Advertisement

ಸರ್ವೀಸ್‌ ರಸ್ತೆ ದುರಸ್ತಿಗೆ ಸೂಚನೆ

08:25 AM Oct 23, 2019 | Team Udayavani |

ಹುಬ್ಬಳ್ಳಿ: ಗಬ್ಬೂರ ಟೋಲ್‌ನಾಕಾ ಸಮೀಪದ ಸೇವಾ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ಅವುಗಳ ದುರಸ್ತಿ ಕಾರ್ಯ ಮಾಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.

Advertisement

ಗಬ್ಬೂರು ಟೋಲ್‌ನಾಕಾದ ಅವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಹಾಗೂ ಇನ್ನಿತರ ಕಾರಣ ನೀಡಿ ಕಾಮಗಾರಿ ವಿಳಂಬ ಮಾಡದೆ 20 ದಿನಗಳಲ್ಲಿ ಸೇವಾ ರಸ್ತೆಗಳ ದುರಸ್ತಿ ಕಾರ್ಯ ಮಾಡಬೇಕು. ದಿನನಿತ್ಯ ಸಂಚರಿಸುವ ಸ್ಥಳೀಯರಿಗೆ ಸೇವಾ ರಸ್ತೆ ಹಾಳಾಗಿರುವುದರಿಂದ ತುಂಬಾ ತೊಂದರೆಯಾಗಿದೆ. ಗಬ್ಬೂರು ಟೋಲ್‌ ನಾಕಾದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಈಗಾಗಲೇ ಸಂಬಂಧಿ ಸಿದವರಿಗೆ ನೋಟಿಸ್‌ ಕಳುಹಿಸಲಾಗಿದೆ. ಸವಾರರಿಂದ ಟೋಲ್‌ ಸಂಗ್ರಹಿಸಿ ಅಗತ್ಯ ಮೂಲ ಸೌಕರ್ಯ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಅವ್ಯವಸ್ಥೆ ಸರಿಪಡಿಸಿ ಎಂದು ಎಚ್ಚರಿಸಿದರು.

ಮುಖಂಡ ಮೋಹನ ಅಸುಂಡಿ ಮಾತನಾಡಿ, ಟೋಲ್‌ನಾಕಾ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಜಾಗ ನೀಡಿದ ರೈತರ ಕುಟುಂಬ ಸದಸ್ಯರಿಗೆ ಟೋಲ್‌ನಾಕಾದಲ್ಲಿ ಉದ್ಯೋಗ ನೀಡುವ ಭರವಸೆ ಇದುವರೆಗೂ ಈಡೇರಿಲ್ಲ. ಟ್ರಾಕ್ಟರ್‌ ಮೂಲಕ ಕೃಷಿ ಉತ್ಪನ್ನಗಳನ್ನು ಸಾಗಿಸುವ ಸ್ಥಳೀಯ ರೈತರಿಂದಲೂ ಟೋಲ್‌ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮೂಲ ಸೌಕರ್ಯ ಒದಗಿಸುವವರೆಗೂ ಯಾರಿಂದಲೂ ಟೋಲ್‌ ವಸೂಲಿ ಮಾಡದಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಮುಖಂಡರಾದ ಕುಮಾರ ಕುಂದನಹಳ್ಳಿ, ನಜೀರ್‌ ಹೊನ್ಯಾಳ, ರಾಷ್ಟ್ರೀಯ ಹೆದ್ದಾರಿ ಅಧಿ ಕಾರಿಗಳಾದ ಆರ್‌.ಕೆ. ಮಠದ, ಮುಖಂಡರಾದ ವಿಜನಗೌಡ ಪಾಟೀಲ, ಪ್ರಸನ್ನ ಮಿರಜಕರ, ಗಣೇಶ ದೊಡ್ಡಮನಿ, ನಂದಿ ಹೈವೇ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next