Advertisement

ಪಿಒಪಿ ಗಣೇಶ ಮೂರ್ತಿ ತಯಾರಿಸದಿರಲು ಸೂಚನೆ

02:25 PM Jul 12, 2019 | Team Udayavani |

ಗೋಕಾಕ: ರಸಾಯನಿಕ ಮಿಶ್ರಿತ ಬಣ್ಣದ ಗಣಪನ ಮೂರ್ತಿ ಹಾಗೂ ಪಿಒಪಿ ನಿರ್ಮಿತ ಗಣಪ ಮೂರ್ತಿಗಳನ್ನು ತಯಾರಿಸಿದರೇ ಪರಿಸರ ಸಂರಕ್ಷಣೆ ಕಾಯ್ದೆ-1976ರ ಅನ್ವಯ ಶಿಕ್ಷೆ ವಿಧಿಸಲಾಗುವುದು ಎಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಹೇಳಿದರು.

Advertisement

ಗುರುವಾರ ತಾಲೂಕಿನ ಕೊಣ್ಣೂರ ಪುರಸಭೆಯ ಸಭಾಭವನದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ರಾಸಾಯಿನಿಕ ಬಣ್ಣದಿಂದ ಸಿದ್ದಪಡಿಸಿದ ಗಣೇಶ ಮೂರ್ತಿ ತಯಾರಿಸದಂತೆ ಗಣೇಶ ಮೂರ್ತಿಕಾರರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗಣೇಶ ಮೂರ್ತಿಕಾರರು ಪರಿಸರ ಗಣೇಶ ಮೂರ್ತಿ ತಯಾರಿಸಿ ಸರ್ಕಾರದ ಆದೇಶ ಪಾಲನೆ ಮಾಡಬೇಕು. ಇದಕ್ಕೆ ಮೂರ್ತಿ ತಯಾರಕರು ಮತ್ತು ಮೂರ್ತಿಗಳ ಬಳಕೆದಾರರು ಸಹಕರಿಸಬೇಕು. ತಪ್ಪಿದಲ್ಲಿ ಪುರಸಭೆಯಿಂದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಗೋಕಾಕ ನಗರಸಭೆ ಪರಿಸರ ಅಭಿಯಂತ ಮಂಜುನಾಥ ಗಜಾಕೋಶ ಮಾತನಾಡಿ, ಪಿ.ಒಪಿ. ಮತ್ತು ಹಾನಿಕಾರಕ ರಸಾಯನಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಕುಡಿಯುವ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ನೀರು ಮಾಲಿನ್ಯಗೊಳ್ಳುತ್ತದೆ. ಆದ್ದರಿಂದ ಗಣಪತಿ ಉತ್ಸವವನ್ನು ಮಣ್ಣಿನ ಮತ್ತು ಬಣ್ಣ ರಹಿತ ವಿಗ್ರಹಗಳನ್ನು ಪ್ರತಿಷ್ಠಾಪಿಸುದರೊಂದಿಗೆ ಮುಂದಿನ ಪೀಳಿಗೆಗೆ ಒಳ್ಳೆಯ ನೀರು ಮತ್ತು ಪರಿಸರವನ್ನು ನೀಡಬೇಕು ಎಂದರು.

ಈ ವೇಳೆ ಗಣೇಶ ಮೂರ್ತಿಕಾರರು ಮಾತನಾಡಿ, ನಮ್ಮ ಉದ್ಯೋಗ ಗುಡಿ ಕೈಗಾರಿಕೆಯಾಗಿದ್ದು ರಾಜ್ಯದಲ್ಲಿಯೇ ಮಾದರಿ ಮೂರ್ತಿಗಳ ತಯಾರಿಕೆ ನಮ್ಮ ಕೊಣ್ಣೂರಿನಲ್ಲಿ ಆಗುತ್ತಿವೆ. ಮೂರ್ತಿ ತಯಾರಿಕೆ ಸಂಘಗಳಿದ್ದು, ಸಹಾಯಧನದ ಅವಶ್ಯಕತೆಯಿದೆ. ನಮಗೆ ಸರಕಾರದ ಸಹಾಯಧನ ನೀಡಿಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ವಿನೋದ ಕರನಿಂಗ, ಮಾರುತಿ ಪೂಜೇರಿ, ಆರ್‌.ಎಸ್‌. ಕಡಲಗಿ, ಇಮ್ರಾನ ಜಮಾದಾರ, ರಾಮಲಿಂಗ ಮಗದುಮ್‌, ಬಿ.ಬಿ. ಹುಕ್ಕೇರಿ, ಸಾವಂತ ತಳವಾರ, ಸಾಯರಾಬಾನು ಜಮಾದಾರ, ರಜಿಯಾಬೇಗಂ ಹೊರಕೇರಿ, ಮಂಗಲಾ ತೇಲಿ, ಸಿಬ್ಬಂದಿಗಳಾದ ಬಿ.ಡಿ ಕುಮರೇಶಿ, ವೈ.ಎನ್‌. ಚಲವಾದಿ ಹಾಗೂ ಗಣಪತಿ ಮೂರ್ತಿಕಾರರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next