ಬೆಂಗಳೂರು: ನಗರದಲ್ಲಿ ಸುರಿದ ಮಳೆಗೆ ಕೆಂಗೇರಿ ಬಳಿಯ ವೃಷಭಾವತಿ ನದಿ ತಡೆಗೋಡೆ ಕುಸಿದಿದ್ದು, ಶುಕ್ರವಾರ ಮೇಯರ್ ಎಂ. ಗೌತಮ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 20 ವರ್ಷದ ಹಿಂದೆ ಸಿಟಿ ಮುನ್ಸಿಪಲ್ ಕಾರ್ಪೊರೇಷನ್(ಸಿಎಂಸಿ) ತಡೆಗೋ ಡೆ(ರಿಟೈನಿಂಗ್ ವಾಲ್) ನಿರ್ಮಿಸಿದ್ದು, ಆ ಬಳಿಕ ರಾಷ್ಟ್ರೀಯ ಹೆದ್ದಾರಿಯವರು ರಸ್ತೆ ಕಾಮಗಾರಿ ಮಾಡುವ ವೇಳೆ ಹಳೆ ತಡೆಗೋಡೆಯ ಮೇಲೆಯೆ ಹೊಸದಾಗಿ ರಕ್ಷಣಾ ತಡೆಗೋಡೆ ನಿರ್ಮಾಣ ಮಾಡಿದ್ದಾರೆ.
ಈ ಸಂಬಂಧ ಗುರುವಾರ ಸುರಿದ ಧಾರಾಕಾರ ಮಳೆಯಿಂದಾಗಿ ತಡೆಗೋಡೆ ಕುಸಿದಿದ್ದು, ತುರ್ತಾಗಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತಡೆಗೋಡೆ ಕುಸಿದಿರುವ ಪರಿಣಾಮ ರಸ್ತೆ ಮಾರ್ಗದ ಸ್ವಲ್ಪ ಭಾಗ ಹಾಳಾಗಿದ್ದು, ವಾಹನಗಳ ಓಡಾಟವನ್ನು ಆ ಮಾರ್ಗದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ರಸ್ತೆ ಕುಸಿಯದಂತೆ ಮರಳು ಮೂಟೆಗಳನ್ನು ಅಳವಡಿಸಲಾಗುತ್ತಿದ್ದು, ಮತ್ತೆ ಮಳೆಯಾದರೆ ರಸ್ತೆ ಕೊರೆಯದಂತೆ ಮುಂಜಾಗ್ರತೆ ವಹಿಸಲು ಹಾಗೂ ನೀರಿನ ಹರಿವು ಮಾರ್ಗ ಬದಲಾಯಿಸಲು ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಗುರವಾರದ ಜೋರು ಮಳೆಗೆ ತಡೆ ಗೋಡೆ ಕುಸಿದೆ. ಈ ಸಂಬಂಧ ಪಾಲಿಕೆ ಅಧಿಕಾರಿ ಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಹಾಗೂ ಮೆಟ್ರೋ ಅಧಿಕಾರಿಗಳ ಜತೆ ಕೂಡಲೆ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.
ತಡೆಗೋಡೆ ಕುಸಿದಿರುವ ರಸ್ತೆ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಈವೇಳೆಪಾಲಿಕೆಸದಸ್ಯವಿ.ವಿ.ಸತ್ಯನಾರಾಯಣ, ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ರಾಜರಾಜೇಶ್ವರಿ ನಗರ ವಲಯ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಉಪಸ್ಥಿತರಿದ್ದರು.