾಲೀಕ ರಾಜಧನ ಪಾವತಿಸಿಲ್ಲ. ಆತನ ಪರವಾನಗಿ ಜಪ್ತಿಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾಲಾವಕಾಶ ನಿಗದಿ: ಅಕ್ರಮ ಕಲ್ಲು ಗಣಿಗಾರಿಕೆನಡೆಸುತ್ತಿರುವವರಿಗೆ ದಂಡ ಹಾಗೂ ರಾಜಧನ ಪಾವತಿಸಿಕಾನೂನು ಚೌಕಟ್ಟಿನಲ್ಲಿ ಕಲ್ಲು ಗಣಿಗಾರಿಕೆನಡೆಸಲು ಅನುಮತಿ ಪಡೆಯಲು ಕಾಲಾವಕಾಶನೀಡಲಾಗುವುದು. ಕಡ್ಡಾಯವಾಗಿ ನಿಯಮಗಳನ್ನುಪಾಲಿಸಬೇಕು. ಸುತ್ತಮುತ್ತಲಿನ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಕೃಷಿ ಚಟುವಟಿಕೆಗಳಿಗೆ ಹಾನಿಯಾಗದಂತೆ ಗಣಿಗಾರಿಕೆ ನಡೆಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.

134 ಗಣಿಗಾರಿಕೆಗೆ ಅನುಮತಿ ಸಮಸ್ಯೆ ಇತ್ಯರ್ಥ: 2012ರಿಂದ ಹಂಗರಹಳ್ಳಿ ಹಾಗೂ ಮುಂಡಗದೊರೆಗ್ರಾಮಗಳ ಬಳಿ ಅರಣ್ಯ ಮತ್ತು ಗಣಿ ಇಲಾಖೆ ನಡುವೆಗಡಿ ನಿಗದಿಯಲ್ಲಿ ತಾಂತ್ರಿಕ ಕಾರಣಗಳಿಂದ 134ಗಣಿಗಾರಿಕೆಗೆ ಅನುಮತಿ ವಿಳಂಬವಾಗಿತ್ತು. ಅದನ್ನುಶೀಘ್ರವೇ ಇತ್ಯರ್ಥಪಡಿಸಲು ಸರ್ವೆ ನಡೆಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

Advertisement

ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ದಂಡಹಾಗೂ ರಾಜಧನ ಪಾವತಿಸದೇ ನಡೆಸುವಗಣಿಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮೂರು ತಿಂಗಳೊಳಗೆ ಸರ್ವೆ: ಕೆಆರ್‌ಎಸ್‌ ಜಲಾಶಯದ ವ್ಯಾಪ್ತಿಯಲ್ಲಿ ಬೇಬಿಬೆಟ್ಟ ಸೇರಿದಂತೆಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆಡ್ರೋನ್‌ ಸರ್ವೆ ನಡೆಸಲಾಗುವುದು. ಡ್ಯಾಂನಿಂದಎಷ್ಟು ದೂರ ಗಣಿಗಾರಿಕೆ ನಡೆಸಬಹುದು. ಇದರಿಂದ ಜಲಾಶಯಕ್ಕೆ ಆಗುವ ತೊಂದರೆ ಬಗ್ಗೆ ಕೂಲಂಕುಷವಾಗಿ ಸರ್ವೆ ನಡೆಸಿ ವರದಿ ನೀಡುವಂತೆ ಖಾಸಗಿಏಜೆನ್ಸಿಗೆ ನೀಡಲಾಗಿದೆ. ಮೂರು ತಿಂಗಳೊಳಗೆ ವರದಿಬರಲಿದ್ದು, ಅದರ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಚಿವ ಕೆ.ಸಿ.ನಾರಾಯಣಗೌಡ, ಡೀಸಿ ಡಾ. ಎಂ.ವಿ.ವೆಂಕಟೇಶ್‌, ಜಿಪಂ ಸಿಇಒ ಎಸ್‌.ಎಂ.ಜುಲ್‌ ಫಿಖಾರ್‌ ಉಲ್ಲಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪುಷ್ಪಾ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್‌ ರೂಪ ಹಾಜರಿದ್ದರು.

ರಾಜಧನ ಹೆಚ್ಚಳಕ್ಕೆ ಸೂಚನೆ :  ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಿಗೆ ರಾಜಧನ ಹೆಚ್ಚಿಸಿ ಪಾವತಿಸುವಂತೆ ಸೂಚಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ್‌ ಅಧಿಕಾರಿಗಳಿಗೆ ತಿಳಿಸಿದರು. ಅಕ್ರಮವಾಗಿ ನಡೆಯುತ್ತಿರುವುದರಿಂದ ಸರ್ಕಾರಕ್ಕೆಯಾವುದೇ ಆದಾಯವಿಲ್ಲ. ಆದ್ದರಿಂದ ತಾಲೂಕು ಆಡಳಿತ, ಗಣಿ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡು ಅವರಿಗೆ ನೋಟಿಸ್‌ನೀಡಬೇಕು. ಅಲ್ಲದೆ, ರಾಜಧನ ಹೆಚ್ಚಳ ಮಾಡಿ ವಸೂಲಿ ಮಾಡಬೇಕು ಎಂದರು.

ಸ್ತಬ್ಧವಾಗಿದ್ದ ಗಣಿ ಯಂತ್ರಗಳು: ಸಚಿವ ಸಿ.ಸಿ.ಪಾಟೀಲ್‌ ಗಣಿಗಾರಿಕೆ ಪ್ರದೇಶಕ್ಕೆ ಆಗಮಿಸುತ್ತಿರುವ ವಿಷಯ ಮುಂಚಿತವಾಗಿ ಗಣಿ ಮಾಲೀಕರಿಗೆ ತಿಳಿದಿದ್ದರಿಂದಎಲ್ಲ ಗಣಿ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಇದರಿಂದ ಗಣಿ ಪ್ರದೇಶ ಸ್ತಬ್ಧವಾಗಿತ್ತು. ಅಲ್ಲದೆ, ಭಾಗದಲ್ಲಿ ನಿತ್ಯ ನೂರಾರು ಟಿಪ್ಪರ್‌, ಲಾರಿಗಳು ಸಂಚರಿಸುತ್ತಿದ್ದವು.ಆದರೆ, ಶನಿವಾರ ಸಚಿವರು ಬರುವ ವಿಚಾರ ತಿಳಿದಿದ್ದರಿಂದ ಟಿಪ್ಪರ್‌, ಲಾರಿಗಳುಆರ್ಭ ಟಿಸದೆ ಮೌನವಾಗಿ ಸಾಲಾಗಿ ಒಂದೆಡೆ ನಿಂತಿದ್ದ ದೃಶ್ಯಗಳು ಕಂಡು ಬಂದವು.ಅಲ್ಲದೆ, ಗಣಿ ಗಾರಿಕೆ ನಡೆಯುತ್ತಿತ್ತು ಎಂಬುದಕ್ಕೆ ಕೆಲವು ಕಲ್ಲು ಕೊರೆಯುವಯಂತ್ರಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳು ಸ್ಥಳದಲ್ಲಿಯೇ ಇದ್ದವು. ಆದರೆ ಕಾರ್ಮಿಕರು ಮಾತ್ರ ನಾಪತ್ತೆಯಾಗಿದ್ದರು.

ಗಣಿ ಮಾಲೀಕರಿಂದ ಸಚಿವರಿಗೆ ಸನ್ಮಾನ : ಟಿ.ಎಂ.ಹೊಸೂರು ಗೇಟ್‌ಗೆ ಬರುತ್ತಿದ್ದಂತೆತಾಲೂಕು ಆಡಳಿತದಿಂದ ತಹಶೀಲ್ದಾರ್‌ ರೂಪಸಚಿವರನ್ನು ಸ್ವಾಗತಿಸಿದರು. ನಂತರ ಸ್ವಲ್ಪದೂರದಲ್ಲಿಯೇ ಗಣಿ ಮಾಲೀಕರಅಸೋಸಿಯೇಷನ್‌ ವತಿಯಿಂದ ಗಣಿ ಮಾಲೀಕರು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next