ಮಂಡ್ಯ: ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಸೇರಬೇಕಾದ ಸುಮಾರು 5 ಎಕರೆಗೂ ಹೆಚ್ಚು ಜಾಗದಲ್ಲಿರುವ ತಮಿಳು ಕಾಲೋನಿಯನ್ನು ಶೀಘ್ರ ತೆರವುಗೊಳಿಸುವಂತೆ ಡಿಸಿಎಂ ಡಾ.ಸಿ. ಎನ್. ನಾರಾಯಣ್ ಹೇಳಿದರು. ಸುದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಗೆ ಹೊಂದಿಕೊಂಡಿರುವ 5 ಎಕರೆ ಜಾಗವನ್ನು ಬಹಳ ಹಿಂದೆಯೇ ತೆರವು ಮಾಡಬೇಕಿತ್ತು.
ಅಲ್ಲಿಯ ನಿವಾಸಿಗಳಿಗೆ ಪರ್ಯಾಯ ವಾಸದ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಭರದಿಂದ ಸಾಗಿದೆ. ತಕ್ಷಣ ಅವರನ್ನೆಲ್ಲ ಮನೆಗಳಿಗೆ ಶಿಫ್ಟ್ ಮಾಡಿ ಆ ಜಾಗವನ್ನು ಜಿಲ್ಲಾಸ್ಪತ್ರೆಗೆ ಬಿಡಿಸಿಕೊಡಲಾಗುವುದು. ಆ ಮೂಲಕ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕೊಡಲು ಅನುಕೂಲವಾಗುತ್ತದೆ. ಈಗ ಆಸ್ಪತ್ರೆಯ ಅಕ್ಕಪಕ್ಕ ಜಾಗದ ಕೊರತೆಯಿಂದ ಅಭಿವೃದಿ ಕೆಲಸ ಮಾಡಲು ತೊಡಕಾಗಿದೆ ಎಂದು ಹೇಳಿದರು.
ಲಾಕ್‌ಡೌನ್ ಸಂಪೂರ್ಣ ಸ್ಥಗಿತಗೊಂಡ ನಂತರ ಎಲ್ಲಾ ಉನ್ನತ ಶಿಕ್ಷಣ ಕಾಲೇಜು, ವಿವಿಯ ಪರೀಕ್ಷೆ, ಮುಂದಿನ ತರಗತಿಗಳ ಬಗ್ಗೆ ಕ್ಯಾಲೆಂಡರ್ ಸಿದಟಛಿಪಡಿಸ ಲಾಗುವುದು. ಕೋವಿಡ್ 19 ತಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ವೇಳೆ ಯಲ್ಲಿ ಕಾಲೇಜು ಆರಂಭಿಸಿ ಪರೀಕ್ಷೆ ನಡೆಸುವುದು ಕಷ್ಟ. ಹೀಗಾಗಿ ಯಾವುದೇ ತೀರ್ಮಾನಕ್ಕೆ ನಾವು ಬಂದಿಲ್ಲ ಎಂದರು. ರಾಜ್ಯದಲ್ಲಿ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವ ಬಗ್ಗೆ ಕೂಗು ಕೇಳಿ ಬಂದಿದೆ. ಆದರೆ, ಏಕಾಏಕಿ ಖಾಯಂ ಮಾಡುವುದು ಕಷ್ಟಸಾಧ್ಯ.
ಅವರಿಗೂ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ನಂತರ ನೇಮಕಾತಿ ಮಾಡಿ ಕೊಳ್ಳಲು ಚಿಂತನೆ ನಡೆದಿದೆ. ಅತಿಥಿ ಉಪ ನ್ಯಾಸಕರಿಗೆ ಕಳೆದ ಮಾರ್ಚ್ 23ರರವಗೆ ಸಂಬಳ ನೀಡಲು 53 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಈ ತಕ್ಷಣ ಅವರ ಸಮಸ್ಯೆ ಪರಿಹರಿಸಲು ಕಷ್ಟ ಸಾಧ್ಯ ಎಂದರು. ಶಾಸಕ ಎಂ.ಶ್ರೀನಿವಾಸ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಡೀಸಿ ಡಾ.ಎಂ.ವಿ. ವೆಂಕಟೇಶ್, ಎಎಸ್ಪಿ ಶೋಭಾರಾಣಿ ಇದ್ದರು.