Advertisement

ವಿರಾಟ್‌ ಕೊಹ್ಲಿಗೆ ನೋಟಿಸ್‌ ಜಾರಿ

11:28 PM Jan 27, 2021 | Team Udayavani |

ತಿರುವನಂತಪುರಂ: ಆನ್‌ಲೈನ್‌ ಜೂಜು ಪರ ಪ್ರಚಾರ ಕೈಗೊಂಡ ಅನೇಕ ಸೆಲೆಬ್ರಿಟಿಗಳಿಗೆ ಮತ್ತೂಮ್ಮೆ ಆತಂಕ ಎದುರಾಗಿದೆ. ಮದ್ರಾಸ್‌ ಹೈಕೋರ್ಟ್‌ ಬಳಿಕ ಕೇರಳ ಹೈಕೋರ್ಟ್‌ನಿಂದ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ನಟಿ ತಮನ್ನಾ ಭಾಟಿಯಾ, ನಟ ಅಜು ವರ್ಗೀಸ್‌ ಅವರಿಗೆ ನೋಟಿಸ್‌ ಜಾರಿಯಾಗಿದೆ.

Advertisement

ಐಪಿಎಲ್‌ ಸಂದರ್ಭದಲ್ಲಿ ಆನ್‌ಲೈನ್‌ ಜೂಜು ಪ್ರಚಾರ ಮಾಡುತ್ತಿ ರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ, ಸಾವು ನೋವು ಸಂಭವಿಸಿದೆ. ಆ್ಯಪ್‌ ಆಧಾರಿತ ಜೂಜು ನಿಲ್ಲಿಸಬೇಕು ಎಂದು ಕೋರಿ ತ್ರಿಶ್ಶೂರ್‌ ಮೂಲದ ಪಾಲಿ ವರ್ಗೀಸ್‌ ಎಂಬವರು ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಕೇರಳ ಹೈಕೋರ್ಟ್‌ ಎಲ್ಲರಿಗೂ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ಈ ಬಗ್ಗೆ ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next